alex Certify ಎಲೆಕ್ಟ್ರಿಕ್ ಆಟೋ ಖರೀದಿಸಿದ ಬಾಲಿವುಡ್ ನಟಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಲೆಕ್ಟ್ರಿಕ್ ಆಟೋ ಖರೀದಿಸಿದ ಬಾಲಿವುಡ್ ನಟಿ…!

ಸಾಮಾನ್ಯವಾಗಿ ಸಿನಿಮಾ ಸ್ಟಾರ್ಸ್ ದುಬಾರಿ ವಾಹನಗಳ ಬಗ್ಗೆ ಕ್ರೇಜ್ ಹೊಂದಿರುತ್ತಾರೆ. ಕಾರ್ ಕ್ರೇಜ್ ಅಂತೂ ಬಾಲಿವುಡ್ ಕಲಾವಿದರಿಗೆ ಹೆಚ್ಚಾಗಿರುತ್ತೆ. ಆದ್ರೆ ಈ ವಿಚಾರದಲ್ಲಿ ವಿಭಿನ್ನವಾಗಿ ಕಾಣುವ ನಟಿ ಗುಲ್ ಪನಾಗ್ ಚಲನಚಿತ್ರ ನಿರ್ಮಾಣ ವ್ಯವಹಾರದಲ್ಲಿದ್ದು ಆಟೋಮೊಬೈಲ್ ಕ್ಷೇತ್ರದಲ್ಲಿ ವಿಭಿನ್ನ ಆಸಕ್ತಿ ಹೊಂದಿದ್ದಾರೆ.

ಅವರು ತಮ್ಮ ವಾಹನಗಳ ಆಯ್ಕೆ ಮತ್ತು ಅವುಗಳನ್ನು ಬಳಸುವ ರೀತಿಯಲ್ಲಿ ಜನಪ್ರಿಯವಾಗಿದ್ದಾರೆ. ಇದೀಗ ಅವರು ಹೊಸ ಮಹೀಂದ್ರ ಜೋರ್ ಗ್ರಾಂಡ್ ಎಲೆಕ್ಟ್ರಿಕ್ ತ್ರಿಚಕ್ರ ವಾಹನವನ್ನು 3.50 ಲಕ್ಷ ರೂಪಾಯಿಗಳ ಆರಂಭಿಕ ಬೆಲೆಯೊಂದಿಗೆ ಖರೀದಿಸಿದ್ದಾರೆ.

ಮಹೀಂದ್ರಾ ಎಲೆಕ್ಟ್ರಿಕ್‌ನ ಸಿಇಒ ಸುಮನ್ ಮಿಶ್ರಾ ಅವರು, ನಟಿ ಎಲೆಕ್ಟ್ರಿಕ್ ಆಟೋ ಖರೀದಿಸಿರುವ ಫೋಟೋ ಹಂಚಿಕೊಂಡು ‘ನಮ್ಮ ಮಹೀಂದ್ರಾ ಕುಟುಂಬಕ್ಕೆ ನಟಿ ಗುಲ್ ಪನಾಗ್ ಅವರಿಗೆ ಸುಸ್ವಾಗತ ಕೋರುತ್ತಿದ್ದೇವೆ. ನೀವು ನಮ್ಮ ಗ್ರಾಹಕರಾಗಿರುವುದಕ್ಕೆ ನಾವು ತುಂಬಾ ರೋಮಾಂಚನಗೊಂಡಿದ್ದೇವೆ. ಈ ಮೂಲಕ ಎಲೆಕ್ಟ್ರಿಕ್ ವಾಹನದೊಂದಿಗೆ ನೀವು ಏನು ಸಾಧಿಸುತ್ತೀರಿ ಎಂಬುದನ್ನು ನೋಡಲು ಕಾತರದಿಂದ ಕಾಯುತ್ತಿದ್ದೇವೆ’ ಎಂದು ಬರೆದುಕೊಂಡಿದ್ದಾರೆ.

ಹೊಸ ಎಲೆಕ್ಟ್ರಿಕ್ ಆಟೋ ರಿಕ್ಷಾದೊಂದಿಗೆ ನಟಿ ಗುಲ್ ಪನಾಗ್ ಚಾಲನೆ ಮಾಡುತ್ತಿರುವ ವಿಡಿಯೋನ ತಮ್ಮ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ಇದಕ್ಕೂ ಮುನ್ನ ನಟಿ ತನ್ನ ಮದುವೆಯಲ್ಲಿ ರಾಯಲ್ ಎನ್‌ಫೀಲ್ಡ್ ಬುಲೆಟ್ ಅನ್ನು ಬಳಸಿ ಸುದ್ದಿ ಮಾಡಿದ್ದರು. ಇದಲ್ಲದೆ, ಅವರು ಮಹೀಂದ್ರಾ ಸ್ಕಾರ್ಪಿಯೋ ಗೆಟ್‌ಅವೇ ಪಿಕಪ್ ಟ್ರಕ್ ಅನ್ನು ಹೊಂದಿರುವ ಏಕೈಕ ನಟಿಯಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...