alex Certify ಗೋಣಿಚೀಲದ ದೊಗಲೆ ಪ್ಯಾಂಟ್​: ಬೆಲೆ ಕೇಳಿದ್ರೆ ಹೌಹಾರಿ ಹೋಗ್ತೀರಿ……! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗೋಣಿಚೀಲದ ದೊಗಲೆ ಪ್ಯಾಂಟ್​: ಬೆಲೆ ಕೇಳಿದ್ರೆ ಹೌಹಾರಿ ಹೋಗ್ತೀರಿ……!

ಪ್ಲಾಜೋ ಪ್ಯಾಂಟ್‌ಗಳು ಎಂದರೆ ಹಲವರಿಗೆ ಅರ್ಥವಾಗಲಿಕ್ಕಿಲ್ಲ. ಇದನ್ನು ಸರಳೀಕರಿಸಿ ಹೇಳುವುದಾದರೆ ವೈಡ್​ ಪ್ಯಾಂಟ್​ಗಳು ಇದರ ಅರ್ಥ ಆಡು ಭಾಷೆಯಲ್ಲಿ ಹೇಳುವುದಾದರೆ ದೊಗಲೆ ಪ್ಯಾಂಟ್​ಗಳು ಎಂದು.

ಅಸಲಿಗೆ ಇದು ಪ್ಯಾಂಟ್​ ಅಲ್ಲ, ಬದಲಿಗೆ ಅಗಲವಾಗಿರುವ ಚಡ್ಡಿಗಳು ಎಂದು ಹೇಳಬಹುದು. ಈಗ ಇಂಥದ್ದೇ ಪ್ಯಾಂಟ್​ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಇದಕ್ಕೆ ಕಾರಣ, ಇದನ್ನು ತಯಾರು ಮಾಡಿರುವುದು ಗೋಣಿಚೀಲದಿಂದ !

ಇತ್ತೀಚಿನ ದಿನಗಳಲ್ಲಿ ಫ್ಯಾಷನ್​ ಹೇಗೆಲ್ಲಾ ಬದಲಾವಣೆ ಆಗುತ್ತಿದೆ. ಕೆಲವೊಂದು ಫ್ಯಾಷನ್​ಗಳನ್ನು ಊಹಿಸುವುದೂ ಕಷ್ಟವಾಗಿದೆ. ಬೇಡ ಎಂದು ಬಿಸಾಕುವ, ಮೂಲೆಗುಂಪು ಮಾಡುವ ಸಾಮಗ್ರಿಗಳೇ ಈಗ ಫ್ಯಾಷನ್​ ಲೋಕವನ್ನು ಆವರಿಸುತ್ತಿದೆ. ಅದರಲ್ಲಿ ಒಂದು ಗೋಣಿಚೀಲ.

ಹಲವಾರು ಫ್ಯಾಷನ್​ ಷೋಗಳಲ್ಲಿ ರೂಪದರ್ಶಿಯರು ಗೋಣಿಚೀಲದ ಉಡುಪುಗಳನ್ನು ತೊಟ್ಟು ಕ್ಯಾಟ್​ವಾಕ್ ​ಮಾಡುವುದನ್ನು ಕಾಣಬಹುದು. ಅದರಂತೆಯೇ ಈಗ ವೈರಲ್​ ಆಗುತ್ತಿರುವ ದೊಗಲೆ ಪ್ಯಾಂಟ್​ ಕೂಡ.

ಆದರೆ ಇದು ಇಷ್ಟೊಂದು ಸುದ್ದಿ ಮಾಡಲು ಕಾರಣ, ಇದರ ಬೆಲೆ. ವಿಡಿಯೋವನ್ನು ನೀವು ನೋಡಿದರೆ ಈ ಪ್ಯಾಂಟ್ ಬೆಲೆ ಕೇಳಿ ಹೌಹಾರುವುದು ಗ್ಯಾರಂಟಿ. ಏಕೆಂದರೆ, ಇದರ ಬೆಲೆ 60 ಸಾವಿರ ರೂಪಾಯಿಗಳು ! ನೈಸರ್ಗಿಕವಾಗಿ ಇರುವ ಸೆಣಬಿನಿಂದ ಇದು ಮಾಡಿರುವ ಕಾರಣ, ಧರಿಸಲು ಕೂಡ ಸಾಫ್ಟ್​ ಸಾಫ್ಟ್​ ಆಗಿರುತ್ತದೆ. ಚರ್ಮಕ್ಕೂ ಯಾವುದೇ ತೊಂದರೆ ಇಲ್ಲ ಎಂದು ಈ ಪರಿಯ ಬೆಲೆ ಇಟ್ಟಿರುವುದಾಗಿ ಕಂಪೆನಿ ಹೇಳಿಕೊಂಡಿದೆ. ಇನ್ನೂ ಈ ಕಣ್ಣಿನಿಂದ ಏನೇನು ನೋಡಬೇಕೋ ಎಂದು ನೆಟ್ಟಿಗರು ಕಮೆಂಟ್​ ಮಾಡುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...