alex Certify ಇಂದಿನಿಂದ ಬದಲಾಗ್ತಿದೆ ಈ ʼರಾಶಿʼಯವರ ಹಣೆಬರಹ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂದಿನಿಂದ ಬದಲಾಗ್ತಿದೆ ಈ ʼರಾಶಿʼಯವರ ಹಣೆಬರಹ

ಜ್ಯೋತಿಷ್ಯದಲ್ಲಿ ಬುಧನಿಗೆ ವಿಶೇಷ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ಬುಧನನ್ನು ಬುದ್ಧಿ, ತರ್ಕ, ಗಣಿತ ಮತ್ತು ಸ್ನೇಹಕ್ಕೆ ಹೋಲಿಕೆ ಮಾಡಲಾಗುತ್ತದೆ. ಬುಧ, ಮಕರ ರಾಶಿಗೆ ನೇರವಾಗಿ ಸಂಚರಿಸುತ್ತಿದ್ದಾನೆ. ಇದು ಕೆಲವು ರಾಶಿಯವರ ಮೇಲೆ ಪರಿಣಾಮ ಬೀರಲಿದೆ.

ಮೇಷ ರಾಶಿಯವರಿಗೆ ಬುಧನ ಈ ನಡೆ ವರದಾನವಾಗಲಿದೆ. ವೈವಾಹಿಕ ಜೀವನ ಆನಂದಮಯವಾಗಿರಲಿದೆ. ಎಲ್ಲಾ ರೀತಿಯ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ಈ ಅವಧಿಯಲ್ಲಿ ಆರ್ಥಿಕ ಸ್ಥಿತಿ ಉತ್ತಮವಾಗಲಿದೆ. ಸ್ನೇಹಿತರ ಬೆಂಬಲ ಸಿಗಲಿದ್ದು, ನೆಮ್ಮದಿಯಿರಲಿದೆ.

ಬುಧನ ನೇರ ನಡೆ ವೃಷಭ ರಾಶಿಯವರಿಗೂ ಶುಭಕರವಾಗಿರಲಿದೆ. ಆತ್ಮವಿಶ್ವಾಸ ಹೆಚ್ಚಾಗಲಿದೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಧನಲಾಭವಾಗಲಿದೆ. ಕೆಲಸದ ಸ್ಥಳದಲ್ಲಿ ಪ್ರಶಂಸೆ ಸಿಗಲಿದೆ. ಆರ್ಥಿಕ ಸಮಸ್ಯೆಗಳು ದೂರವಾಗಲಿವೆ. ಪ್ರೀತಿಯ ಜೀವನ ಸಂತೋಷವಾಗಿರಲಿದೆ.

ಧನು ರಾಶಿಯ ಜನರಿಗೂ ಶುಭತರಲಿದೆ. ಉದ್ಯೋಗ ಮತ್ತು ವ್ಯವಹಾರ ಅನುಕೂಲಕರವಾಗಿರಲಿದೆ. ಆರ್ಥಿಕ ಪರಿಸ್ಥಿತಿ ಉತ್ತಮವಾಗಿರಲಿದೆ. ಹೂಡಿಕೆಗಳಿಗೆ ಇದು ಒಳ್ಳೆಯ ಸಮಯ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ.

ಬುಧನ ಈ ಬದಲಾವಣೆ ಮಕರ ರಾಶಿಯವರಿಗೂ ಮಂಗಳಕರವಾಗಲಿದೆ. ವ್ಯಾಪಾರದಲ್ಲಿ ಲಾಭವಾಗಲಿದೆ. ವೃತ್ತಿಜೀವನ ಉನ್ನತಿಗೇರಲಿದೆ. ಸಂಬಳ ಹೆಚ್ಚಾಗಲಿದೆ. ಜೀವನದಲ್ಲಿ ಸಂತೋಷ ಕಾಣುತ್ತದೆ. ಈ ರಾಶಿಯವರು ಎಲ್ಲ ಕ್ಷೇತ್ರಗಳಲ್ಲಿ ವಿಶೇಷ ಲಾಭವನ್ನು ಗಳಿಸುತ್ತಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...