alex Certify BREAKING : ಮಹಿಳೆಗೆ ನಾಯಿ ಕಚ್ಚಿದ ಪ್ರಕರಣ : ಸಿಸಿಟಿವಿಯ ‘DVR’ ನೀಡುವಂತೆ ನಟ ದರ್ಶನ್ ಗೆ ನೋಟಿಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ಮಹಿಳೆಗೆ ನಾಯಿ ಕಚ್ಚಿದ ಪ್ರಕರಣ : ಸಿಸಿಟಿವಿಯ ‘DVR’ ನೀಡುವಂತೆ ನಟ ದರ್ಶನ್ ಗೆ ನೋಟಿಸ್

ಬೆಂಗಳೂರು : ಮಹಿಳೆಗೆ ನಾಯಿ ಕಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಟಿವಿಯ ಡಿವಿಆರ್ ನೀಡುವಂತೆ ಸ್ಯಾಂಡಲ್ ವುಡ್ ನಟ ದರ್ಶನ್ ಗೆ ಪೊಲೀಸರು ನೋಟಿಸ್ ನೀಡಿದ್ದಾರೆ.

ಪ್ರಕರಣ ಸಂಬಂಧ ನಟ ದರ್ಶನ್ ಅವರ ಡಾಗ್ ಕೇರ್ ಗಳಿಂದ ಹೇಳಿಕೆ ಪಡೆದ ಪೊಲೀಸರು ಇದೀಗ ಸಿಸಿಟಿವಿಯ ಡಿವಿಆರ್ ನೀಡುವಂತೆ ನಟ ದರ್ಶನ್ ಅವರಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ. ದರ್ಶನ್ ಅವರ ಮನೆಯ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲು ಡಿವಿ ಆರ್ ನೀಡುವಂತೆ ನಟ ದರ್ಶನ್ ಗೆ ಪೊಲೀಸರು ನೋಟಿಸ್ ನೀಡಿದ್ದಾರೆ.
ಮಹಿಳೆಗೆ ನಾಯಿ ಕಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್ ವುಡ್ ನಟ ದರ್ಶನ್ ಮನೆ ಬಳಿ ಪೊಲೀಸರು ಸ್ಥಳ ಮಹಜರು ನಡೆಸಿದ್ದರು. ದೂರುದಾರೆ ಅಮಿತಾ ಜಿಂದಾಲ್ ಈ ಸಂಬಂಧ ದೂರು ನೀಡಿದ್ದರು.

ಸ್ಯಾಂಡಲ್ ವುಡ್ ನಟ ದರ್ಶನ್ ಅವರ ಮನೆಯ ನಾಯಿ ಕಚ್ಚಿದೆ ಎಂದು ಮಹಿಳೆಯೊಬ್ಬರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರುದಾರ ಅಮಿತಾ ಜಿಂದಾಲ್ ಅವರು ಕಳೆದ ಅಕ್ಟೋಬರ್ 28 ರಂದು ಕಾರ್ಯಕ್ರಮವೊಂದಕ್ಕೆ ತೆರಳುವ ವೇಳೆ ನಟ ದರ್ಶನ್ ಅವರ ಮನೆಯ ಎದುರಿನ ಖಾಲಿ ಸ್ಥಳದಲ್ಲಿದ್ದ ತಮ್ಮ ಕಾರು ನಿಲ್ಲಿಸಿ ತೆರಳಿದ್ದರು. ಕಾರ್ಯಕ್ರಮ ಮುಗಿಸಿ ಕಾರು ತೆಗೆಯಲು ಬಂದಾಗ ಮೂರು ನಾಯಿಗಳ ಪೈಕಿ ಎರಡನ್ನು ಕಟ್ಟಲಾಗಿತ್ತು. ಒಂದು ನಾಯಿ ದಾಳಿ ನಡೆಸಿದೆ ಎಂದು ದೂರು ನೀಡಿದ್ದರು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...