alex Certify ಆರ್ಡರ್​ ಮಾಡಿದ್ದು 50 ಇಂಚಿನ ಟಿ.ವಿ. ಮನೆಗೆ ಬಂದದ್ದು 44 ಇಂಚಿನದ್ದು: ಹೀಗೊಂದು ಆನ್​ಲೈನ್​ ವಂಚನೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆರ್ಡರ್​ ಮಾಡಿದ್ದು 50 ಇಂಚಿನ ಟಿ.ವಿ. ಮನೆಗೆ ಬಂದದ್ದು 44 ಇಂಚಿನದ್ದು: ಹೀಗೊಂದು ಆನ್​ಲೈನ್​ ವಂಚನೆ….!

ಆನ್​ಲೈನ್​ನಲ್ಲಿ ವಸ್ತುಗಳನ್ನು ಆರ್ಡರ್​ ಮಾಡಿದಾಗ ಆಗಾಗ್ಗೆ ಮೋಸ ಆಗುತ್ತಿರುವ ಬಗ್ಗೆ ವರದಿಯಾಗುತ್ತಲೇ ಇರುತ್ತದೆ. ಏನೋ ಆರ್ಡರ್​ ಮಾಡಿದರೆ ಇನ್ನೇನೋ ಬರುವುದು ಇದೆ. ಆದರೆ ಇಲ್ಲೊಂದು ಪ್ರಕರಣದಲ್ಲಿ ಆರ್ಡರ್​ ಮಾಡಿದಂತೆ ಟಿ.ವಿ. ಬಂದರೂ ಅದರ ಅಳತೆಯಲ್ಲಿ ಭಾರಿ ಮೋಸವಾಗಿರುವುದು ಬೆಳಕಿಗೆ ಬಂದಿದೆ.

ವ್ಯಕ್ತಿಯೊಬ್ಬರು ಆನ್‌ಲೈನ್‌ನಲ್ಲಿ 50-ಇಂಚಿನ ಸ್ಯಾಮ್‌ಸಂಗ್ ಟಿವಿಯನ್ನು ಆರ್ಡರ್​ ಮಾಡಿದ್ದರು. ಅಮೇಜಾನ್​ನಲ್ಲಿ ಅವರು ಈ ಟಿ.ವಿಯ ಮೊತ್ತವನ್ನೂ ಪಾವತಿ ಮಾಡಿದ್ದರು. ಆದರೆ ಮನೆಗೆ ಬಂದಾಗ ಟಿ.ವಿ. ಚಿಕ್ಕದಂತೆ ತೋರಿತು. ಅನುಮಾನಗೊಂಡು ಅಳತೆ ಮಾಡಿದಾಗ ಅದು 44 ಇಂಚಿನದ್ದು ಎಂದು ತಿಳಿದಿದೆ.

‘ನಾನು “Samsung 8 ಸರಣಿ TU8000 50 ಅನ್ನು ಖರೀದಿಸಿದ್ದೆ. ಆದರೆ ಮನೆಗೆ ಬಂದಾಗ ಸಂದೇಹ ಬಂದು ಅಳತೆ ಮಾಡಿದಾಗ ನಾನು ಮೋಸ ಹೋಗಿರುವ ಬಗ್ಗೆ ತಿಳಿದೆ. ನನಗೆ ಸಂದೇಹ ಬರಲು ಇನ್ನೊಂದು ಕಾರಣವಿತ್ತು. ಅದೇನೆಂದರೆ ಟಿ.ವಿ. ಪ್ಯಾಕ್​ ಮಾಡಿದ ಬಾಕ್ಸ್​ 49 ಇಂಚಿನದ್ದಾಗಿತ್ತು. ಅದರಲ್ಲಿ 50 ಇಂಚಿನ ಟಿ.ವಿ. ಹಿಡಿಯಲು ಹೇಗೆ ಸಾಧ್ಯ? ಇದರಲ್ಲಿ ಭಾರಿ ಮೋಸ ನಡೆದಿದೆ ಎಂದು ಗ್ರಾಹಕ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...