alex Certify ಬಿಎಂಡಬ್ಲ್ಯು ʼ50 ಜಹ್ರೆ ಎಂ ಎಡಿಷನ್​’ ಭಾರತದಲ್ಲಿ ಬಿಡುಗಡೆ; ಇದರ ಬೆಲೆ ಎಷ್ಟು ಗೊತ್ತಾ ? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಎಂಡಬ್ಲ್ಯು ʼ50 ಜಹ್ರೆ ಎಂ ಎಡಿಷನ್​’ ಭಾರತದಲ್ಲಿ ಬಿಡುಗಡೆ; ಇದರ ಬೆಲೆ ಎಷ್ಟು ಗೊತ್ತಾ ?

ಕಾರು ಕ್ಷೇತ್ರದ ದಿಗ್ಗಜ ಬಿಎಂಡಬ್ಲ್ಯು ತನ್ನ ಐಕಾನಿಕ್​ ಜಿಎಂಬಿಎಚ್​ 50ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುವ ಸಂದರ್ಭದಲ್ಲಿ ಭಾರತದಲ್ಲಿ “50 ಜಹ್ರೆ ಎಂ ಎಡಿಷನ್​” ಬಿಡುಗಡೆ ಮಾಡಿದೆ, ಇದರ ಬೆಲೆ ರೂ. 1,52,90,000 (ಎಕ್ಸ್​ ಶೋ ರೂಂ).

ಸಂಪೂರ್ಣ ಬಿಲ್ಟ್​- ಅಪ್​ ಯೂನಿಟ್​ ನಲ್ಲಿ ಇದು ಲಭ್ಯವಿದ್ದು, ಸೀಮಿತ ಸಂಖ್ಯೆಯಲ್ಲಿ ವಾಹನವಿದೆ. ಬಿಎಂಡಬ್ಲು ಇಂಡಿಯಾ ಈ ಹಿಂದೆ 10 ವಿಶೇಷವಾದ ’50 ಜಹ್ರೆ ಎಡಿಷನ್​ʼ ಗಳನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿತ್ತು.

ಈ ಕಾರಿನ ಹೊರ ಆವೃತಿಯಲ್ಲಿ ಕಿಡ್ನಿ ಗ್ರಿಲ್​ನ ಮೇಲಿರುವ ಸಾಂಪ್ರದಾಯಿಕ ಬಿಎಂಡಬ್ಲ್ಯು ಲಾಂಛನ ವಾಹನ ಶ್ರೀಮಂತಿಕೆಯನ್ನು ಎತ್ತಿ ತೋರುವಂತಿದೆ. ಎಲ್​ಇಡಿ ಲೇಸರ್ ​ಲೈಟ್​ನೊಂದಿಗೆ ಅಡಾಪ್ಟಿವ್​ ಹೆಡ್​ಲೈಟ್​ ಸ್ಟ್ಯಾಂಡರ್ಡ್​ ಆಗಿ ಕಾಣಿಸುವಂತಿದೆ.

ಒಳಭಾಗದಲ್ಲಿ ಮಲ್ಟಿಫಂಕ್ಷನಲ್​ ಸ್ಟೀರಿಂಗ್​ ವೀಲ್​, ಮೆಮೊರಿ ಫಂಕ್ಷನ್​ನೊಂದಿಗೆ ಎಲೆಕ್ಟ್ರಿಕಲ್​ ಸೀಟ್​ ಹೊಂದಾಣಿಕೆ ಮತ್ತು ಎಲ್ಲಾ ಮಿರರ್​ಗಳಲ್ಲಿ ಸ್ವಯಂಚಾಲಿತ ಆಂಟಿ-ಡ್ಯಾಝಲ್​ ಫಂಕ್ಷನ್​ ಜತೆಗೆ ಹಗುರವಾದ ಹೈಟೆಕ್​ ಕಾರ್ಬನ್​ ಫೈಬರ್​ ರೀನ್​ ಫೋರ್ಸ್ ಪಾಲಿಮರ್​ ರೂಫ್ ಇದೆ.

ಲೈವ್​ ಕಾಕ್ ​ಪಿಟ್​ ಪ್ರೊಫೆಷನಲ್​ 3 ಈ ನ್ಯಾವಿಗೇಶನ್​, ಸ್ಟೀರಿಂಗ್​ ವೀಲ್​ ಹಿಂದೆ 12.3- ಇಂಚಿನ ಡಿಜಿಟಲ್​ ಇನ್​ಸ್ಟ್ರುಮೆಂಟ್​ ಡಿಸ್​ಪ್ಲೇ, ಮತ್ತು 10.25 -ಇಂಚಿನ ಕಂಟ್ರೋಲ್​ ಡಿಸ್ ​ಪ್ಲೇ ಒಳಗೊಂಡಿದೆ. ಕನೆಕ್ಟ್ ಡ್ರೈವ್‌ ತಂತ್ರಜ್ಞಾನಗಳ ಹೋಸ್ಟ್​ಗಳನ್ನು ಒದಗಿಸಲಾಗಿದೆ.

ವೈರ್​ಲೆಸ್​ ಚಾರ್ಜಿಂಗ್ ನೊಂದಿಗೆ ಹೆಡ್​ ಅಪ್​ ಡಿಸ್​ಪ್ಲೇ, ಸ್ಮಾರ್ಟ್​ಫೋನ್​ ಇಂಟಿಗ್ರೇಷನ್​, ಮುಂಭಾಗ ಮತ್ತು ಹಿಂಭಾಗದಲ್ಲಿ ಸೆನ್ಸರ್​ಗಳೊಂದಿಗೆ ಪಾರ್ಕ್​ ಡಿಸ್ಟೆನ್ಸ್​ ಕಂಟ್ರೋಲ್​ನೊಂದಿಗೆ ಗಮನ ನೀಡುವ ಅಸಿಸ್ಟೆಂಟ್​ ಮತ್ತು ಪಾರ್ಕಿಂಗ್ ಅಸಿಸ್ಟೆಂಟ್​ ಸೇರಿದಂತೆ ಕಂಫರ್ಟ್​ ಆಕ್ಸೆಸ್​ ಸಿಸ್ಟಮ್​, ಗೆಸ್ಚರ್​ ಕಂಟ್ರೋಲ್​, ಸ್ಟೀರಿಂಗ್​ ಮತ್ತು ಲೇನ್​ ಕಂಟ್ರೋಲ್​ ಅಸಿಸ್ಟೆಂಟ್​, ಹಾಗೆಯೇ ಡ್ರೈವ್ ರೆಕಾರ್ಡರ್​ ಕೂಡ ಸೇರಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...