alex Certify ಡೊನಾಲ್ಡ್ ಟ್ರಂಪ್ 36 ಗಂಟೆಗಳ ಪ್ರವಾಸಕ್ಕೆ 38 ಲಕ್ಷ ರೂಪಾಯಿ ವೆಚ್ಚ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡೊನಾಲ್ಡ್ ಟ್ರಂಪ್ 36 ಗಂಟೆಗಳ ಪ್ರವಾಸಕ್ಕೆ 38 ಲಕ್ಷ ರೂಪಾಯಿ ವೆಚ್ಚ….!

ಈ ಹಿಂದೆ ಅಮೆರಿಕ ಅಧ್ಯಕ್ಷರಾಗಿದ್ದ ಡೊನಾಲ್ಡ್ ಟ್ರಂಪ್ 2020ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದು, ಈ ಸಂದರ್ಭದಲ್ಲಿ ಅವರು ರೋಡ್ ಶೋ, ನಮಸ್ತೆ ಟ್ರಂಪ್ ಮೊದಲಾದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು.

ಅವರ 36 ಗಂಟೆಗಳ ಪ್ರವಾಸಕ್ಕೆ 38 ಲಕ್ಷ ರೂಪಾಯಿ ವೆಚ್ಚ ಮಾಡಲಾಗಿದೆ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಕೇಂದ್ರ ಮಾಹಿತಿ ಆಯೋಗಕ್ಕೆ ತಿಳಿಸಿದೆ.

2020 ರ ಫೆಬ್ರವರಿ 24, 25 ರಂದು ಡೊನಾಲ್ಡ್ ಟ್ರಂಪ್ ಭಾರತಕ್ಕೆ ಭೇಟಿ ನೀಡಿದ್ದು ಈ ಸಂದರ್ಭದಲ್ಲಿ ಅವರೊಂದಿಗೆ ಪತ್ನಿ ಮೆಲಾನಿಯಾ, ಮಗಳು ಇವಾಂಕ ಸೇರಿದಂತೆ ಹಲವರು ಇದ್ದರು. ಇವರುಗಳ ವಾಸ್ತವ್ಯ, ಊಟ, ಪ್ರಯಾಣ ಮತ್ತಿತರ ಸೌಕರ್ಯಕ್ಕಾಗಿ ಇಷ್ಟು ಹಣ ವೆಚ್ಚವಾಗಿರುವುದಾಗಿ ತಿಳಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...