alex Certify ‘CET’ ಅರ್ಹತೆ ಪಡೆದ ವಿದ್ಯಾರ್ಥಿಗಳೇ ಗಮನಿಸಿ : ದಾಖಲೆಗಳ ಪರಿಶೀಲನೆಗೆ ವೇಳಾಪಟ್ಟಿ ಪ್ರಕಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘CET’ ಅರ್ಹತೆ ಪಡೆದ ವಿದ್ಯಾರ್ಥಿಗಳೇ ಗಮನಿಸಿ : ದಾಖಲೆಗಳ ಪರಿಶೀಲನೆಗೆ ವೇಳಾಪಟ್ಟಿ ಪ್ರಕಟ

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA)  ಯುಜಿ ಸಿಇಟಿ-2023ರ ವೃತ್ತಿಪರ ಕೋರ್ಸ್ಗಳ ಪ್ರವೇಶಾತಿಗೆ ರ್ಯಾಂಕ್ ಪಡೆದ ಅಭ್ಯರ್ಥಿಗಳಿಗೆ, ಆನ್ಲೈನ್ ಮೂಲಕ ದಾಖಲಾತಿ ಪರಿಶೀಲನೆಗೆ ದಿನಾಂಕವನ್ನು ಪ್ರಕಟಿಸಿದೆ.

ಅರ್ಹತಾ ಕಂಡಿಕೆ ‘ಎ’ ಷರತ್ತುಗಳನ್ನು ಪೂರೈಸುವ ಎಲ್ಲಾ ಅಭ್ಯರ್ಥಿಗಳು ಸೀಟು ಹಂಚಿಕೆಗೆ ಅರ್ಹತೆ ಪಡೆಯುವುದಕ್ಕಾಗಿ, ಅಭ್ಯರ್ಥಿಗಳು ವ್ಯಾಸಂಗ ಮಾಡಿದ ಶಾಲೆಯ ವ್ಯಾಪ್ತಿಯಲ್ಲಿರುವ / ಕಾಲೇಜುಗಳಿಗೆ ನಿಗದಿಯಾಗಿರುವ ಸಂಬಂಧಿಸಿದ ಕ್ಷೇತ್ರ ಶಿಕ್ಷಣಧಿಕಾರಿಗಳ ಕಚೇರಿಗೆ ಇಂಜಿನಿಯರಿಂಗ್ ರ್ಯಾಂಕ್ ಆಧಾರದ ಮೇಲೆ ನಿಗದಿಪಡಿಸಿದ ದಿನಾಂಕಗಳಂದು ದಾಖಲಾತಿ ಪರಿಶೀಲನೆಗೆ ಹಾಜರಾಗುವಂತೆ ತಿಳಿಸಿದೆ.

ವಿವಿಧ ವ್ಯಾಸಂಗ ಪ್ರಮಾಣ ಪತ್ರ ಪರಿಶೀಲನೆ, ಆನ್ಲೈನ್ ದಾಖಲಾತಿ ಪರಿಶೀಲನೆಯ ಬಗ್ಗೆ ಪ್ರಾಧಿಕಾರದ ವೆಬ್ಸೈಟಿನಲ್ಲಿ ಪೋಸ್ಟ್ ಮಾಡಿರುವ ಸೂಚನೆಗಳನ್ನು ಮತ್ತು ಮಾರ್ಗದರ್ಶನಗಳನ್ನು ಅಭ್ಯರ್ಥಿಗಳು ಮತ್ತು ಪೋಷಕರು ಓದಿಕೊಳ್ಳುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಧಿಸೂಚನೆ ಹೊರಡಿಸಿದೆ. ದಿನಾಂಕ 27-06-2023 ರಿಂದ 15-07-2023 ರವರೆಗೆ ಆನ್ಲೈನ್ ಮೂಲಕ ದಾಖಲಾತಿ ಪರಿಶೀಲನೆ ಮಾಡಲು ಕೆಇಎ ದಿನಾಂಕವನ್ನು ನಿಗದಿಪಡಿಸಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...