alex Certify ವಿದಾಯದ ವೇಳೆ ನೃತ್ಯ ಮಾಡಿ ಸಹೋದರಿಯನ್ನು ನಗಿಸಿದ ಅಣ್ಣಂದಿರು: ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿದಾಯದ ವೇಳೆ ನೃತ್ಯ ಮಾಡಿ ಸಹೋದರಿಯನ್ನು ನಗಿಸಿದ ಅಣ್ಣಂದಿರು: ವಿಡಿಯೋ ವೈರಲ್

ಮದುವೆಯ ನಂತರ ವಿದಾಯದ ಸಮಾರಂಭದಲ್ಲಿ ಮಗಳನ್ನು ಒಪ್ಪಿಸುವಾಗ ಎಲ್ಲರೂ ಭಾವುಕರಾಗುವುದು ಸಾಮಾನ್ಯ. ತವರನ್ನು ಬಿಟ್ಟು ವಧು ಹೊಸ ಜೀವನವನ್ನು ಪ್ರಾರಂಭಿಸಲು ಹೋಗುವ ಸಂದರ್ಭ ಇದು. ಆದ್ದರಿಂದ ಆಗಾಗ್ಗೆ ಕಣ್ಣೀರಿನ ಕೋಡಿ ಹರಿಯುತ್ತದೆ.

ಇಲ್ಲೊಂದು ವೈರಲ್​ ವಿಡಿಯೋದಲ್ಲಿ ಸಹೋದರಿ ಅಳದಂತೆ ಮಾಡುವಲ್ಲಿ ಸಹೋದರರು ಪ್ರಯತ್ನ ಪಟ್ಟಿದ್ದಾರೆ. ಅದರಿಂದ ಆಕೆಯನ್ನು ನಗಿಸಲು ಸಂಗೀತದ ಮಾರ್ಗವನ್ನು ಕಂಡುಕೊಂಡಿದ್ದು, ಅದೀಗ ವೈರಲ್​ ಆಗಿದೆ. ಅವರು ಸಾಂಪ್ರದಾಯಿಕ ಪ್ರೇಮಗೀತೆ ಕಬೂತರ್ ಜಾ ಜಾ ಜಾಗೆ ತಮಾಷೆಯ ನೃತ್ಯವನ್ನು ಪ್ರದರ್ಶಿಸಿದರು.

ಇನ್ಸ್ಟಾಗ್ರಾಮ್ ಬಳಕೆದಾರ ಇಂದರ್ಜೀತ್ ಕರ್ವಾಲ್ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. “ನಿಮ್ಮ ಸಹೋದರರು ನಿಮಗೆ ಶ್ರೀರಕ್ಷೆ ಎನ್ನುವ ಕ್ಯಾಪ್ಷನ್​ ನೀಡಿದ್ದಾರೆ. ಸಹೋದರರು ಸಹೋದರಿಗೆ ವಿದಾಯದ ಸಮಯದಲ್ಲಿ ಕಣ್ಣೀರು ಹಾಕಲು ಬಿಡಲಿಲ್ಲ. ಆಕೆ ನಗುವಂತೆ ಮಾಡಿದರು ಎಂದು ಹೇಳಿದ್ದಾರೆ.

ಕಬೂತರ್ ಜಾ ಜಾ ಜಾ ಹಾಡು 1989 ರ ಮೈನೆ ಪ್ಯಾರ್ ಕಿಯಾ ಚಲನಚಿತ್ರದಿಂದ ಬಂದಿದೆ. ಲತಾ ಮಂಗೇಶ್ಕರ್ ಮತ್ತು ಎಸ್ಪಿ ಬಾಲಸುಬ್ರಮಣ್ಯಂ ಹಾಡಿದ್ದು, ಇದನ್ನು ಸಲ್ಮಾನ್ ಖಾನ್ ಮತ್ತು ಭಾಗ್ಯಶ್ರೀ ಮೇಲೆ ಚಿತ್ರಿಸಲಾಗಿದೆ. ಈ ವೈರಲ್​ ವಿಡಿಯೋಗೆ ನೆಟ್ಟಿಗರು ಫಿದಾ ಮತ್ತು ಭಾವುಕರಾಗಿದ್ದು, ಇದ್ದರೆ ಇಂಥ ಸಹೋದರರು ಇರಬೇಕು ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...