alex Certify ನಾಳೆ ʼʼವಿಶ್ವ ಮಹಿಳಾ ದಿನಾಚರಣೆʼʼ: ಇತಿಹಾಸದ ಬಗ್ಗೆ ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾಳೆ ʼʼವಿಶ್ವ ಮಹಿಳಾ ದಿನಾಚರಣೆʼʼ: ಇತಿಹಾಸದ ಬಗ್ಗೆ ಇಲ್ಲಿದೆ ಮಾಹಿತಿ

ಪ್ರತಿ ವರ್ಷ ಮಾರ್ಚ್​ 8ರಂದು ವಿಶ್ವಾದ್ಯಂತ ಮಹಿಳಾ ದಿನವನ್ನ ಆಚರಣೆ ಮಾಡಲಾಗುತ್ತೆ. ಈ ದಿನದಂದು ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರು ಮಾಡಿದ ಸಾಧನೆಗಳನ್ನ ಸ್ಮರಿಸಲಾಗುತ್ತೆ. ಮಹಿಳೆಯ ಅಭಿವೃದ್ಧಿ ಹಾಗೂ ಸಮಾನತೆಗಾಗಿ ವಿಶ್ವದಾದ್ಯಂತ ಈ ದಿನವನ್ನ ಆಚರಣೆ ಮಾಡಲಾಗುತ್ತೆ.

ಪ್ರತಿ ವರ್ಷ ಮಹಿಳಾ ದಿನವನ್ನ ಒಂದೊಂದು ವಿಶೇಷ ಅರ್ಥವನ್ನ ಇಟ್ಟುಕೊಂಡು ಆಚರಣೆ ಮಾಡಲಾಗುತ್ತೆ.

ಅಂತಾರಾಷ್ಟ್ರೀಯ ಮಹಿಳಾ ದಿನಕ್ಕೆ ಶತಮಾನಗಳ ಇತಿಹಾಸವೇ ಇದೆ. 1857ರ ಮಾರ್ಚ್​ 8ರಂದು ನ್ಯೂಯಾರ್ಕ್​ನಲ್ಲಿ ನಡೆದಿದ್ದ ಗಾರ್ಮೆಂಟ್​​ನ ಮಹಿಳಾ ಕಾರ್ಮಿಕರು ನಡೆಸಿದ್ದ ಪ್ರತಿಭಟನೆ ಸ್ಮರಣಾರ್ಥ 1909 ಫೆಬ್ರವರಿ 28ರಂದು ನ್ಯೂಯಾರ್ಕ್ ಮೊಟ್ಟ ಮೊದಲ ಮಹಿಳಾ ದಿನವನ್ನ ಆಚರಣೆ ಮಾಡಿದೆ. ಇದಾದ ಬಳಿಕ 1910ರಲ್ಲಿ ಡೆನ್ಮಾರ್ಕ್​ನಲ್ಲಿ ನಡೆದಿದ್ದ ಅಂತಾರಾಷ್ಟ್ರೀಯ ಮಹಿಳಾ ಸಮ್ಮೇಳನದಲ್ಲಿ ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಹಾಗೂ ವಕೀಲೆ ಕ್ಲಾರಾ ಜಟ್ಕಿನ್​ ಎಂಬಾಕೆ ಮಾರ್ಚ್​ 8ರಂದು ಮಹಿಳಾ ದಿನ ಆಚರಿಸುವಂತೆ ಬೇಡಿಕೆ ಇಟ್ಟರು. ಇದಕ್ಕೆ ವಿಶ್ವದ ಎಲ್ಲಾ ರಾಷ್ಟ್ರಗಳ ಒಪ್ಪಿಗೆ ಕೂಡ ದಕ್ಕಿತು.

ಅಂದಿನಿಂದ ಮಹಿಳೆಯ ಅಭಿವೃದ್ಧಿ, ಶೋಷಣೆಯ ವಿರುದ್ಧ ಹೋರಾಟ, ಲಿಂಗ ಸಮಾನತೆಯ ಉದ್ದೇಶದಿಂದ ಮಹಿಳಾ ದಿನವನ್ನ ಆಚರಣೆ ಮಾಡಲಾಗ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...