alex Certify ಬಿಜೆಪಿಗೆ ಮತ ನೀಡಲು BSP ಅಭ್ಯರ್ಥಿ ಮನವಿ…! ಆಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಜೆಪಿಗೆ ಮತ ನೀಡಲು BSP ಅಭ್ಯರ್ಥಿ ಮನವಿ…! ಆಡಿಯೋ ವೈರಲ್

ಕುಂದರಕಿ ವಿಧಾನಸಭಾ ಕ್ಷೇತ್ರದ ಬಿಎಸ್‌ಪಿ ಅಭ್ಯರ್ಥಿ ಹಾಗೂ ಹಾಲಿ ಶಾಸಕ ಹಾಜಿ ರಿಜ್ವಾನ್ ಅವರ ಆಡಿಯೋ ಕ್ಲಿಪ್ ಒಂದು ವೈರಲ್ ಆಗಿದೆ. ಅದರಲ್ಲಿ ಅವರು ಬಿಜೆಪಿ ಪರವಾಗಿ ಮತ ಹಾಕುವಂತೆ ತಮ್ಮ ಬೆಂಬಲಿಗರಲ್ಲಿ ಮನವಿ ಮಾಡಿದ್ದಾರೆ. ಕುಂದರಕಿಯಲ್ಲಿ ಸೋಮವಾರ ಮತದಾನ ನಡೆದಿದೆ.

ಈ ವಿಚಾರವನ್ನು ಒಪ್ಪಿಕೊಂಡಿರುವ ಅವರು, ಯಾವುದೇ ಸಂದರ್ಭದಲ್ಲೂ ಎಸ್.‌ಪಿ. ಅಭ್ಯರ್ಥಿಯನ್ನು ಗೆಲ್ಲಿಸಬಾರದು ಎಂದು ತಿಳಿಸಿದ್ದಾರೆ. ಹೌದು, ನಾನು ನನ್ನ ಮತದಾರರಲ್ಲಿ ಮನವಿ ಮಾಡಿದ್ದೇನೆ ಎಂದು ಹೇಳಿದರು. ನಾನೇನೂ ತಪ್ಪಾಗಿ ಹೇಳಿಲ್ಲ. ಇನ್ನೇನು ಹೇಳಬೇಕಿತ್ತು? ನಾವು ಈ ಹಿಂದೆ ಐದು ಬಾರಿ ಡಾಕ್ಟರ್ ಬಾರ್ಕ್ ಅವರನ್ನು ಬೆಂಬಲಿಸಿದ್ದೇವೆ, ಆದರೆ ಈ ಬಾರಿ ಅದು ಸಾಧ್ಯವಿಲ್ಲ ಎಂದಿದ್ದಾರೆ.‌

ಬೈಕ್​ ಪ್ರಿಯರಿಗೆ ಗುಡ್​ ನ್ಯೂಸ್: ಮಾರ್ಚ್​ ತಿಂಗಳೊಳಗಾಗಿ 3 ಬೈಕ್ ಗಳನ್ನು ಪರಿಚಯಿಸಲಿದೆ ಡುಕಾಟಿ..!

ಒಂದು ದಶಕಕ್ಕೂ ಹೆಚ್ಚು ಕಾಲ ಎಸ್.‌ಪಿ. ಸದಸ್ಯರಾಗಿದ್ದ ರಿಜ್ವಾನ್, ಈ ಬಾರಿ ಟಿಕೆಟ್ ಕೈ ತಪ್ಪಿದ್ದಕ್ಕೆ ಬಿಎಸ್‌ಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಟಿಕೆಟ್ ವಿಚಾರವಾಗಿ‌ ಎಸ್‌ಪಿ ಹಿರಿಯ ನಾಯಕ ರಾಮ್ ಗೋಪಾಲ್ ಯಾದವ್ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಅವರು, ಯಾದವ್ ಅವರ ತಂತ್ರ ಏನು ಎಂಬುದು ನನಗೆ ತಿಳಿದಿಲ್ಲ. ನನ್ನ ಮತದಾರರು ನನ್ನೊಂದಿಗಿದ್ದಾರೆ. ನಾನು ನನ್ನ ಮತದಾರರಿಗೆ ಆಭಾರಿಯಾಗಿದ್ದೇನೆ. ನನ್ನ ಪ್ರತಿಸ್ಪರ್ಧಿಗಳಿಂದ ಆಡಿಯೋ ಕ್ಲಿಪ್ ಸೋರಿಕೆಯಾಗಿದೆ. ಆದರೂ ನನಗೆ ಯಾವುದೇ ವಿಷಾದವಿಲ್ಲ. ಎಸ್‌.ಪಿ. ನನ್ನ ಬೆನ್ನಿಗೆ ಚೂರಿ ಹಾಕಿದೆ. ಈಗ, ನಾನು ಅವರನ್ನು ನನ್ನ ಆಸನದಲ್ಲಿ ಕುಳಿತುಕೊಳ್ಳಲು ಬಿಡುವುದಿಲ್ಲ. ನನ್ನ ಕ್ಷೇತ್ರದಲ್ಲಿ ಅವರು ಕೆಟ್ಟದಾಗಿ ಸೋಲುತ್ತಾರೆ ಎಂದಿದ್ದಾರೆ.

