alex Certify ಕೇಸ್ ವಜಾ ಬೆನ್ನಲ್ಲೇ ಬಿಎಂಟಿಸಿ ಸಿಬ್ಬಂದಿಗೆ ಭರ್ಜರಿ ಕೊಡುಗೆ: 25 ವರ್ಷ ಪೂರೈಸಿದವರಿಗೆ ಮುಂಬಡ್ತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೇಸ್ ವಜಾ ಬೆನ್ನಲ್ಲೇ ಬಿಎಂಟಿಸಿ ಸಿಬ್ಬಂದಿಗೆ ಭರ್ಜರಿ ಕೊಡುಗೆ: 25 ವರ್ಷ ಪೂರೈಸಿದವರಿಗೆ ಮುಂಬಡ್ತಿ

ಬೆಂಗಳೂರು: ಬಿಎಂಟಿಸಿ ಬೆಳ್ಳಿ ಹಬ್ಬದ ಹಿನ್ನೆಲೆಯಲ್ಲಿ ಸಿಬ್ಬಂದಿಗೆ ಭರ್ಜರಿ ಕೊಡುಗೆ ನೀಡಲಾಗುತ್ತಿದೆ. 6960 ಸಿಬ್ಬಂದಿ ಮೇಲಿನ ಪ್ರಕರಣಗಳನ್ನು ಕೈ ಬಿಡಲಾಗಿದೆ. ಇದರ ಬೆನ್ನಲ್ಲೇ ಕಳೆದ 25 ವರ್ಷಗಳಿಂದ ಬಿಎಂಟಿಸಿಯಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ಮುಂಬಡ್ತಿ ನೀಡಲು ಮುಂದಾಗಿದೆ.

ಬೆಂಗಳೂರು ಮಹಾನಗರ ಸಾರಿಗೆ ನಿಗಮ ರಚನೆಯಾಗಿ 2023ರ ಸೆಪ್ಟೆಂಬರ್ ಗೆ 25 ವರ್ಷಗಳಾಗಿವೆ. ಈ ಹಿನ್ನೆಲೆಯಲ್ಲಿ ಬಿಎಂಟಿಸಿ ಸಿಬ್ಬಂದಿ ಮತ್ತು ಪ್ರಯಾಣಿಕರಿಗೆ ಹಲವು ಕೊಡುಗೆ ನೀಡಲಾಗುತ್ತಿದೆ. ಸಿಬ್ಬಂದಿ ಮೇಲಿದ್ದ ಗೈರು ಹಾಜರಿ, ಶಿಸ್ತು ಪ್ರಕರಣಗಳನ್ನು ವಜಾ ಮಾಡಲಾಗಿದೆ.

ಈಗ 25 ವರ್ಷಗಳಿಂದ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ಮುಂಬಡ್ತಿ ನೀಡಲಾಗುವುದು. ಈ ಕುರಿತಾಗಿ ಪ್ರಕ್ರಿಯೆ ಆರಂಭಿಸಿದ್ದು, ನಿಗಮದ ಎಲ್ಲಾ 50 ಘಟಕಗಳು, ಕೇಂದ್ರ ಕಚೇರಿ, ವರ್ಕ್ ಶಾಪ್ ಗಳಲ್ಲಿನ ಸಿಬ್ಬಂದಿ ವಿವರ ನೀಡುವಂತೆ ಸುತ್ತೋಲೆ ಹೊರಡಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...