alex Certify ಸೋದರಿಯ ವಿವಾಹದಂದು ಸೂಪರ್‌ ಡ್ಯಾನ್ಸ್‌ ಮಾಡಿದ ಯುವಕನ ವಿಡಿಯೋ ವೈರಲ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೋದರಿಯ ವಿವಾಹದಂದು ಸೂಪರ್‌ ಡ್ಯಾನ್ಸ್‌ ಮಾಡಿದ ಯುವಕನ ವಿಡಿಯೋ ವೈರಲ್‌

ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಮತ್ತು ನಟಿ ಸಾರಾ ಅಲಿ ಖಾನ್‌ ಅವರ ಕ್ಯೂಟ್‌ ಅಭಿನಯದ ’ಸ್ವೀಟ್‌ಹಾರ್ಟ್‌’ ಹಾಡಿಗೆ ಯುವಕನೊಬ್ಬ ಬೊಂಬಾಟ್‌ ಸ್ಟೆಫ್ಸ್‌ ಹಾಕಿದ್ದಾನೆ. ಅದು ಕೂಡ ತನ್ನ ಸೋದರಿಯ ವಿವಾಹ ಸಮಾರಂಭದಲ್ಲಿ.
ಈ ಕುಣಿತ ನಿನಗಾಗಿ ಸೋದರಿ ಎಂದು ಮೈಕ್‌ನಲ್ಲಿ ಹೇಳುವ ಯುವಕ, ಕುಣಿದಿರುವ ದೇಸೀ ಸ್ಟೈಲ್‌ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಹುಡುಗಿಯರು ಫಿದಾ ಆಗಿದ್ದಾರೆ.

ಅಂದಹಾಗೆ, ಡ್ಯಾನ್ಸ್‌ನಿಂದ ವಿಡಿಯೊ ವೈರಲ್‌ ಮಾಡಿರುವ ಈತನ ಹೆಸರು ಗುಣ್‌ವೀತ್‌ ಸಿಂಗ್‌ ದಾಂಗ್‌ ಅಂತೆ. ಸೋದರಿ ತಾನ್ಯಾಳ ಮದುವೆಯಲ್ಲಿನ ಸಮಾರಂಭದಲ್ಲಿ ಸ್ಟೆಫ್ಸ್‌ ಹಾಕಿದ್ದಾನೆ. ಸುಮಾರು 2500 ಜನರು ಈ ಡ್ಯಾನ್ಸ್‌ ವಿಡಿಯೊ ನೋಡಿದ್ದು, ನೂರಾರು ಮಂದಿ ’ವಾವ್‌’ ಎಂದು ಮೆಚ್ಚುಗೆಯ ಕಮೆಂಟ್‌ ಹಾಕಿದ್ದಾರೆ.

2018ರಲ್ಲಿ ತೆರೆಕಂಡ ಹಿಂದಿ ಸಿನಿಮಾ ಕೇದಾರನಾಥ್‌ನಲ್ಲಿ ಸುಶಾಂತ್‌ ಸಿಂಗ್‌ ರಜಪೂತ್‌ ಮತ್ತು ನಟಿ ಸಾರಾ ಅಲಿ ಖಾನ್‌ ಅಭಿನಯಿಸಿದ್ದಾರೆ. ಅರ್ಚಕರ ಮಗಳೊಂದಿಗೆ ಪ್ರೇಮದಲ್ಲಿ ಬೀಳುವ ಮನ್ಸೂರ್‌ ಎಂಬ ಮುಸ್ಲಿಂ ಯುವಕನ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...