alex Certify ಬೆಚ್ಚಿಬೀಳಿಸುತ್ತೆ ಈ ಸುದ್ದಿ: ಮೆಕ್‌ ​ಡೊನಾಲ್ಡ್,​​ ಬರ್ಗರ್​ ಕಿಂಗ್​​, ಪಿಜ್ಜಾಹಟ್​​ ಆಹಾರದಲ್ಲಿ ಡಿಟರ್ಜಂಟ್​​ ರಾಸಾಯನಿಕ ಪತ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಚ್ಚಿಬೀಳಿಸುತ್ತೆ ಈ ಸುದ್ದಿ: ಮೆಕ್‌ ​ಡೊನಾಲ್ಡ್,​​ ಬರ್ಗರ್​ ಕಿಂಗ್​​, ಪಿಜ್ಜಾಹಟ್​​ ಆಹಾರದಲ್ಲಿ ಡಿಟರ್ಜಂಟ್​​ ರಾಸಾಯನಿಕ ಪತ್ತೆ

ಜಂಕ್​ಫುಡ್​ಗಳ ಮೇಲೆ ಈಗಾಗಲೇ ನಡೆಸಲಾದ ಸಾಕಷ್ಟು ಅಧ್ಯಯನದಲ್ಲಿ ಈ ರೀತಿಯ ಆಹಾರಗಳು ಆರೋಗ್ಯಕ್ಕೆ ಹಾನಿಕರ ಎಂಬ ವಿಚಾರ ಪದೇ ಪದೇ ಸಾಬೀತಾಗುತ್ತಲೇ ಇದೆ. ಪಿಜ್ಜಾ, ಬರ್ಗರ್​ಗಳನ್ನು ಪ್ರತಿನಿತ್ಯ ಸೇವನೆ ಮಾಡುವುದರಿಂದ ಸ್ಥೂಲಕಾಯ ಸೇರಿದಂತೆ ನಾನಾ ಬಗೆಯ ಸಮಸ್ಯೆಗಳು ಶುರುವಾಗುತ್ತದೆ. ಇತ್ತೀಚಿಗೆ ನಡೆಸಿದ ಅಧ್ಯಯನವೊಂದರಲ್ಲಂತೂ ಈ ಜಂಕ್​ಫುಡ್​​ಗಳು ಉಸಿರಾಟ ಹಾಗೂ ಮೆದುಳು ಸಂಬಂಧಿ ಸಮಸ್ಯೆಗಳನ್ನು ತಂದೊಡ್ಡಬಲ್ಲದು ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿತ್ತು.

ವಾಷಿಂಗ್ಟನ್​​ ವಿಶ್ವವಿದ್ಯಾಲಯ, ಸೌತ್​ವೆಸ್ಟ್​​ ರಿಸರ್ಚ್​ ಇನ್​ಸ್ಟಿಟ್ಯೂಟ್​ , ಬೋಸ್ಟನ್ ಯುನಿವರ್ಸಿಟಿ ಹಾಗೂ ಹಾರ್ವಡ್​​ ಯೂನಿವರ್ಸಿಟಿ ನಡೆಸಿದ ಅಧ್ಯಯನವೊಂದರಲ್ಲಿ ಪ್ಲಾಸ್ಟಿಕ್​ ಮೃದು ಮಾಡಲು ಬಳಸಲಾಗುವ ರಾಸಾಯನಿಕವಾದ ಥಾಲೇಟ್‌ಗಳು ಪ್ರಸಿದ್ಧ ಮೆಕ್​ಡೊನಾಲ್ಡ್​, ಪಿಜ್ಜಾ ಹಟ್, ಬರ್ಗರ್‌ ಕಿಂಗ್‌, ಡೊಮಿನೋಸ್​, ಟ್ಯಾಕೋ ಬೆಲ್​ ಆಹಾರಗಳಲ್ಲಿ ಕಂಡುಬಂದಿದೆ ಎಂಬ ಶಾಕಿಂಗ್​ ಸತ್ಯ ಬಟಾಬಯಲಾಗಿದೆ.‌

