alex Certify ಪೊಲೀಸರ ಭರ್ಜರಿ ಕಾರ್ಯಾಚರಣೆ: 81 ನಾಡಬಾಂಬ್ ವಶ, ಇಬ್ಬರು ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೊಲೀಸರ ಭರ್ಜರಿ ಕಾರ್ಯಾಚರಣೆ: 81 ನಾಡಬಾಂಬ್ ವಶ, ಇಬ್ಬರು ಅರೆಸ್ಟ್

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮುರು ತಾಲೂಕಿನ ದೇವಸಮುದ್ರ ಗ್ರಾಮದ ಮನೆಯೊಂದರ ಮೇಲೆ ಪೊಲೀಸರು ದಾಳಿ ನಡೆಸಿದ್ದು, 81 ನಾಡಬಾಂಬ್ ವಶಕ್ಕೆ ಪಡೆದುಕೊಂಡಿದ್ದಾರೆ.

ದೇವಸಮುದ್ರದ ಸುಮನ್ ಎಂಬುವರ ಮನೆ ಮೇಲೆ ದಾಳಿ ನಡೆಸಲಾಗಿದೆ. ದಾಳಿಯ ವೇಳೆ ನಾಡ ಬಾಂಬ್ ದಾಸ್ತಾನು ಮಾಡಿದ್ದ ಸುಮನ್ ಮತ್ತು ಪೂರೈಕೆ ಮಾಡಿದ್ದ ಆಂಧ್ರಪ್ರದೇಶ ಮೂಲದ ಗಂಗಣ್ಣ ಎಂಬುವರನ್ನು ಬಂಧಿಸಲಾಗಿದೆ.

ಕಾಡು ಪ್ರಾಣಿಗಳ ಬೇಟೆಗೆ ಸಂಗ್ರಹಿಡಲಾಗಿದ್ದ 81 ನಾಡಬಾಂಬ್ ವಶಕ್ಕೆ ಪಡೆದು ಅವುಗಳನ್ನು ಚಿತ್ರದುರ್ಗ ತಾಲೂಕಿನ ಶಿಬಾರ ಗ್ರಾಮದ ಬಳಿ ಬಾಂಬ್ ಸ್ಕ್ವಾಡ್ ನಿಷ್ಕ್ರಿಯಗೊಳಿಸಿದೆ. ಮೊಳಕಾಲ್ಮೂರು ಸಿಪಿಐ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ರಾಂಪುರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...