alex Certify ದೇಶದ ಜನತೆಗೆ ಭರ್ಜರಿ ಗುಡ್ ನ್ಯೂಸ್: ಕೊರೊನಾ ಲಸಿಕೆಗೆ ನೋಂದಣಿ ಮಾಡಲು ಅವಕಾಶ ನೀಡಿದ ಕೇಂದ್ರ ಸರ್ಕಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೇಶದ ಜನತೆಗೆ ಭರ್ಜರಿ ಗುಡ್ ನ್ಯೂಸ್: ಕೊರೊನಾ ಲಸಿಕೆಗೆ ನೋಂದಣಿ ಮಾಡಲು ಅವಕಾಶ ನೀಡಿದ ಕೇಂದ್ರ ಸರ್ಕಾರ

ಕೊರೊನಾ ಲಸಿಕೆಗಾಗಿ ತಮ್ಮ ಹೆಸರನ್ನ ನೋಂದಾಯಿಸಲು ಕೇಂದ್ರ ಆರೋಗ್ಯ ಸಚಿವಾಲಯ ಮೊಬೈಲ್​ ಅಪ್ಲಿಕೇಶನ್​ ಸೇರಿದಂತೆ ಡಿಜಿಟಲ್​ ಫ್ಲಾಟ್​ಫಾರ್ಮ್​ನ್ನು ಅಭಿವೃದ್ಧಿಪಡಿಸಿದೆ. ಈ ಸಂಬಂಧ ಮಾತನಾಡಿದ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್​ ಭೂಷಣ್​, ಕೋವಿನ್​ ಎಂಬ ಅಪ್ಲಿಕೇಶನ್​ ಮೂಲಕ ನೀವು ಕೊರೊನಾ ಲಸಿಕೆಗೆ ನೊಂದಾಯಿಸಿಕೊಳ್ಳಬಹುದಾಗಿದೆ ಎಂದು ಹೇಳಿದ್ದಾರೆ.
ಕೋವಿನ್​ ಡಿಜಿಟಲ್​ ಫ್ಲಾಟ್​ಫಾರ್ಮ್ ಲಸಿಕೆ ಡೇಟಾವನ್ನ ದಾಖಲು ಮಾಡಲು ಸಹಾಯ ಮಾಡಬಲ್ಲ ಮೊಬೈಲ್​ ಅಪ್ಲಿಕೇಶನ್​ನ್ನು ಹೊಂದಿದೆ. ಈ ಲಸಿಕೆ ಪಡೆಯಬೇಕು ಎಂದು ಬಯಸಿದವರು ಇಲ್ಲಿ ತಮ್ಮನ್ನ ತಾವು ನೋಂದಾಯಿಸಿಕೊಳ್ಳಬಹುದು. ಕೋ ವಿನ್​ ಅಪ್ಲಿಕೇಶನ್​ನಲ್ಲಿ 5 ಬಗೆಗಳಿಗೆ. ನಿರ್ವಾಹಕ ಮಾಡ್ಯೂಲ್​, ನೋಂದಣಿ ಮಾಡ್ಯೂಲ್​, ವ್ಯಾಕ್ಸಿನೇಷನ್​ ಮಾಡ್ಯೂಲ್​ , ಫಲಾನುಭವಿ ಸ್ವೀಕೃತಿ ಮಾಡ್ಯೂಲ್​ ಹಾಗೂ ವರದಿ ಮಾಡ್ಯೂಲ್​ ಎಂಬ ಐದು ವಿಭಾಗವಿದೆ ಎಂದು ಅವರು ಮಾಹಿತಿ ನೀಡಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...