alex Certify ಮಗಳ ಬಾಯ್ ಫ್ರೆಂಡ್ ಜೊತೆ ಓಡಿ ಹೋದ ತಾಯಿ….! ಗೆಳೆಯನ ತಂದೆ ಮದುವೆಯಾದ ಮಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಗಳ ಬಾಯ್ ಫ್ರೆಂಡ್ ಜೊತೆ ಓಡಿ ಹೋದ ತಾಯಿ….! ಗೆಳೆಯನ ತಂದೆ ಮದುವೆಯಾದ ಮಗಳು

ಬ್ರಿಟನ್ ನಲ್ಲಿ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ಮಗಳ ಬಾಯ್ ಫ್ರೆಂಡ್ ಜೊತೆ ತಾಯಿ ಓಡಿ ಹೋಗಿದ್ದಾಳೆ. ಇದಾದ ನಂತ್ರ ಹುಡುಗಿ, ಬಾಯ್ ಫ್ರೆಂಡ್ ತಂದೆಯನ್ನು ಮದುವೆಯಾಗಿದ್ದಾಳೆ. ಘಟನೆ ಗ್ಲೌಸೆಸ್ಟರ್‌ಶೈರ್‌ನಲ್ಲಿ ನಡೆದಿದೆ.

ಜೆಸ್ ಆಲ್ಡ್ರಿಡ್ಜ್ ಗೆಳೆಯ ರಯಾನ್ ಶೆಲ್ಟನ್, ಜೆಸ್ ತಾಯಿಯೊಂದಿಗೆ ಮನೆಯಿಂದ ಓಡಿಹೋಗಿದ್ದಾನೆ. ನಂತ್ರ ಜೆಸ್, ರಯಾನ್ ತಂದೆ ಮದುವೆಯಾಗಿದ್ದಾಳೆ. ರಯಾನ್, ಜೆಸ್ ತಾಯಿ ಹಾಗೂ ತಂದೆ ಜೊತೆ ಒಂದೇ ಮನೆಯಲ್ಲಿದ್ದನಂತೆ. ಕೊರೊನಾ ಲಾಕ್ ಡೌನ್ ನಲ್ಲಿ ತಾಯಿ ಜೊತೆಗಿದ್ದ ರಯಾನ್ ಗೆ ಪ್ರೀತಿ ಚಿಗುರಿದೆ. ಈ ಬಗ್ಗೆ ಜೆಸ್ ಗೆ ಸಂಶಯ ಬಂದಿತ್ತಂತೆ.

ʼಅಯ್ಯೋ… ಕನ್ನಡ ಕಟುಕರ ಕೈಯಲ್ಲಿ ಸಿಕ್ಕಿಕೊಂಡಿದೆʼ: ಬಿಜೆಪಿ ನಾಯಕರಿಗೆ ನನ್ನ ಧಿಕ್ಕಾರ ಎಂದ ಹೆಚ್​ಡಿಕೆ

24 ವರ್ಷದ ಜೆಸ್, ಹೆರಿಗೆಗಾಗಿ ಆಸ್ಪತ್ರೆಗೆ ಹೋದ ಸಂದರ್ಭದಲ್ಲಿ ರಯಾನ್, ತಾಯಿ ಜಾರ್ಜಿಯಾ ಜೊತೆ ಓಡಿ ಹೋಗಿದ್ದನಂತೆ. ತಾಯಿ, ತನ್ನ ಹಾಗೂ ತನ್ನ ಮಕ್ಕಳನ್ನು ಬಿಟ್ಟು ಹೋಗ್ತಾಳೆಂಬ ಕಲ್ಪನೆ ನನಗಿರಲಿಲ್ಲವೆಂದು ಜೆಸ್ ಹೇಳಿದ್ದಾಳೆ. ರಯಾನ್ ಗೆ ತಾಯಿಯಿಲ್ಲ. ರಯಾನ್ ತಂದೆ ಒಂಟಿಯಾಗಿದ್ದಾರೆ. ಅವರಿಗೆ ಆಸರೆಯಾಗಬೇಕೆಂಬ ಕಾರಣಕ್ಕೆ ಅವರನ್ನು ಮದುವೆಯಾಗಿದ್ದೇನೆಂದು ಜೆಸ್ ಹೇಳಿದ್ದಾಳೆ. ಯಾರನ್ನು ಯಾರು ಬೇಕಾದ್ರೂ ಪ್ರೀತಿ ಮಾಡಬಹುದು. ಇದನ್ನು ಹೇಳಲು ಸಾಧ್ಯವಿಲ್ಲವೆಂದು ತಾಯಿ ಹೇಳಿದ್ದಾಳಂತೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...