alex Certify BIG NEWS: ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣ ಶೇ. 96 ರಷ್ಟು ಹೆಚ್ಚಳ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣ ಶೇ. 96 ರಷ್ಟು ಹೆಚ್ಚಳ

ನವದೆಹಲಿ: ದೇಶದಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳ ದಾಖಲು ಪ್ರಮಾಣ ಶೇಕಡ 96ರಷ್ಟು ಹೆಚ್ಚಾಗಿವೆ. ರಾಷ್ಟ್ರೀಯ ಅಪರಾಧಗಳ ದಾಖಲಾತಿ ಬ್ಯೂರೋ((NCRB) ದತ್ತಾಂಶ ಉಲ್ಲೇಖಿಸಿ ‘ಮಕ್ಕಳ ಹಕ್ಕುಗಳು ಮತ್ತು ನೀವು’(CRY) ಸ್ವಯಂಸೇವಾ ಸಂಸ್ಥೆ ತನ್ನ ವರದಿಯಲ್ಲಿ ಈ ಕುರಿತಾಗಿ ಮಾಹಿತಿ ನೀಡಿದೆ.

2016 ರಿಂದ 2022ರ ಅವಧಿಯಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು 96ರಷ್ಟು ಹೆಚ್ಚಾಗಿವೆ ಎಂದು ಮಕ್ಕಳ ಹಕ್ಕುಗಳು ಮತ್ತು ನೀವು ಸಂಸ್ಥೆ ಮಾಹಿತಿ ನೀಡಿದೆ.

ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ ನಂತರ ದೌರ್ಜನ್ಯಗಳ ಕುರಿತು ಪ್ರಕರಣ ದಾಖಲು ಮಾಡುವ ಪ್ರಮಾಣ ಹೆಚ್ಚಾಗಿದೆ ಎಂದು CRY ಸಂಶೋಧನಾಂಶ ವಿಭಾಗದ ನಿರ್ದೇಶಕ ಶುಭೇಂದು ಭಟ್ಟಾಚಾರ್ಜಿ ಮಾಹಿತಿ ನೀಡಿದ್ದಾರೆ.

ಮೀಸಲಾದ ಸಹಾಯವಾಣಿಗಳು, ಆನ್‌ಲೈನ್ ಪೋರ್ಟಲ್‌ಗಳು ಮತ್ತು ವಿಶೇಷ ಏಜೆನ್ಸಿಗಳ ಮೂಲಕ ಹೆಚ್ಚಿದ ಪ್ರವೇಶದ ಜೊತೆಗೆ ವರದಿ ಮಾಡುವ ಕಾರ್ಯವಿಧಾನಗಳಲ್ಲಿ ನಂಬಿಕೆಯು ಸಂತ್ರಸ್ತರು ಮತ್ತು ಅವರ ಕುಟುಂಬಗಳನ್ನು ಮುಂದೆ ಹೆಜ್ಜೆ ಹಾಕಲು ಮತ್ತು ಅಂತಹ ಪ್ರಕರಣಗಳನ್ನು ವರದಿ ಮಾಡಲು ಪ್ರೋತ್ಸಾಹಿಸಿದೆ ಎಂದು ಅವರು ಹೇಳಿದ್ದಾರೆ.

ಕಾನೂನು ಸುಧಾರಣೆ, ವಿವಿಧ ಸಮುದಾಯಗಳು, ಸಂಘಟನೆಗಳ ಸಹಕಾರ, ಮಾಧ್ಯಮಗಳಲ್ಲಿ ದೌರ್ಜನ್ಯಗಳನ್ನು ಕೂಡಲೇ ವರದಿ ಮಾಡಿ ಸರ್ಕಾರದ ಗಮನ ಸೆಳೆಯುವ ಪ್ರಭಾವ ಮೊದಲಾದ ಕಾರಣಗಳಿಂದ ದೌರ್ಜನ್ಯದ ಮೇಲಿನ ಪ್ರಕರಣಗಳು ಹೆಚ್ಚಿನ ಪ್ರಮಾಣದಲ್ಲಿ ದಾಖಲಾಗುತ್ತಿವೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...