alex Certify ಲೋಕಸಭಾ ಚುನಾವಣೆ ಹೊತ್ತಲ್ಲೇ ದಳಪತಿಗಳಿಗೆ ಬಿಗ್ ಶಾಕ್; ನಗರಸಭೆ 10 ಸದಸ್ಯರು ಕಾಂಗ್ರೆಸ್ ಸೇರ್ಪಡೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲೋಕಸಭಾ ಚುನಾವಣೆ ಹೊತ್ತಲ್ಲೇ ದಳಪತಿಗಳಿಗೆ ಬಿಗ್ ಶಾಕ್; ನಗರಸಭೆ 10 ಸದಸ್ಯರು ಕಾಂಗ್ರೆಸ್ ಸೇರ್ಪಡೆ

ರಾಮನಗರ: ಲೋಕಸಭಾ ಚುನಾವಣೆ ಹೊತ್ತಲ್ಲೇ ಜೆಡಿಎಸ್ ಗೆ ಮತ್ತೊಂದು ಶಾಕ್ ಎದುರಾಗಿದೆ. ನಗರಸಭೆಯ 10 ಸದಸ್ಯರು ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ವಿರೋಧಿಸಿ ಚನ್ನಪಟ್ಟಣ ನಗರ ಸಭೆಯ ಎಲ್ಲಾ ಸದಸ್ಯರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಜೆಡಿಎಸ್ ಪಕ್ಷದ ಚಿಹ್ನೆಯ ಮೇಲೆ ನಗರ ಸಭೆ ಸದಸ್ಯರಾಗಿ ಆಯ್ಕೆಯಾಗಿದ್ದ 9 ಜನ ಸದಸ್ಯರು ಹಾಗೂ ಚನ್ನಪಟ್ಟಣದ ವಾರ್ಡ್ ನಂ.‌30 ರ ಪಕ್ಷೇತರ ಅಭ್ಯರ್ಥಿ ಸೇರಿ 10 ಸದಸ್ಯರು ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗಿದ್ದಾರೆ.

ಚನ್ನಪ್ಪಟ್ಟನ ನಗರ ಸಭೆಯ ಅಧ್ಯಕ್ಷ ಪ್ರಶಾಂತ್ ಪಿ.‌ ಸದಸ್ಯರಾದ ರೇವಣ್ಣ ಎಂ.ಜೆ, ವಿ ಸತೀಸ್ ಬಾಬು, ಶ್ರೀನಿವಾಸಮೂರ್ತಿ. ಲೋಕೇಶ್ ಸಿ.ಜೆ., ನಾಗೇಶ್‌, ಸೈಯದ್ ರಪೀಕ್ ಅಹಮದ್ ಕುನುಮೀರಿ, ಅಭೀದ ಬಾನು, ಭಾನುಪ್ರೀಯ ಹಾಗೂ ಪಕ್ಷೇತರ ಸದಸ್ಯೆ ಉಮಾ ಸೇರಿದಂತೆ ಎಲ್ಲಾ ಸದಸ್ಯರು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...