alex Certify ನಿರ್ಮಾ ಜಾಹಿರಾತು ಹಾಡಿಗೆ ಸ್ಟೆಪ್​ ಹಾಕಿದ ಬಿಟಿಎಸ್​ ಗ್ರೂಪ್​…! ಎಡಿಟ್‌ ಮಾಡಿದವರಿಗೆ ಶಬ್ಬಾಶ್‌ ಹೇಳಿದ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿರ್ಮಾ ಜಾಹಿರಾತು ಹಾಡಿಗೆ ಸ್ಟೆಪ್​ ಹಾಕಿದ ಬಿಟಿಎಸ್​ ಗ್ರೂಪ್​…! ಎಡಿಟ್‌ ಮಾಡಿದವರಿಗೆ ಶಬ್ಬಾಶ್‌ ಹೇಳಿದ ನೆಟ್ಟಿಗರು

ಒಂದು ಕಾಲದ ಫೇಮಸ್​ ಜಾಹಿರಾತು ನಿರ್ಮಾ ಮನೆ ಮಾತಾಗಿತ್ತು. “ದುದ್​ ಸಿ ಸೇಧಿ ನಿರ್ಮಾ ಸೆ ಆಯೆ, ರಂಗೇನ್​ ಕಪ್ಡಾ ಭಿ ಖಿಲ್​ ಖಿಲ್​ ಜಾಯೆ….., ನಿರ್ಮಾ ವಾಷಿಂಗ್​ ಪೌಡರ್​ಗಾಗಿ ಈ ಜಿಂಗಲ್​ 90ರ ದಶಕದಲ್ಲಿ ಟ್ರೆಂಡ್​ ಸೃಷ್ಟಿಸಿತ್ತು.

ಈಗ, ಬಿಟಿಎಸ್​ ಸೂಪರ್​ ಬ್ಯಾಂಡ್​ ನ ಏಳು ಸದಸ್ಯರು ಈ ಜಿಂಗಲ್​ಗೆ ಗ್ರಾಂಡ್​ ಸ್ಟೆಪ್​ ಹಾಕಿರುವ ವಿಡಿಯೊ ವೈರಲ್​ ಆಗಿದೆ.

ಇನ್​ಸ್ಟಾಗ್ರಾಮ್​ನಲ್ಲಿ ಕಿಶನ್​ ಜುನ್​ಜುನ್​ವಾಲಾ ಹಂಚಿಕೊಂಡಿರುವ ಈ ವಿಡಿಯೊದಲ್ಲಿ ಬಿಟಿಎಸ್​ ಸದಸ್ಯರು ನಿರ್ಮಾ ಜಿಂಗಲ್​ಗೆ ನೃತ್ಯ ಮಾಡುತ್ತಿದ್ದಾರೆ. ಕ್ಲಿಪ್​ ಮೂಲತಃ ಬಿಟಿಎಸ್​ ಅನ್ನು ನಿರ್ವಹಿಸುವ ಏಜೆನ್ಸಿಯಾದ ಬಿಗ್​ಹಿಟ್​ ಮ್ಯೂಸಿಕ್​ ಹಂಚಿಕೊಂಡಿರುವ ನೃತ್ಯ ಅಭ್ಯಾಸದ ವಿಡಿಯೋವಾಗಿದೆ.

ನಾಸ್ಟಾಲ್ಜಿಕ್​ ಜಿಂಗಲ್​ನೊಂದಿಗೆ ನೃತ್ಯ ಸಂಯೋಜನೆಯ ಆನ್​-ಪಾಯಿಂಟ್​ ಸಿಂಕ್ರೊನೈಸೇಶನ್​ ಖಂಡಿತವಾಗಿಯೂ ಖುಷಿಪಡಿಸುತ್ತದೆ. ಇದು 13 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಕಂಡಿದ್ದು ವೈರಲ್​ ಆಗುತ್ತಿದೆ. ನೆಟ್ಟಿಗರು ಈ ಎಡಿಟ್ ​ಅನ್ನು ಇಷ್ಟಪಟ್ಟಿದ್ದಾರೆ ಮತ್ತು ಎಲ್ಲಾ ಸದಸ್ಯರು ಬಿಳಿ ಶರ್ಟ್​ ಹೇಗೆ ಧರಿಸಿದ್ದಾರೆ ಎಂಬುದು ಅನೇಕರ ಪ್ರಶ್ನೆಯಾಗಿದೆ.

ಬಿಟಿಎಸ್​ ಸತತವಾಗಿ ಎರಡು ವರ್ಷಗಳ ಪ್ರತಿಷ್ಠಿತ ಗ್ರಾಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿತು. ಅವರ ಆಲ್ಬಮ್​ ಬಟರ್​ ಬಿಲ್​ಬೋರ್ಡ್​ ಚಾರ್ಟ್​ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಸಂಗೀತ ಆಲ್ಬಮ್​ಗಳಲ್ಲಿ ಒಂದಾಗಿದೆ. ಶೀಘ್ರದಲ್ಲೇ ಕತಾರ್​ನಲ್ಲಿ ನಡೆಯಲಿರುವ 2022 ರ ಫಿಫಾ ವಿಶ್ವಕಪ್​ನಲ್ಲಿ ಬ್ಯಾಂಡ್​ ಪ್ರದರ್ಶನ ನೀಡಲು ಸಿದ್ಧವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...