alex Certify ಆಟವಾಡುವಾಗಲೇ ನಡೆದಿದೆ ನಡೆಯಬಾರದ ಘಟನೆ: ಬಾಲಕನ ಜೀವ ತೆಗೆದ ಸೀರೆ ಜೋಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಟವಾಡುವಾಗಲೇ ನಡೆದಿದೆ ನಡೆಯಬಾರದ ಘಟನೆ: ಬಾಲಕನ ಜೀವ ತೆಗೆದ ಸೀರೆ ಜೋಲಿ

ಮಂಡ್ಯ: ಸೀರೆ ಜೋಲಿ ಕುತ್ತಿಗೆಗೆ ಸುತ್ತಿಕೊಂಡು ಬಾಲಕ ಉಸಿರುಗಟ್ಟಿ ಮೃತಪಟ್ಟ ಘಟನೆ ಮಂಡ್ಯ ಜಿಲ್ಲೆಯ ಕಿಕ್ಕೇರಿ ಸಮೀಪದ ಬೇವಿನಹಳ್ಳಿ ಕೊಪ್ಪಲು ಗ್ರಾಮದಲ್ಲಿ ನಡೆದಿದೆ.

ಶ್ರೀನಿವಾಸ ಅವರ ಪುತ್ರ 9 ವರ್ಷದ ಸಮರ್ಥ್ ಮೃತಪಟ್ಟ ಬಾಲಕ ಎಂದು ಹೇಳಲಾಗಿದೆ. ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮೂರನೇ ತರಗತಿ ಓದುತ್ತಿದ್ದ ಸಮರ್ಥ್ ಗುರುವಾರ ಶಾಲೆ ಮುಗಿದ ನಂತರ ಮನೆಗೆ ಆಗಮಿಸಿದ್ದು, ಸೀರೆಯಿಂದ ಕಟ್ಟಿದ್ದ ಜೋಲಿಯಲ್ಲಿ ಆಟವಾಡುವಾಗ ಘಟನೆ ನಡೆದಿದೆ. ಸೀರೆ ಜೋಲಿಯಲ್ಲಿ ಜೋಕಾಲಿ ಆಡುತ್ತಿದ್ದ ಸಮರ್ಥ್ ಕುತ್ತಿಗೆಗೆ ಸೀರೆ ಉರುಳು ಸುತ್ತಿಕೊಂಡಿದೆ. ಅದರಿಂದ ಹೊರಬರಲಾಗದೆ ಉಸಿರುಗಟ್ಟಿ ಸಮರ್ಥ್ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...