alex Certify ಖ್ಯಾತ ನಟನ ನಿವಾಸದ ಎದುರೇ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ……! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಖ್ಯಾತ ನಟನ ನಿವಾಸದ ಎದುರೇ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ……!

ಖ್ಯಾತ ತಮಿಳು ನಟ ಅಜಿತ್​ ಕುಮಾರ್​​ ನಿವಾಸದ ಎದುರು ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಅಜಿತ್​ ಕುಮಾರ್​ರನ್ನು ಭೇಟಿಯಾಗಲು ಸಾಧ್ಯವಾಗದ್ದಕ್ಕೆ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎನ್ನಲಾಗಿದೆ.

ಫರ್ಜಾನಾ ಎಂಬ ಮಹಿಳೆ ತೆಯ್ನಂಪೇಟೆಯ ಖಾಸಗಿ ಆಸ್ಪತ್ರೆಯ ಸಿಬ್ಬಂದಿಯಾಗಿದ್ದರು. 2020ರಲ್ಲಿ ಅಜಿತ್​ ಹಾಗೂ ಅವರ ಪತ್ನಿ ಶಾಲಿನಿ ಆಸ್ಪತ್ರೆಗೆ ಭೇಟಿ ನೀಡಿದ್ದರು. ಈ ವೇಳೆ ಫರ್ಜಾನಾ ಅಜಿತ್​ ದಂಪತಿಯ ವಿಡಿಯೋ ಚಿತ್ರೀಕರಿಸಿ ಸೋಶಿಯಲ್​ ಮೀಡಿಯಾದಲ್ಲಿ ಹರಿಬಿಟ್ಟಿದ್ದರು. ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿತ್ತು.

ಈ ಕಾರಣಕ್ಕೆ ಬೀದಿ ನಾಯಿಗಳಿಗೆ ಆಹಾರ ಕೊಡಬೇಡಿ ಎಂದಿದೆ ಹೈಕೋರ್ಟ್​..!

ಇದಾದ ಬಳಿಕ ಆಸ್ಪತ್ರೆ ನಿಯಮಾವಳಿಯ ಅನುಸಾರ ಫರ್ಜಾನಾರನ್ನು ಕೆಲಸದಿಂದ ವಜಾಗೊಳಿಸಲಾಗಿತ್ತು. ಇದಾದ ಬಳಿಕ ಶಾಲಿನಿಯನ್ನು ಸಂಪರ್ಕಿಸಿದ್ದ ಫರ್ಜಾನಾ ತಮ್ಮ ಕೆಲಸ ವಾಪಸ್​ ಸಿಗುವಂತೆ ಮಾಡಿ ಎಂದು ಕೇಳಲು ಯತ್ನಿಸಿದರೂ ಅದು ಪ್ರಯೋಜನವಾಗಿರಲಿಲ್ಲ.

ಮತ್ತೊಬ್ಬ ಮಹಿಳೆಯ ಜೊತೆ ಅಜಿತ್​ ನಿವಾಸಕ್ಕೆ ಆಗಮಿಸಿದ ಫರ್ಜಾನಾ ಅಜಿತ್​ ಕುಮಾರ್ ನಿವಾಸದ ಎದುರು ನಿಮ್ಮಿಂದಾಗಿ ನನ್ನ ಕೆಲಸ ಹೋಯ್ತು ಎಂದು ಕಿರಿಚಿದ್ದಾಳೆ. ಬಳಿಕ ನಟ ಅಜಿತ್​ ಕುಮಾರ್​ ನಿವಾಸದ ಎದುರೇ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಪೊಲೀಸರು ಮಹಿಳೆಯನ್ನು ರಕ್ಷಿಸಿದ್ದಾರೆ. ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...