alex Certify ಕಡಿಮೆ ಬಂಡವಾಳದಲ್ಲಿ ದೊಡ್ಡ ರಿಟರ್ನ್ಸ್ ಕೊಡುತ್ತೆ ಈ ಬ್ಯುಸಿನೆಸ್….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಡಿಮೆ ಬಂಡವಾಳದಲ್ಲಿ ದೊಡ್ಡ ರಿಟರ್ನ್ಸ್ ಕೊಡುತ್ತೆ ಈ ಬ್ಯುಸಿನೆಸ್….!

ಉದ್ಯಮವೊಂದನ್ನು ಆರಂಭಿಸಲು ನೀವು ಚಿಂತಿಸುತ್ತಿದ್ದರೆ ನಿಮಗೆ ಇಲ್ಲಿದೆ ಒಂದು ಐಡಿಯಾ. ಈ ಬ್ಯುಸಿನೆಸ್ ಶುರು ಮಾಡಲು ನಿಮಗೆ ಸಣ್ಣದೊಂದು ಹೂಡಿಕೆ ಸಾಕು, ದೊಡ್ಡ ರಿಟರ್ನ್ಸ್ ನಿಮ್ಮದಾಗಲಿದೆ. ಅದೂ ಅಲ್ಲದೇ ಈ ಬ್ಯುಸಿನೆಸ್ ಶುರು ಮಾರುವುದು ಸುಲಭವೂ ಹೌದು.

ಟೊಮ್ಯಾಟೋ ಫಾರ್ಮಿಂಗ್ ಉದ್ಯಮವು ಲಾಕ್‌ಡೌನ್ ಅವಧಿಯಲ್ಲೂ ಸಹ ಭಾರೀ ಉತ್ತಮವೆಂದು ಸಾಬೀತಾಗಿದೆ. ಹಳ್ಳಿಗಳಿಂದ ಹಿಡಿದು ನಗರಗಳವರೆಗೂ ಟೊಮ್ಯಾಟೋಗೆ ಎಲ್ಲೆಡೆ ಬೇಡಿಕೆ ಇದೆ. ನಿಮ್ಮಲ್ಲಿ ಪುಟ್ಟ ಜಮೀನಿದ್ದು, ಕೃಷಿಯಲ್ಲಿ ಆಸಕ್ತಿ ಇದ್ದಲ್ಲಿ, ನೀವು ಫಾರ್ಮಿಂಗ್‌ಗೆ ಜಮೀನು ಬಾಡಿಗೆ ಕೊಟ್ಟು ಸಹ ದುಡ್ಡು ಮಾಡಬಹುದಾಗಿದೆ.

ಸಾಮಾನ್ಯವಾಗಿ ವರ್ಷಕ್ಕೆ ಎರಡು ಬಾರಿ ಮಾಡಲಾಗುವ ಟೊಮ್ಯಾಟೋ ಕೃಷಿಯ ಮೊದಲ ಸೀಸನ್ ಜುಲೈ-ಆಗಸ್ಟ್‌ನಲ್ಲಿ ಆರಂಭಗೊಂಡು ಫೆಬ್ರವರಿ-ಮಾರ್ಚ್‌ವರೆಗೂ ಮುಂದುವರೆಯಲಿದೆ. ಎರಡನೇ ಸೀಸನ್ ನವೆಂಬರ್‌-ಡಿಸೆಂಬರ್‌ನಲ್ಲಿ ಆರಂಭಗೊಂಡು ಜೂನ್-ಜುಲೈವರೆಗೂ ಚಾಲ್ತಿಯಲ್ಲಿರಲಿದೆ.

ವಿವಾಹಿತೆ ಜೊತೆ ಅಕ್ರಮ ಸಂಬಂಧ ಬೆಳೆಸಿದ್ದ 17ರ ಹುಡುಗ….! ಗಲಾಟೆ ನಂತ್ರ ಮಾಡಿದ್ದೇನು ಗೊತ್ತಾ….?

ಟೊಮ್ಯಾಟೋ ಕೃಷಿಯಲ್ಲಿ ಮೊದಲು ಬೀಜಗಳನ್ನು ನರ್ಸರಿಯಲ್ಲಿ ಉತ್ಪಾದಿಸಲಾಗುವುದು. ಇದಾದ ತಿಂಗಳಿಗೆ ನರ್ಸರಿ ಸಸಿಗಳು ಕೃಷಿ ಭೂಮಿಯಲ್ಲಿ ಬಿತ್ತಲು ಸಜ್ಜಾಗುತ್ತವೆ. ಒಂದು ಹೆಕ್ಟೇರ್‌ ಕೃಷಿ ಭೂಮಿಯಲ್ಲಿ 15,000 ಸಸಿಗಳನ್ನು ನೆಡಬಹುದು. ಸಸಿಗಳನ್ನು ನೆಟ್ಟ 2-3 ತಿಂಗಳಲ್ಲಿ ಟೊಮ್ಯಾಟೋಗಳು ಕಾಣಸಿಗಲಿವೆ. ಟೊಮ್ಯಾಟೋ ಬೆಳೆಗಳು 9-10 ತಿಂಗಳವರೆಗೂ ಬಾಳಿಕೆ ಬರುತ್ತವೆ.

ಬೀಜಗಳಿಗೆ 40-50 ಸಾವಿರ ರೂ. ಖರ್ಚಾದರೆ, ತಂತಿಗಳಿಗೆ 25-30 ಸಾವಿರ ರೂ, ಬೊಂಬುಗಳಿಗೆ 40-45 ಸಾವಿರ ರೂಗಳು, ಮಲ್ಚಿಂಗ್ ಪೇಪರ್‌ ಮತ್ತು ಆಳು-ಕಾಳಿನ ವೆಚ್ಚ 20,000-25,000ರೂಗಳವರೆಗೂ ಆಗುತ್ತದೆ.

ಮತ್ತೊಂದೆಡೆ, ನಿಮ್ಮ ಇಳುವರಿ ಎಕರೆಗೆ 300-500 ಕ್ವಿಂಟಾಲ್‌ನಷ್ಟು ಬಂದರೆ, ಹೆಕ್ಟೇರ್‌ಗೆ 800-1200 ಕ್ವಿಂಟಾಲ್‌ನಷ್ಟು ಟೊಮ್ಯಾಟೋ ಇಳುವರಿ ಪಡೆಯಬಹುದಾಗಿದೆ.

ಟೊಮ್ಯಾಟೋವನ್ನು ಸರಾಸರಿ ಕೆಜಿಗೆ 15ರೂನಂತೆ ಮಾರಾಟ ಮಾಡಿದರೆ 1000 ಕ್ವಿಂಟಾಲ್ ಉತ್ಪಾದನೆಯಾದಲ್ಲಿ ನೀವು 15 ಲಕ್ಷ ರೂಗಳಷ್ಟನ್ನು ಸಂಪಾದಿಸಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...