alex Certify ಚುನಾವಣೆಯಲ್ಲಿ ಹಣದ ಹೊಳೆ: 3 ಗೋಣಿ ಚೀಲದಲ್ಲಿತ್ತು ಕೋಟಿ ಕೋಟಿ ನಗದು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚುನಾವಣೆಯಲ್ಲಿ ಹಣದ ಹೊಳೆ: 3 ಗೋಣಿ ಚೀಲದಲ್ಲಿತ್ತು ಕೋಟಿ ಕೋಟಿ ನಗದು

ಕೋಲಾರ: ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಹಂಚಾಳ ಗ್ರಾಮದ ಬಳಿ ಇರುವ ವಿಲ್ಲಾ ಸಮೀಪ ಮತ್ತೆ ಕೋಟಿ ಕೋಟಿ ನಗದು ಜಪ್ತಿ ಮಾಡಲಾಗಿದೆ.

ವಿಲ್ಲಾ ಸಮೀಪ ಬಿಟ್ಟು ಹೋಗಿದ್ದ ಕಾರಿನಲ್ಲಿ ಮೂರು ಗೋಣಿ ಚೀಲದಲ್ಲಿ ಹಣ ಪತ್ತೆಯಾಗಿದೆ. ಜಿಯೋನ್ ಹಿಲ್ಸ್ ಗಾಲ್ಪ್ ರೆಸಾರ್ಟ್ ವಿಲ್ಲಾದಲ್ಲಿ ಹಣ ಪತ್ತೆಯಾಗಿದೆ.  ರಿಯಲ್ ಎಸ್ಟೇಟ್ ಉದ್ಯಮಿ ರಮೇಶ ಎಂಬುವರಿಗೆ ಸೇರಿದ ವಿಲ್ಲಾದಲ್ಲಿ ಹಣ ಪತ್ತೆಯಾಗಿದೆ. ಪೊಲೀಸರು ದಾಳಿ ನಡೆಸಿದ ವೇಳೆ ವಿಲ್ಲಾ ಸಮೀಪ ಕಾರ್ ಬಿಟ್ಟು ಕೆಲವರು ಪರಾರಿಯಾಗಿದ್ದರು. ಬಿಟ್ಟು ಹೋಗಿದ್ದ ಕಾರ್ ಲಾಕ್ ಓಪನ್ ಮಾಡಿದಾಗ ಕೋಟಿಗೂ ಅಧಿಕ ಹಣ ಪತ್ತೆಯಾಗಿದೆ. ಚುನಾವಣಾಧಿಕಾರಿಗಳು ಹಣ ಲೆಕ್ಕ ಹಾಕುತ್ತಿದ್ದಾರೆ.

ಹಂಚಾಳ ಸಮೀಪ ಇರುವ ರೆಸಾರ್ಟ್ ನಲ್ಲಿ ಮೊದಲಿಗೆ 2.5 ಕೋಟಿ ರೂಪಾಯಿ ಹಣ ಪತ್ತೆಯಾಗಿತ್ತು. ನಂತರ ಕೋಟಿಗೂ ಅಧಿಕ ಹಣ ಪತ್ತೆಯಾಗಿದೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...