alex Certify ನಶೆಯಲ್ಲಿ ಬಾಯ್ ಫ್ರೆಂಡ್ ಜೊತೆ ಯಡವಟ್ಟು…..! ಈಗ ಕೈಕೊಟ್ಟ ಗರ್ಲ್ ಫ್ರೆಂಡ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಶೆಯಲ್ಲಿ ಬಾಯ್ ಫ್ರೆಂಡ್ ಜೊತೆ ಯಡವಟ್ಟು…..! ಈಗ ಕೈಕೊಟ್ಟ ಗರ್ಲ್ ಫ್ರೆಂಡ್

ಮದ್ಯದ ನಶೆಯಲ್ಲಿ ಏನು ಮಾಡ್ತೇವೆ ಎಂಬುದು ಗೊತ್ತಿರುವುದಿಲ್ಲ. ನಶೆಯಲ್ಲಿ ವ್ಯಕ್ತಿಯೊಬ್ಬ ಮಾಡಿಕೊಂಡ ಯಡವಟ್ಟು ಈಗ ಆತನ ಪ್ರೀತಿ ಮುರಿದು ಬೀಳಲು ಕಾರಣವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬ ತನ್ನ ಕಥೆಯನ್ನು ಹೇಳಿಕೊಂಡಿದ್ದಾನೆ. ಬಾಯ್ ಫ್ರೆಂಡ್ ಗಾಗಿ ಆತ ಮಾಡಿದ ತಪ್ಪು ಈಗ ಗರ್ಲ್ ಫ್ರೆಂಡ್ ದೂರವಾಗಲು ಕಾರಣವಾಗಿದೆಯಂತೆ.

ವ್ಯಕ್ತಿಗೆ 36 ವರ್ಷ. ಆತನ ಗರ್ಲ್ ಫ್ರೆಂಡ್ ಗೆ 32 ವರ್ಷ. ಇಬ್ಬರೂ ಎರಡು ವರ್ಷಗಳಿಂದ ಒಟ್ಟಿಗಿದ್ದಾರೆ. ಆದ್ರೆ ಒಂದು ದಿನ ಸ್ನೇಹಿತರ ಜೊತೆ ಈತ ಪಾರ್ಟಿಗೆ ಹೋಗಿದ್ದನಂತೆ. ಪಾರ್ಟಿಯಲ್ಲಿ 6 ಪೆಗ್ ಮದ್ಯಪಾನ ಮಾಡಿದ್ದಾನೆ. ಅಲ್ಲಿ ಸ್ಕೂಲ್ ಫ್ರೆಂಡ್ ಭೇಟಿಯಾಗಿದೆ. ಇಬ್ಬರು ಮಾತನಾಡ್ತಾ ಬಾಲ್ಕನಿಗೆ ಹೋಗಿದ್ದಾರೆ. ಮತ್ತೆ ಮದ್ಯಪಾನ ಮಾಡುವ ಜೊತೆಗೆ ಧೂಮಪಾನ ಕೂಡ ಮಾಡಿದ್ದಾನೆ. ಆತನ ಬಾಲ್ಯ ಸ್ನೇಹಿತ ಈತನ ಜೊತೆ ಕೆಟ್ಟದಾಗಿ ನಡೆದುಕೊಂಡಿದ್ದಾನೆ. ಮೈ-ಕೈ ಸ್ಪರ್ಶಿಸಿದ್ದಾನೆ. ನಶೆಯಲ್ಲಿದ್ದ ವ್ಯಕ್ತಿಗೆ ರಾತ್ರಿ ಏನಾಗಿದೆ ಎಂಬುದು ಸರಿಯಾಗಿ ತಿಳಿದಿಲ್ಲ. ಬೆಳಿಗ್ಗೆ ಎದ್ದಾಗ ತಾನು ಗರ್ಲ್ ಫ್ರೆಂಡ್ ಗೆ ಮೋಸ ಮಾಡಿದ್ದೇನೆ ಎಂಬ ಅರಿವಾಗಿದೆ. ಆದ್ರೆ ಇದ್ರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ ಅಲ್ಲಿಂದ ಬಂದಿದ್ದಾನೆ.

ಆದ್ರೆ ಕೆಲ ದಿನಗಳಲ್ಲಿ ಆತನ ಬಳಿಗೆ ಬಂದ ಗರ್ಲ್ ಫ್ರೆಂಡ್ ನೈಟ್ ಪಾರ್ಟಿ ಬಗ್ಗೆ ವಿಚಾರಿಸಿದ್ದಾಳೆ. ಒಬ್ಬ ಹುಡುಗನಿಗಾಗಿ ನೀನು ನನಗೆ ಮೋಸ ಮಾಡಿದ್ದು ಸಹಿಸಿಕೊಳ್ಳಲಾಗದ ವಿಷ್ಯ ಎಂದಿದ್ದಾಳೆ. ಇಬ್ಬರ ಮಧ್ಯೆ ಮಾತು ನಿಂತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...