alex Certify ಪಡಿತರ ಚೀಟಿದಾರರಿಗೆ ಮುಖ್ಯ ಮಾಹಿತಿ: 1.17 ಲಕ್ಷ ಕಾರ್ಡ್ ತಿದ್ದುಪಡಿ, 93 ಸಾವಿರ ಬಿಪಿಎಲ್ ಕಾರ್ಡ್ ತಿರಸ್ಕೃತ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಡಿತರ ಚೀಟಿದಾರರಿಗೆ ಮುಖ್ಯ ಮಾಹಿತಿ: 1.17 ಲಕ್ಷ ಕಾರ್ಡ್ ತಿದ್ದುಪಡಿ, 93 ಸಾವಿರ ಬಿಪಿಎಲ್ ಕಾರ್ಡ್ ತಿರಸ್ಕೃತ…?

ಬೆಂಗಳೂರು: ಬಿಪಿಎಲ್ ಕಾರ್ಡ್ ದಾರರಿಗೆ ಸರ್ಕಾರದಿಂದ ಸಿಹಿ ಸುದ್ದಿ ಸಿಕ್ಕಿದೆ. ಕಾರ್ಡ್ ತಿದ್ದುಪಡಿಗೆ 3.18 ಲಕ್ಷ ಮಂದಿ ಅರ್ಜಿ ಸಲ್ಲಿಸಿದ್ದಾರೆ.

ಒಂದು ತಿಂಗಳಲ್ಲಿ ಹೊಸ ತಿದ್ದುಪಡಿಗೆ 53,219 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಕಾರ್ಡ್ ತಿದ್ದುಪಡಿಗೆ ಒಟ್ಟು 3.70 ಲಕ್ಷ ಅರ್ಜಿಗಳ ಸಲ್ಲಿಕೆಯಾಗಿವೆ. ಈ ಪೈಕಿ 1.17 ಲಕ್ಷ ಕಾರ್ಡ್ ತಿದ್ದುಪಡಿ ಮಾಡಲಾಗಿದೆ. 3.70 ಲಕ್ಷ ಅರ್ಜಿಗಳ ಪೈಕಿ 93,362 ಬಿಪಿಎಲ್ ಕಾರ್ಡ್ ತಿರಸ್ಕೃತಗೊಂಡಿವೆ.

ಹೆಸರು ಬದಲಾವಣೆ, ಸೇರ್ಪಡೆಗೆ ಮಾತ್ರ ಅವಕಾಶವಿತ್ತು. 1.17 ಲಕ್ಷ ಕಾರ್ಡ್ ಗಳ ತಿದ್ದುಪಡಿಗೆ ಮಾತ್ರ ಸಮ್ಮತಿಸಲಾಗಿದೆ. 93,362 ಕಾರ್ಡ್ ತಿರಸ್ಕೃತಗೊಂಡಿವೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...