ಈ ಜಂಕ್​ ಫುಡ್​ ಕಂಪನಿಗಳಿಂದ ಫ್ರೈಸ್​, ಚಿಕನ್​ ನಗೆಟ್ಸ್​, ಚೀಸ್​ ಪಿಜ್ಜಾ ಸೇರಿದಂತೆ ಸುಮಾರು 64 ವಿವಿಧ ಬಗೆಯ ಆಹಾರಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದರಲ್ಲಿ 80 ಪ್ರತಿಶತಕ್ಕೂ ಅಧಿಕ ಆಹಾರಗಳಲ್ಲಿ ಈ ಮಾರಣಾಂತಿಕ ರಾಸಾಯನಿಕ ಇರುವುದು ಪತ್ತೆಯಾಗಿದೆ.

ಥಾಲೆಟ್ ಎಂದರೇನು..?

ಥಾಲೆಟ್​ನಂತಹ ರಾಸಾಯನಿಕಗಳನ್ನು ಕಾಸ್ಮೆಟಿಕ್ಸ್​, ವಿನೈಲ್​ ಫ್ಲೋರ್​, ಡಿಟರ್ಜಂಟ್​, ಮರುಬಳಕೆಯಾಗದ ಗ್ಲೋವ್ಸ್​, ವೈರ್​​ನ ಕವರ್​ಗಳಲ್ಲಿ ಬಳಕೆ ಮಾಡಲಾಗುತ್ತದೆ. ಈ ರಾಸಾಯನಿಕಗಳನ್ನು ಪ್ಲಾಸ್ಟಿಕ್ ​ಗಳನ್ನು ಮೃದುವಾಗಿಸಲು ಬಳಕೆ ಮಾಡಲಾಗುತ್ತದೆ.

ಈ ರಾಸಾಯನಿಕಗಳ ಸೇವನೆಯಿಂದ ಅಸ್ತಮಾ, ಮಕ್ಕಳಲ್ಲಿ ಮೆದುಳಿನ ದುರ್ಬಲತೆ ಹಾಗೂ ಸಂತಾನೋತ್ಪತ್ತಿ ದುರ್ಬಲತೆಯಂತಹ ಗಂಭೀರ ಸಮಸ್ಯೆಗಳು ಉಂಟಾಗುತ್ತದೆ.

ಚೀಸ್​ ಬರ್ಗರ್​ನಂತಹ ಆಹಾರದಲ್ಲಿ ಈ ರಾಸಾಯನಿಕ ಅತಿ ಹೆಚ್ಚು ಪ್ರಮಾಣದಲ್ಲಿ ಕಂಡು ಬಂದಿದ್ದರೆ ಚೀಸ್​ ಪಿಜ್ಜಾದಲ್ಲಿ ಕಡಿಮೆ ಪ್ರಮಾಣದಲ್ಲಿ ಕಂಡು ಬಂದಿದೆ.

ಈ ಅಧ್ಯಯನದ ಸಂಬಂಧ ಎಫ್​ಡಿಎ ಪ್ರತಿಕ್ರಿಯೆ ನೀಡಿದ್ದು ಅಧ್ಯಯನದ ಬಗ್ಗೆ ಸಮೀಕ್ಷೆ ನಡೆಸುವುದಾಗಿ ಹೇಳಿದೆ. ಎಫ್​ಡಿಎ ಆಹಾರ ಸುರಕ್ಷತೆಯ ಬಗ್ಗೆ ಎಂದಿಗೂ ಕಾಳಜಿ ವಹಿಸುತ್ತದೆ. ಆದರೆ ಹೊಸ ಅಧ್ಯಯನವೊಂದರಲ್ಲಿ ಬಯಲಾದ ಮಾಹಿತಿಯು ಆಹಾರ ಸುರಕ್ಷತೆಯನ್ನು ಪ್ರಶ್ನಿಸುವಂತೆ ಮಾಡಿದೆ. ಹೀಗಾಗಿ ಈ ಬಗ್ಗೆ ಪರಿಶೀಲನೆ ನಡೆಯಲಿದೆ ಎಂದು ಎಫ್​ಡಿಎ ವಕ್ತಾರ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...