alex Certify ವಾಹನ ಸಂಚಾರದ ಮಧ್ಯೆಯೇ ‌ʼಹೈವೇʼ ಯಲ್ಲಿ ವಿಮಾನ ಲ್ಯಾಂಡಿಂಗ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಾಹನ ಸಂಚಾರದ ಮಧ್ಯೆಯೇ ‌ʼಹೈವೇʼ ಯಲ್ಲಿ ವಿಮಾನ ಲ್ಯಾಂಡಿಂಗ್

ಜನನಿಬಿಡ ಹೆದ್ದಾರಿಯಲ್ಲಿ ವಿಮಾನವೊಂದು ತುರ್ತು ಭೂಸ್ಪರ್ಶ ಮಾಡಿದ್ದು, ಈ ಅಪರೂಪದ, ನಂಬಲಾಗದ ಕ್ಷಣ ವಿಮಾನದ ರೆಕ್ಕೆಯ ಮೇಲೆ ಇರಿಸಲಾದ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಜುಲೈ3 ರಂದು ಪೈಲಟ್​ ವಿಸೆಂಟ್​ ಫ್ರೇಸರ್​ ತನ್ನ ಮಾವನೊಂದಿಗೆ ಸಿಂಗಲ್​ ಎಂಜಿನ್​ ವಿಮಾನವನ್ನು ಹಾರಿಸುತ್ತಿದ್ದಾಗ ವಿಮಾನದ ಎಂಜಿನ್​ ಕೈಕೊಡಲು ಆರಂಭಿಸಿತು. ಈ ಸಂದರ್ಭದಲ್ಲಿ ಎದುರಿಗೆ ಕಾಣಿಸಿದೆ ಉತ್ತರ ಕೆರೊಲಿನಾದ ಫೋರ್​-ಲೇನ್​ ಹೆದ್ದಾರಿಯಲ್ಲಿ ತುರ್ತು ಭೂ ಸ್ಪರ್ಶ ಮಾಡಲೇಬೇಕಾಯಿತು.

ಈ ಅಪರೂಪದ ಸನ್ನಿವೇಶದ ಹಾಗೂ ಆತಂಕದಲ್ಲಿ ಲ್ಯಾಂಡ್​ ಮಾಡಿದ ವಿಡಿಯೋವನ್ನು ಫೇಸ್​ಬುಕ್​ನಲ್ಲಿ ಹಂಚಿಹಂಚಿಕೊಂಡಿದ್ದಾರೆ.

ಆ ವಿಡಿಯೋ ಕ್ಲಿಪ್​ನಲ್ಲಿ ವಿಮಾನವು ತೀರಾ ಕೆಳಮಟ್ಟದಲ್ಲಿ ಕೆಳಕ್ಕೆ ಹಾರುತ್ತಿರುವಂತೆ ಕಾಣುತ್ತದೆ, ರಸ್ತೆಯಲ್ಲಿ ಹಲವಾರು ಕಾರುಗಳ ಸಾಗುವುದೂ ಸಹ ಕಾಣಿಸುತ್ತದೆ. ವಿದ್ಯುತ್​ ತಂತಿಗಳಲೂ ಕಾಣಿಸುತ್ತದೆ. ಈ ನಡುವೆಯೂ ಫ್ರೇಸರ್​ ವಿಮಾನವನ್ನು ರಸ್ತೆಯ ಮೇಲೆ ಸರಾಗವಾಗಿ ಇಳಿಸಲು ಸಾಧ್ಯವಾಯಿತು. ಕೊನೆಯಲ್ಲಿ ವಿಮಾನ ಹೆದ್ದಾರಿಯಿಂದ ಪಕ್ಕದ ರಸ್ತೆಗೆ ತಿರುಗಿನಿಂತಿತು.

ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋಗೆ ಸಾಕಷ್ಟು ಪ್ರತಿಕ್ರಿಯೆ ಬಂದಿದೆ. “ಅತ್ಯುತ್ತಮ” ಲ್ಯಾಂಡಿಂಗ್​ ಅನ್ನು ಶ್ಲಾಘಿಸಿದೆ. ದುರಂತವಾಗಬಹುದಾದ ಹಲವು ವಿಷಯಗಳಿದ್ದವು ಆದರೆ ಅವು ಸಂಭವಿಸಲಿಲ್ಲ ಎಂದು ಕೆಲವರು ಅಚ್ಚರಿಪಟ್ಟಿದ್ದಾರೆ.

ವಿನ್ಸೆಂಟ್​ ಫ್ರೇಸರ್​ ಅವರು ಫ್ಲೋರಿಡಾದ ಮರೈನ್​ ಕ್ಷೇತ್ರದಲ್ಲಿ ಪರಿಣತರಾಗಿದ್ದಾರೆ. ಇತ್ತೀಚೆಗೆ ಪೈಲಟ್​ ಪರವಾನಗಿಯನ್ನು ಪಡೆದರು. ಸುಮಾರು ಒಂದು ವರ್ಷದ ವಿಮಾನ ಹಾರಾಟದ ಅನುಭವವನ್ನು ಹೊಂದಿದ್ದಾರೆ.

ಈ ಕ್ಷಣವನ್ನು ನೆನಪಿಸಿಕೊಂಡು ಪ್ರತಿಕ್ರಿಯೆ ನೀಡಿರುವ ಫ್ರೇಸರ್​ ವಿಂಕ್​, ನಾನು ಜೆಫ್​ (ಮಾವ) ರನ್ನು ಉಳಿಸಬೇಕಾಗಿತ್ತು, ಭೂಮಿ ಮೇಲೆ ಜನರನ್ನು ಉಳಿಸುವುದು ನನ್ನ ಉದ್ದೇಶವಾಗಿತ್ತು. ಸಾಧ್ಯವಾದಷ್ಟು ಕಡಿಮೆ ಹಾನಿಯಾಗುವಂತೆ ನೋಡಿಕೊಳ್ಳುವ ಪ್ರಯತ್ನ ಮಾಡಿದೆ ಎಂದಿದ್ದಾರೆ.

ಜಾಲತಾಣ ಬಳಕೆದಾರರು ಹೊಸ ಪೈಲಟ್​ ಅವರ ಅದ್ಭುತ ಕೆಲಸವನ್ನು ಪ್ರಶಂಸಿಸಿದ್ದಾರೆ. “ಇದು ಅದ್ಭುತವಾಗಿದೆ! ಹೆದ್ದಾರಿಯಲ್ಲಿ ಕಾರು ಓಡಿಸುವುದಕ್ಕಿಂತ ಉತ್ತಮವಾಗಿ ಹೆದ್ದಾರಿಯಲ್ಲಿ ವಿಮಾನವನ್ನು ಓಡಿಸಿದರು ಎಂದು ಒಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...