alex Certify Budget 2022 Expectations: 2-3 ನೇ ಸ್ತರದ ನಗರಗಳಿಗೆ ಮೆಟ್ರೋ ಸಂಪರ್ಕ ನೀಡಲು ಬೇಡಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Budget 2022 Expectations: 2-3 ನೇ ಸ್ತರದ ನಗರಗಳಿಗೆ ಮೆಟ್ರೋ ಸಂಪರ್ಕ ನೀಡಲು ಬೇಡಿಕೆ

ನರೇಂದ್ರ ಮೋದಿ 2.0 ಸರ್ಕಾರದ ಮುಂದಿನ ಬಜೆಟ್‌ ಮಂಡನೆ ಮಾಡಲಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಈ ಬಾರಿಯ ಬಜೆಟ್ ವೇಳೆ ಬೇಡಿಕೆ ಸಷ್ಟಿ, ಉದ್ಯೋಗ ಸೃಷ್ಟಿ ಹಾಗೂ ಆರ್ಥಿಕತೆಯನ್ನು 8 ಪ್ರತಿಶತದ ದರದಲ್ಲಿ ಸ್ಥಿರವಾಗಿ ಅಭಿವೃದ್ಧಿ ಹೊಂದುವಂತೆ ಮಾಡಲು ಬೇಕಾದ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.

2022-23ರ ಬಜೆಟ್‌ ಅನ್ನು ಫೆಬ್ರವರಿ 1ರಂದು ಮಂಡನೆ ಮಾಡುವ ಸಾಧ್ಯತೆ ಇದೆ.

ಬಜೆಟ್ 2022ರಲ್ಲಿ ರೈಲ್ವೇ ಕ್ಷೇತ್ರದ ಮೂಲ ಸೌಕರ್ಯಕ್ಕೆ ಏನೆಲ್ಲಾ ಕೊಡಬಹುದು ಎಂಬ ಬಗ್ಗೆ ಮಾತನಾಡಿದ ಆಲ್ಸ್‌ಟಾಂ ಇಂಡಿಯಾ & ದಕ್ಷಿಣ ಏಷ್ಯಾ ಘಟಕದ ಎಂಡಿ ಅಲೈನ್ ಸೋಫರ್‌, “ಬಂಡವಾಳ ವೆಚ್ಚಕ್ಕೆಂದು ಕಳೆದ ವರ್ಷದ ಬಜೆಟ್‌ನಲ್ಲಿ ದೊಡ್ಡ ಮೊತ್ತ ನೀಡಿದ ಬೆನ್ನಿಗೇ ಈ ವರ್ಷ ಬಜೆಟ್‌ ಸಹ ಹಾಗೇ ಪ್ರಗತಿಶೀಲವಾಗಿರಲಿದೆ ಎಂಬ ಭರವಸೆ ನಮ್ಮದು,” ಎಂದು ತಿಳಿಸಿದ್ದಾರೆ.

ಅಲೈನ್ ಸೋಫರ್‌ ತಿಳಿಸಿದ ಮಹತ್ವದ ಅಂಶಗಳು ಇಂತಿವೆ:

* ಪ್ರಧಾನ ಮಂತ್ರಿ ಗತಿ ಶಕ್ತಿ (ರಾಷ್ಟ್ರ ಮಟ್ಟದ ಬಹು ವಿಧದ ಸಾರಿಗೆ ಸಂಪರ್ಕ) ಮತ್ತು ರಾಷ್ಟ್ರೀಯ ಮೂಲ ಸೌಕರ್ಯ ಪೈಪ್‌ಲೈನ್‌ಗಳಂಥ ಯೋಜನೆಗಳಿಗೆ ಆದ್ಯತೆ ಸಿಗಲಿದೆ ಎಂದು ನಂಬಿದ್ದೇವೆ.

* ಎರಡನೇ ಹಾಗೂ ಮೂರನೇ ಸ್ತರದ ನಗರಗಳಲ್ಲಿ ಮೆಟ್ರೋ ಲೈಟ್ ಹಾಗೂ ಮೆಟ್ರೋ ನಿಯೋಗಳಂಥ ಹೊಸ ತಂತ್ರಜ್ಞಾನಗಳನ್ನು ಪರಿಚಯಿಸಲು ಹೆಚ್ಚುವರಿ ಬೆಂಬಲ ನಿರೀಕ್ಷಿಸಿದ್ದೇವೆ.

* ರೈಲ್ವೇ ಉತ್ಪಾದಕರು ಹಾಗೂ ರಫ್ತುದಾರರಿಗೆ ಮೇಕ್-ಇನ್-ಇಂಡಿಯಾವನ್ನು ಪ್ರಮೋಟ್ ಮಾಡಲು ಬೇಕಾದ ಯೋಜನೆಗಳಿಗೆ ಗತಿ ನೀಡುವ ಮೂಲಕ ಬೆಂಬಲ ಸಿಗಲಿದೆ ಎಂದು ನಿರೀಕ್ಷಿಸಿದ್ದೇವೆ. ಕ್ಷೇತ್ರದಲ್ಲಿ ಖಾಸಗಿ ಹೂಡಿಕೆ ಸಂಬಂಧ ನೀತಿ ರಚನೆಯಂಥ ಸರ್ಕಾರೀ ಬೆಂಬಲಗಳ ನಿರೀಕ್ಷೆಯಿದೆ.

* ’ಶೂನ್ಯ ಇಂಗಾಲ ಹೊರಸೂಸುವಿಕೆ’ಯ ಗುರಿಯೊಂದಿಗೆ ಜಗತ್ತಿನ ಅತಿ ದೊಡ್ಡ ಹಸಿರು ರೈಲ್ವೇ ಜಾಲವಾಗುವ ಮಹದಾಸೆಯೊಂದಿಗೆ ಕ್ಷೇತ್ರವು ಇಂಧನ ಕ್ಷಮತೆ ಹಾಗೂ ಪರಿಸರ-ಸ್ನೇಹಿತ ತಂತ್ರಜ್ಞಾನಗಳ ಪರಿಚಯಿಸುವ ಆಶಯವನ್ನು ಹೊಂದಿದೆ.

* ರೈಲ್ವೇ ಅಭಿವೃದ್ಧಿಯ ದೊಡ್ಡ ಯೋಜನೆಗಳನ್ನು ಕ್ರಿಯಾಶೀಲಗೊಳಿಸುವ ಮತ್ತು ಸಂಶೋಧನೆ ಮತ್ತು ಅಭಿವೃದ್ಧಿ ಪರಿಸರ ನಿರ್ಮಿಸಲು ಭಾರತದಲ್ಲಿ ಹೂಡಿಕೆ ಮಾಡಲು ಸಿದ್ಧವಿರುವ ಕಂಪನಿಗಳನ್ನು ಸರ್ಕಾರ ಪರಿಗಣಿಸಬೇಕು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...