alex Certify ಬೈಕ್​ ಪ್ರಿಯರಿಗೆ ಗುಡ್​ ನ್ಯೂಸ್: ಮಾರ್ಚ್​ ತಿಂಗಳೊಳಗಾಗಿ 3 ಬೈಕ್ ಗಳನ್ನು ಪರಿಚಯಿಸಲಿದೆ ಡುಕಾಟಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೈಕ್​ ಪ್ರಿಯರಿಗೆ ಗುಡ್​ ನ್ಯೂಸ್: ಮಾರ್ಚ್​ ತಿಂಗಳೊಳಗಾಗಿ 3 ಬೈಕ್ ಗಳನ್ನು ಪರಿಚಯಿಸಲಿದೆ ಡುಕಾಟಿ..!

ಕೊರೊನಾ ಸಾಂಕ್ರಾಮಿಕದ ಜಗತ್ತಿಗೆ ಹೊಂದಿಕೊಂಡ ಕೆಲವೇ ಮೋಟಾರ್​ ಸೈಕಲ್​ ತಯಾರಕ ಕಂಪನಿಗಳಲ್ಲಿ ಡುಕಾಟಿ ಒಂದಾಗಿದೆ. ಪ್ರತಿಷ್ಠಿತ ಡುಕಾಟಿ ಕಂಪನಿಯು ಮಾರ್ಚ್​ 10ರ ಒಳಗಾಗಿ ಮೂರು ಹೊಸ ಮೋಟಾರ್​ ಸೈಕಲ್ ಗಳನ್ನು ಮಾರುಕಟ್ಟೆಗೆ ಪರಿಚಯಿಸಲು ಮುಂದಾಗಿದೆ.

ಮೂರು ಹೊಸ ಮೋಟಾರ್​ ಸೈಕಲ್​ಗಳಲ್ಲಿ ಒಂದು ನಾಳೆ ಅಂದರೆ ಗುರುವಾರ ಪ್ರದರ್ಶಿಸುವ ನಿರೀಕ್ಷೆಯಿದೆ. ಇದು ಡಯಾವೆಲ್​ ಆವೃತ್ತಿಯಾಗಿದೆ ಎಂದು ನಿರೀಕ್ಷಿಸಲಾಗಿದೆ.

ಇನ್ನೆರಡು Panigale V4 R ಅಥವಾ Panigale V4 SP2 ಆಗಿರಬಹುದು ಎಂದು ನಿರೀಕ್ಷಿಸಲಾಗಿದೆ. ಆದಾಗ್ಯೂ, ಅದರ ಹಿಂದಿನ ವರ್ಲ್ಡ್ ಪ್ರೀಮಿಯರ್ ಸರಣಿಯಿಂದ ಹೈಪರ್‌ ಮೊಟಾರ್ಡ್, ಮಾನ್‌ಸ್ಟರ್ ಮತ್ತು ಸೂಪರ್‌ಸ್ಪೋರ್ಟ್ 950 ಕಾಣೆಯಾಗಿದೆ, ಈ ಮಾಡೆಲ್​ಗಳನ್ನು ನವೀಕೃತಗೊಳಿಸಿ ಮಾರುಕಟ್ಟೆಗೆ ಪರಿಚಯಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ನಾಳೆಯೇ ಡುಕಾತಿಯ ಈ ವರ್ಷದ ಮೊದಲ ಬೈಕ್​ ಮಾರುಕಟ್ಟೆಗೆ ಬರುತ್ತಿರೋದ್ರಿಂದ ನಾವು ಇನ್ನು ಹೆಚ್ಚು ಸಮಯಗಳ ಕಾಲ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ..! ಅಲ್ಲದೇ ಭಾರತದಲ್ಲಿ ಈ ವರ್ಷದಲ್ಲಿಯೇ ಈ ಎಲ್ಲಾ ಬೈಕ್ ಗಳನ್ನು ಮಾರುಕಟ್ಟೆಗೆ ಪರಿಚಯಿಸಲು ನಿರ್ಧರಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...