alex Certify ಬಿಎಸ್​ಎನ್​ಎಲ್​ ಗ್ರಾಹಕರಿಗೆ ಇಲ್ಲಿದೆ ಒಂದು ಮಹತ್ವದ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಎಸ್​ಎನ್​ಎಲ್​ ಗ್ರಾಹಕರಿಗೆ ಇಲ್ಲಿದೆ ಒಂದು ಮಹತ್ವದ ಮಾಹಿತಿ

699 ರೂಪಾಯಿ ಪ್ಲಾನ್​ ವ್ಯಾಲಿಡಿಟಿ ಅವಧಿಯನ್ನು ಬಿಎಸ್​ಎನ್​​ಎಲ್​ ವಿಸ್ತರಿಸಿದೆ. ಈ ಪ್ರಿಪೇಯ್ಡ್​ ಪ್ಲಾನ್ ಇನ್ಮುಂದೆ 180 ದಿನಗಳ ವ್ಯಾಲಿಡಿಟಿಯನ್ನು ಹೊಂದಿರಲಿದೆ. ಬಿಎಸ್​ಎನ್​ಎಲ್​ನ 699 ರೂಪಾಯಿಯ ಪ್ಲಾನ್​ನ್ನು ಈ ವರ್ಷದ ಆರಂಭದಲ್ಲಿ ಪರಿಚಯಿಸಲಾಗಿತ್ತು.

ಈ ಪ್ಲಾನ್​ನ ಅಡಿಯಲ್ಲಿ ಗ್ರಾಹಕರು ದಿನಕ್ಕೆ 100 ಉಚಿತ ಎಸ್​ಎಂಎಸ್​ ಹಾಗೂ ಅನಿಯಮಿತ ಕರೆ ಸೌಕರ್ಯ ಮತ್ತು ಪ್ರತಿ ದಿನ 0.5 ಜಿಬಿ ಉಚಿತ ಡೇಟಾವನ್ನು ಪಡೆಯುತ್ತಾರೆ.

ಕಂದು ಬಿಕಿನಿಯಲ್ಲಿ ಮಿಂಚಿದ ಪರಿಣಿತಿ ಚೋಪ್ರಾಗೆ ʼಸೂರ್ಯ ಚುಂಬನʼ

ಉಚಿತ ಡೇಟಾ ಖಾಲಿಯಾದ ಬಳಿಕ ಡೇಟಾ ವೇಗವು 80 ಕೆಬಿಪಿಎಸ್​ಗೆ ಇಳಿಯಲಿದೆ. ಮೊದಲ 60 ದಿನಗಳು ಗ್ರಾಹಕರು ಪಿಆರ್​ಬಿಟಿ ಸೇವೆಯನ್ನು ಉಚಿತವಾಗಿ ಪಡೆಯುತ್ತಾರೆ. ಅಂದರೆ ಈ ಸೌಕರ್ಯದ ಅಡಿಯಲ್ಲಿ ಗ್ರಾಹಕರು ಉಚಿತವಾಗಿ ಕಾಲರ್​ ಟ್ಯೂನ್​ನ್ನು ಹೊಂದಬಹುದಾಗಿದೆ.

ಹೊಸ ಗ್ರಾಹಕರಿಗೆ, ಬಿಎಸ್​ಎನ್​ಎಲ್​ಗೆ ಪೋರ್ಟ್ ಆಗಬಯಸುವವರಿಗೆ ಸೇರಿದಂತೆ ಎಲ್ಲರಿಗೂ ಈ ಪ್ಲಾನ್​ ಲಭ್ಯವಿದೆ. 699 ರೂಪಾಯಿ ರೀಚಾರ್ಜ್ ಮಾಡಿಸಿಕೊಳ್ಳಲು ಹತ್ತಿರದ ರೀಚಾರ್ಜ್ ಶಾಪ್​ ಅಥವಾ ಬಿಎಸ್​ಎನ್​ಎಲ್​ ಸಹಾಯವಾಣಿ ಇಲ್ಲವೇ ಆನ್​ಲೈನ್​ ಪೋರ್ಟಲ್​​ನ್ನು ಸಂಪರ್ಕಿಸಬಹುದಾಗಿದೆ. ಮೊಬೈಲ್​ ಅಪ್ಲಿಕೇಶನ್​ ಮೂಲಕವೂ ರಿಚಾರ್ಜ್ ಮಾಡಿಕೊಳ್ಳಬಹುದಾಗಿದೆ.

Good News: ಮಕ್ಕಳಿಗಾಗಿ ʼಕೊರೊನಾʼ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕಿಟ್ ಬಿಡುಗಡೆ

ಏರ್​ಟೆಲ್​ 699 ಪ್ಲಾನ್​

ಏರ್​ಟೆಲ್​​ನ 699 ರೂಪಾಯಿ ಪ್ರೀಪೇಯ್ಡ್​ ಪ್ಲಾನ್​ನ ಅಡಿಯಲ್ಲಿ ಗ್ರಾಹಕರು 56 ದಿನಗಳ ಕಾಲ ಡಿಸ್ನಿ ಪ್ಲಸ್​ ಹಾಟ್​ಸ್ಟಾರ್​ ಚಂದಾದಾರಿಕೆಯನ್ನು ಉಚಿತವಾಗಿ ಪಡೆಯುತ್ತಾರೆ. 2 ಜಿಬಿ ನಿತ್ಯ ಡೇಟಾ, ಅನಿಯಮಿತ ಕರೆ, ದಿನಕ್ಕೆ 100 ಉಚಿತ ಎಸ್​ಎಂಎಸ್​ ಸಿಗಲಿದೆ. ಅಲ್ಲದೇ ಅಮೆಜಾನ್​ ಪ್ರೈಮ್​ ಚಂದಾದಾರಿಕೆ ಕೂಡ ಸಿಗಲಿದೆ.

ರಿಲಾಯನ್ಸ್​ ಜಿಯೋ 699 ಪ್ಲಾನ್​

ಜಿಯೋದ ಈ ಪ್ಲಾನ್​ನ ಅಡಿಯಲ್ಲಿ ಡಿಸ್ನಿ ಪ್ಲಸ್​ ಹಾಟ್​ಸ್ಟಾರ್​ ಚಂದಾದಾರಿಕೆ, 2ಜಿಬಿ ಡೇಲಿ ಡೇಟಾ, ಅನಿಯಮಿತ ಕರೆ ಹಾಗೂ ದಿನಕ್ಕೆ 100 ಉಚಿತ ಎಸ್ಎಂಎಸ್​ ಸೌಕರ್ಯ ಸಿಗಲಿದೆ. ಈ ಪ್ಲಾನ್​ಗೆ 56 ದಿನಗಳ ವ್ಯಾಲಿಡಿಟಿ ಇರುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...