alex Certify ಬರೋಬ್ಬರಿ 26 ಕೋಟಿ ರೂಪಾಯಿಗೆ ಕನಸಿನ ಮನೆ ಕೊಂಡ ಬಿ-ಟೌನ್ ಡೈನಾಮಿಕ್ ಜೋಡಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬರೋಬ್ಬರಿ 26 ಕೋಟಿ ರೂಪಾಯಿಗೆ ಕನಸಿನ ಮನೆ ಕೊಂಡ ಬಿ-ಟೌನ್ ಡೈನಾಮಿಕ್ ಜೋಡಿ..!

Brothers Ayushmann, Aparshakti buy Rs 26 crore dream home in Mumbai, details insideಬಾಲಿವುಡ್ ನ ಡೈನಾಮಿಕ್ ಜೋಡಿ, ಆಯುಷ್ಮಾನ್ ಖುರಾನಾ ಮತ್ತು ಅಪರಶಕ್ತಿ ಖುರಾನಾ ಪ್ರೇಕ್ಷಕರ ಹೃದಯದಲ್ಲಿ ತಮ್ಮದೆ ಜಾಗ ಹೊಂದಿದ್ದಾರೆ. ಇಷ್ಟು ವರ್ಷ ಸಿನಿರಂಗಕ್ಕೆ ಅಪಾರ ಕೊಡುಗೆ ನೀಡಿರುವ ಈ ಅಣ್ಣ-ತಮ್ಮ ಈಗ ಮುಂಬೈನಲ್ಲಿ ತಮ್ಮ ಕನಸಿನ ಮನೆಯನ್ನು ಕೊಂಡುಕೊಂಡಿದ್ದಾರೆ.

ವರದಿಗಳ ಪ್ರಕಾರ, ಆಯುಷ್ಮಾನ್ ಅಂಧೇರಿ ಲೋಖಂಡ್‌ವಾಲಾದ ವಿಂಡ್ಸರ್ ಗ್ರಾಂಡೆ ರೆಸಿಡೆನ್ಸ್‌ ನಲ್ಲಿ 4.27 ಚದರ ಅಡಿ ಅಪಾರ್ಟ್‌ಮೆಂಟ್ ಅನ್ನು 19.30 ಕೋಟಿ ರೂ.ಗೆ ಖರೀದಿಸಿದರೆ, ಅದೇ ಕಾಂಪ್ಲೆಕ್ಸ್‌ನಲ್ಲಿರುವ 1,745 ಚದರ ಅಡಿ ಅಪಾರ್ಟ್‌ಮೆಂಟ್ ಅನ್ನು ಅಪರಶಕ್ತಿ 7.25 ಕೋಟಿ ರೂ.ಗೆ ಖರೀದಿಸಿದ್ದಾರೆ.

ಮೂಲಗಳ ಪ್ರಕಾರ, ಆಯುಷ್ಮಾನ್ ಖುರಾನಾ ಅವರು ನವೆಂಬರ್ 29, 2021 ರಂದು 96.50 ಲಕ್ಷ ರೂಪಾಯಿಗಳ ಸ್ಟ್ಯಾಂಪ್ ಡ್ಯೂಟಿಯನ್ನು ಪಾವತಿಸಿದ್ದಾರೆ. ಹಾಗೆಯೇ ಯೂನಿಟ್ ನೋಂದಣಿಗಾಗಿ ಅಪರಶಕ್ತಿ ಡಿಸೆಂಬರ್ 7 ರಂದು 36.25 ಲಕ್ಷವನ್ನು ಪಾವತಿಸಿದ್ದಾರೆ.

ಆಯುಷ್ಮಾನ್ ಅಪಾರ್ಟ್‌ಮೆಂಟ್ 4 ಕಾರ್ ಪಾರ್ಕಿಂಗ್‌ನೊಂದಿಗೆ ಬರುತ್ತದೆ ಮತ್ತು ಅಪರಶಕ್ತಿ ಅವ್ರ ಅಪಾರ್ಟ್‌ಮೆಂಟ್ 2 ಕಾರ್ ಪಾರ್ಕಿಂಗ್ ಸ್ಥಳಗಳನ್ನು ಹೊಂದಿದೆ. ಈ ಸಹೋದರರು 2020 ರಲ್ಲಿ ತಮ್ಮ ಕುಟುಂಬಕ್ಕಾಗಿ 9 ಕೋಟಿ ರೂಪಾಯಿಗಳಲ್ಲಿ ಪಂಚಕುಲಾದಲ್ಲಿ ಮನೆಯನ್ನು ಖರೀದಿಸಿದ್ದರು.

ಆಯುಷ್ಮಾನ್ ಇತ್ತೀಚೆಗೆ ವಾಣಿ ಕಪೂರ್ ಜೊತೆ ‘ಚಂಡೀಗರ್ ಕರೇ ಆಶಿಕಿ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು, ಅನುಭವ್ ಸಿನ್ಹಾ ಅವರ ಪೊಲಿಟಿಕಲ್ ಡ್ರಾಮ ‘ಅನೇಕ್’ ಅವರ ನೆಕ್ಸ್ಟ್ ಪ್ರಾಜೆಕ್ಟ್. ಇನ್ನು ಅಪರಶಕ್ತಿ ಖುರಾನಾ ಶೀಘ್ರದಲ್ಲೇ ‘ಧೋಖಾ ರೌಂಡ್ ಡಿ ಕಾರ್ನರ್’ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...