alex Certify ಕಾರ್ಮಿಕರಿಗೆ ಗುಡ್ ನ್ಯೂಸ್: ಉಚಿತ ಬಸ್ ಪಾಸ್ ನೀಡಿಕೆ ಇನ್ನೊಂದು ತಿಂಗಳಲ್ಲಿ ಆರಂಭ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾರ್ಮಿಕರಿಗೆ ಗುಡ್ ನ್ಯೂಸ್: ಉಚಿತ ಬಸ್ ಪಾಸ್ ನೀಡಿಕೆ ಇನ್ನೊಂದು ತಿಂಗಳಲ್ಲಿ ಆರಂಭ

ಬೆಂಗಳೂರು: ಕಟ್ಟಡ ಕಾರ್ಮಿಕರಿಗೆ ಇನ್ನೊಂದು ತಿಂಗಳಲ್ಲಿ ಉಚಿತವಾಗಿ ಬಸ್ ಪಾಸ್ ವಿತರಣೆ ಕಾರ್ಯ ಆರಂಭವಾಗಲಿದೆ.

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಮಂಡಳಿ ನಿಯಮದಲ್ಲಿ ಕಾರ್ಮಿಕರ ಮಕ್ಕಳಿಗೆ ಮಾತ್ರ ಉಚಿತ ಬಸ್ ಪಾಸ್ ನೀಡಬೇಕೆಂದು ಸೂಚಿಸಲಾಗಿದ್ದು, ಇದಕ್ಕೆ ಕಾರ್ಮಿಕರಿಗೂ ಉಚಿತ ಪಾಸ್ ನೀಡಬೇಕು ಎಂಬುದನ್ನು ಸೇರಿಸಿ ತಿದ್ದುಪಡಿ ಮಾಡಬೇಕಾಗಿದೆ. ಹೀಗಾಗಿ ಪಾಸ್ ವಿತರಣೆ ವಿಳಂಬವಾಗಿದೆ.

ನಿಯಮ ತಿದ್ದುಪಡಿಗೆ ಸರ್ಕಾರಕ್ಕೆ ಕಡತ ರವಾನಿಸಲಾಗಿದ್ದು, ಸರ್ಕಾರದಿಂದ ತಿದ್ದುಪಡಿಯಾದ ಕೂಡಲೇ ಕಾರ್ಮಿಕರಿಗೆ ಬಸ್ ಪಾಸ್ ವಿತರಣೆ ಕಾರ್ಯ ಮುಂದಿನ ತಿಂಗಳಿಂದ ಆರಂಭವಾಗಲಿದೆ ಎಂದು ಹೇಳಲಾಗಿದೆ.

ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಅವರು ಕಟ್ಟಡ ಕಾರ್ಮಿಕರು ವಾಸದ ಸ್ಥಳದಿಂದ ಉದ್ಯೋಗಕ್ಕೆ ತೆರಳಲು 50 ಕಿಲೋಮೀಟರ್ ವರೆಗೂ ಸಂಚರಿಸಲು ಉಚಿತವಾಗಿ ಪಾಸ್ ನೀಡಲಾಗುವುದು ಎಂದು ಹೇಳಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...