alex Certify ಮಹಿಳಾ ದಿನಾಚರಣೆಯಂದು ವಿವಾದಾತ್ಮಕ ಟ್ವೀಟ್​ ಮೂಲಕ ಪೇಚಿಗೆ ಸಿಲುಕಿದ ಬರ್ಗರ್ ಕಿಂಗ್​ ಸಂಸ್ಥೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳಾ ದಿನಾಚರಣೆಯಂದು ವಿವಾದಾತ್ಮಕ ಟ್ವೀಟ್​ ಮೂಲಕ ಪೇಚಿಗೆ ಸಿಲುಕಿದ ಬರ್ಗರ್ ಕಿಂಗ್​ ಸಂಸ್ಥೆ..!

ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ವಿವಾದಾತ್ಮಕ ಟ್ವೀಟ್​ ​ ಮಾಡಿದ್ದ ಯುಕೆಯ ಬರ್ಗರ್ ಕಿಂಗ್​ ವ್ಯಾಪಕ ಟೀಕೆಗೆ ಗುರಿಯಾದ ಬಳಿಕ ಟ್ವೀಟ್​ನ್ನು ಅಳಿಸಿ ಹಾಕಿದ್ದು ಮಾತ್ರವಲ್ಲದೇ ಜನತೆಯ ಬಳಿ ಕ್ಷಮೆಯಾಚಿಸಿದೆ.

ಅಂತಾರಾಷ್ಟ್ರೀಯ ಮಹಿಳಾ ದಿನದಂದು ಬರ್ಗರ್​ ಕಿಂಗ್​​ ಮಹಿಳೆಯರು ಅಡುಗೆ ಮನೆಗೆ ಸೇರಿದವರು ಎಂಬರ್ಥದಲ್ಲಿ ಟ್ವೀಟ್​ ಮಾಡಿತ್ತು .

ನಾವು ಕ್ಷಮೆಯಾಚಿಸಿದ ಬಳಿಕ ಟ್ವೀಟ್​ ಡಿಲೀಟ್​ ಮಾಡೋದಾಗಿ ನಿರ್ಧರಿಸಿದ್ದೇವೆ. ನಾವು ಸಾಕಷ್ಟು ಕಮೆಂಟ್​ಗಳನ್ನ ನೋಡಿದ್ದೇವೆ. ನಾವು ನಿಮ್ಮ ಮಾತನ್ನ ಕೇಳ್ತೇವೆ. ನಾವು ಮಾಡಿದ ಮೊದಲ ಟ್ವೀಟ್​ ತಪ್ಪಾಗಿದೆ. ಕ್ಷಮೆ ಇರಲಿ. ಯುಕೆಯಲ್ಲಿ 20 ಪ್ರತಿಶತ ಮಾತ್ರ ವೃತ್ತಿಪರ ಬಾಣಸಿಗರು ಇದ್ದಾರೆ ಎಂಬ ಅಂಶವನ್ನ ಗಮನ ಸೆಳೆಯೋದು ಹಾಗೂ ಮಹಿಳೆಯರಿಗೆ ಪ್ರೋತ್ಸಾಹ ನೀಡುವುದು ನಮ್ಮ ಉದ್ದೇಶವಾಗಿತ್ತು ಎಂದು ಟ್ವೀಟಾಯಿಸಿದೆ.

 

 

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...