ಆಡಿಯೋ ಕ್ಲಿಪ್‌ನಲ್ಲಿ, ರಿಜ್ವಾನ್ ಬಿಜೆಪಿ ಅಭ್ಯರ್ಥಿ ಕಮಲ್ ಪ್ರಜಾಪತಿ ಅವರ ಸೋದರಸಂಬಂಧಿ ಅಜಯ್ ಕುಮಾರ್ ಪ್ರಜಾಪತಿ ಅವರೊಂದಿಗೆ ಮಾತನಾಡುತ್ತಾ, ನಿಮ್ಮ ಜನರು ನನಗೆ ಮತ ಹಾಕಿದರೆ ಹಾಕಲಿ, ಆದರೆ ಅವರು ಎಸ್.‌ಪಿ.ಗೆ ಮತ ಹಾಕಲು ಯೋಜಿಸುತ್ತಿದ್ದರೆ ಅದಕ್ಕೆ ಅವಕಾಶ ಕೊಡಬೇಡಿ, ಎಂದಿದ್ದಾರೆ.

ಈ ವಿಚಾರವಾಗಿ ಹಾಜಿ ರಿಜ್ವಾನ್ ವಿರುದ್ಧ ಕಿಡಿಕಾರಿರುವ ಕುಂದರಕಿ ಕ್ಷೇತ್ರದ ಎಸ್‌.ಪಿ. ಅಭ್ಯರ್ಥಿ, ನನ್ನ ತಾತ ಡಾ.ಬಾರ್ಕ್ ರಿಜ್ವಾನ್‌ ಬೆಂಬಲದಿಂದ ಗೆಲ್ಲಲಿಲ್ಲ. ಬದಲಿಗೆ ಕ್ಷೇತ್ರದ ಜನರಿಂದ ಗೆದ್ದಿದ್ದಾರೆ ಎಂದು ಹೇಳಿದರು. ಈಗ ಇಡೀ ರಾಜ್ಯವೇ ಅವರನ್ನು ಅಧಿಕಾರದಿಂದ ಕಿತ್ತೊಗೆಯಲು ಬಯಸಿದಾಗ ಬಿಜೆಪಿಯನ್ನು ಬೆಂಬಲಿಸುವಂತೆ ಮತದಾರರನ್ನು ಕೇಳುತ್ತಿದ್ದಾರೆ. ಇವರ ನಾಚಿಕೆಗೇಡಿನ ಕೃತ್ಯಕ್ಕೆ ಕುಂದರಕಿಯ ಮತದಾರರು ತಕ್ಕ ಪಾಠ ಕಲಿಸುತ್ತಾರೆ ಎಂಬ ನಂಬಿಕೆ ನನಗಿದೆ ಎಂದಿದ್ದಾರೆ.

ಈ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಇನ್ನೂ ಮತದಾನ ಮುಗಿಯದ ಕ್ಷೇತ್ರಗಳಲ್ಲಿ ಆಡಿಯೋ ಕ್ಲಿಪ್‌ಗಳನ್ನು ಬಿಡುಗಡೆ ಮಾಡಿ ಬಿಎಸ್‌ಪಿ ಮತ್ತು ಬಿಜೆಪಿ ನಡುವಿನ ನಂಟು ಬಯಲು ಮಾಡುತ್ತೇವೆ ಎಂದು ಸ್ಥಳೀಯ ಎಸ್‌ಪಿ ಮುಖಂಡರೊಬ್ಬರು ಕಿಡಿಕಾರಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...