alex Certify ಟಿಕೆಟ್ ಇಲ್ಲದ ಪ್ರಯಾಣಿಕರ ಮೇಲೆ ದಂಡಾಸ್ತ್ರ: ಬಿಎಂಟಿಸಿ ನಿಯಮ ಉಲ್ಲಂಘಿಸಿದವರಿಂದ 6.1 ಲಕ್ಷ ರೂ. ವಸೂಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟಿಕೆಟ್ ಇಲ್ಲದ ಪ್ರಯಾಣಿಕರ ಮೇಲೆ ದಂಡಾಸ್ತ್ರ: ಬಿಎಂಟಿಸಿ ನಿಯಮ ಉಲ್ಲಂಘಿಸಿದವರಿಂದ 6.1 ಲಕ್ಷ ರೂ. ವಸೂಲಿ

ಬೆಂಗಳೂರು: ಬಿಎಂಟಿಸಿ ನಿಯಮ ಉಲ್ಲಂಘಿಸಿ ಪ್ರಯಾಣಿಸುತ್ತಿದ್ದವರ ಮೇಲೆ ದಂಡಾಸ್ತ್ರ ಪ್ರಯೋಗಿಸಲಾಗಿದೆ. ಟಿಕೆಟ್ ಪಡೆಯದ ಪ್ರಯಾಣಿಕರಿಂದ 6,10,880 ರೂಪಾಯಿ ವಸೂಲಿ ಮಾಡಲಾಗಿದೆ.

ಬಿಎಂಟಿಸಿ ಬಸ್ ಗಳಲ್ಲಿ ಟಿಕೆಟ್ ಪಡೆಯದೆ ಪ್ರಯಾಣಿಸಿದ್ದ 3027 ಪ್ರಯಾಣಿಕರಿಂದ 6.10 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ. ಬಿಎಂಟಿಸಿ 14,930 ಟ್ರಿಪ್ ಗಳಲ್ಲಿ ಸಿಬ್ಬಂದಿ ತಪಾಸಣೆ ನಡೆಸಿದ್ದಾರೆ.  ಬಿಎಂಟಿಸಿ ನಿರ್ವಾಹಕರ ವಿರುದ್ಧ 906 ಪ್ರಕರಣ ದಾಖಲಾಗಿದೆ. ಮಹಿಳೆಯರಿಗೆ ಮೀಸಲಿಟ್ಟ ಆಸನದಲ್ಲಿ ಕುಳಿತುಕೊಂಡ 387 ಪುರುಷ ಪ್ರಯಾಣಿಕರಿಂದ 38,700 ರೂ. ದಂಡ ವಸೂಲಿ ಮಾಡಲಾಗಿದೆ. ಮೋಟಾರ್ ವಾಹನ ಕಾಯ್ದೆ ಅನ್ವಯ ಅಧಿಕಾರಿಗಳು ದಂಡ ವಸೂಲಿ ಮಾಡಿದ್ದಾರೆ. ಸೆಪ್ಟಂಬರ್ ನಲ್ಲಿ 3414 ಪ್ರಯಾಣಿಕರಿಂದ 6.49 ಲಕ್ಷ ರೂ. ದಂಡ ವಸೂಲಿ ಮಾಡಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...