alex Certify Breaking : ಸಿಎಂ ಸಿದ್ದರಾಮಯ್ಯ ಎದುರೇ ಕಿತ್ತಾಡಿಕೊಂಡ `ಕೈ’ ನಾಯಕಿಯರು! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Breaking : ಸಿಎಂ ಸಿದ್ದರಾಮಯ್ಯ ಎದುರೇ ಕಿತ್ತಾಡಿಕೊಂಡ `ಕೈ’ ನಾಯಕಿಯರು!

ಉಡುಪಿ : ಸಿಎಂ ಸಿದ್ದರಾಮಯ್ಯ ಇಂದು ಕರಾವಳಿ ಜಿಲ್ಲೆಗಳ ಪ್ರವಾಸ ಕೈಗೊಂಡಿದ್ದು,  ಈ ವೇಳೆ ಸಿಎಂ ಎದುರೇ ಕಾಂಗ್ರೆಸ್ ಮಹಿಳಾ ಮುಖಂಡರು ಕಿತ್ತಾಡಿಕೊಂಡಿರುವ ಘಟನೆ ನಡೆದಿದೆ.

ಇಂದು ಸಿಎಂ ಸಿದ್ದರಾಮಯ್ಯ ಉಡುಪಿಗೆ ಆಗಮಿಸಿದ್ದ ವೇಳೆ ಕಾರಿನಲ್ಲಿ ಸಿಎಂ ಸಿದ್ದರಾಮಯ್ಯಗೆ ಹೂಗುಚ್ಛ ನೀಡಲು ಇಬ್ಬರು ಮಹಿಳಾ ನಾಯಕಿರು ಕಿತ್ತಾಡಿಕೊಂಡಿದ್ದಾರೆ. ಕಾರಿನಲ್ಲಿ ಆಗಮಿಸಿದ ಸಿಎಂ ಸಿದ್ದರಾಮಯ್ಯಗೆ ಹೂಗುಚ್ಛ ನೀಡಲು ಮುಂದಾದ ಕಾಂಗ್ರೆಸ್ ನಾಯಕಿ ಶಾಲೆಟ್ ಪಿಂಟೋ ಮತ್ತೊಬ್ಬ ಮಹಿಳಾ ನಾಯಕಿಯನ್ನು ತಳ್ಳಿ ಮುಂದೆ ಹೋಗಿದ್ದಾರೆ.

ಸಿಎಂ ಅವರನ್ನುಸ್ವಾಗತಿಸಲು ಹೂಗುಚ್ಛ ತಂದಿದ್ದ ಕವಿತಾ ಎಂಬುವರು ಮೊದಲು ಕೊಡಲು ಮುಂದಾಗಿದ್ದಾರೆ. ಈ ವೇಳೆ ಶಾಲೆಟ್ ಪಿಂಟೋ ಕವಿತಾ ಅವರನ್ನು ತಳ್ಳಿ ಹೂಗುಚ್ಛ ನೀಡಿದ್ದಾರೆ. ಈ ವೇಳೆ ಇಬ್ಬರು ಸಿಎಂ ಎದುರಲ್ಲೇ ಕಿತ್ತಾಡಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...