alex Certify ಗೂಡ್ಸ್​ ರೈಲು ಬಡಿದು ಅಪ್ರಾಪ್ತ ಅಕ್ಕ – ತಮ್ಮ ದುರಂತ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗೂಡ್ಸ್​ ರೈಲು ಬಡಿದು ಅಪ್ರಾಪ್ತ ಅಕ್ಕ – ತಮ್ಮ ದುರಂತ ಸಾವು

ಅಕ್ಕ – ತಮ್ಮನಿಗೆ ಗೂಡ್ಸ್​ ರೈಲು ಬಡಿದ ಪರಿಣಾಮ ಇಬ್ಬರೂ ಸಾವನ್ನಪ್ಪಿದ ದಾರುಣ ಘಟನೆ ಉತ್ತರ ಪ್ರದೇಶದ ಎಥ್ವಾ ಜಿಲ್ಲೆಯಲ್ಲಿ ಸಂಭವಿಸಿದೆ. ಮೃತ ಯುವತಿಯನ್ನು 17 ವರ್ಷದ ಅಂಜು ಹಾಗೂ ಈಕೆಯ ಮೃತ ತಮ್ಮನನ್ನು 15 ವರ್ಷದ ನಿತೇಶ್​ ಎಂದು ಗುರುತಿಸಲಾಗಿದೆ.

ಎಥ್ವಾ ಪೊಲೀಸರು ನೀಡಿದ ಮಾಹಿತಿಯ ಪ್ರಕಾರ ಕಾನ್ಪುರದ ಕಡೆಗೆ ಹೊರಟಿದ್ದ ಗೂಡ್ಸ್​ ರೈಲು ಬೆಳಗ್ಗೆ 6 ಗಂಟೆ ಸುಮಾರಿಗೆ ಡಿಕ್ಕಿ ಹೊಡೆದಿದೆ. ಅಪ್ರಾಪ್ತರಿಬ್ಬರು ಹೊಲಕ್ಕೆ ಕೆಲಸಕ್ಕಾಗಿ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.

ಇಬ್ಬರ ಶವಗಳನ್ನು ರೈಲ್ವೆ ಪೊಲೀಸರು ವಶಕ್ಕೆ ಪಡೆದಿದ್ದು ಮರಣೋತ್ತರ ಪರೀಕ್ಷೆಗೆಂದು ಜಿಲ್ಲಾಸ್ಪತ್ರೆಗೆ ಶವಗಳನ್ನು ಕಳುಹಿಸಿಕೊಟ್ಟಿದ್ದಾರೆ. ಪೊಲೀಸ್​ ತನಿಖೆಯ ವೇಳೆ ಅಂಜು ಮೊದಲ ವರ್ಷದ ಬಿಎ ವಿದ್ಯಾರ್ಥಿನಿಯಾಗಿದ್ದಳು ಹಾಗೂ ನಿತೇಶ್​ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಎನ್ನಲಾಗಿದೆ. ಕೃಷಿ ಭೂಮಿಯನ್ನೇ ನಂಬಿಕೊಂಡು ಈ ಕುಟುಂಬದ ಜೀವನ ಸಾಗುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ.

ರೈಲು ಬರುತ್ತಿದ್ದ ಬಗ್ಗೆ ಅಂದಾಜಿಲ್ಲದ ಅಂಜುಗೆ ನಿತೇಶ್​ ಅಲರ್ಟ್​ ಮಾಡಲು ಯತ್ನಿಸಿದ್ದಾನೆ. ಆದರೆ ಇದನ್ನು ಅಂಜು ಕೇಳಿಸಿಕೊಂಡಿರಲಿಲ್ಲ. ಅಪಾಯದಿಂದ ಅಂಜುವನ್ನು ಎಳೆಯಲು ಯತ್ನಿಸಿದ ವೇಳೆ ಇಬ್ಬರಿಗೂ ರೈಲು ಬಡಿದಿದೆ. ಪರಿಣಾಮ ಇಬ್ಬರೂ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್​ ಅಧಿಕಾರಿ ಮಾಹಿತಿ ನೀಡಿದರು.

ಇಬ್ಬರನ್ನೂ ಪ್ರಾಣಾಪಾಯದಿಂದ ಪಾರು ಮಾಡಲು ಸ್ಥಳೀಯರು ಯತ್ನಿಸಿದ್ದಾರೆ. ಆದರೆ ರೈಲು ಬಡಿದ ಕೆಲವೇ ಕ್ಷಣಗಳಲ್ಲಿ ಅಪ್ರಾಪ್ತರಿಬ್ಬರೂ ಸಾವನ್ನಪ್ಪಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...