alex Certify ʼಪೋಷಕಾಂಶʼಗಳ ಆಗರ ಕಪ್ಪು ದ್ರಾಕ್ಷಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಪೋಷಕಾಂಶʼಗಳ ಆಗರ ಕಪ್ಪು ದ್ರಾಕ್ಷಿ

ಹಣ್ಣುಗಳ ಸೇವನೆಯ ಅಭ್ಯಾಸದಿಂದ ನಮ್ಮ ದೇಹಕ್ಕೆ ತರಕಾರಿಗಳನ್ನು ತಿಂದಾಗ ಸಿಗದ ಎಷ್ಟೋ ಪೋಷಕಾಂಶಗಳು ದೊರಕುತ್ತವೆ. ಅಂತಹ ಹಣ್ಣುಗಳ ಪಟ್ಟಿಗೆ ಕಪ್ಪು ದ್ರಾಕ್ಷಿ ಸೇರುತ್ತದೆ. ಕಪ್ಪು ದ್ರಾಕ್ಷಿಯು ಕೊಂಚ ಹುಳಿಯೇ ಆದರೂ ಅದರ ಗಾಢ ಬಣ್ಣ ಹಾಗೂ ಇದರಲ್ಲಿರುವ ಪೋಷಕಾಂಶಗಳು ಆರೋಗ್ಯದ ಮೇಲೆ ಒಳ್ಳೆಯ ಪರಿಣಾಮ ಬೀರುತ್ತವೆ.

* ಕಪ್ಪು ದ್ರಾಕ್ಷಿಯ ಸೇವನೆಯಿಂದ ಮಧುಮೇಹವನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ. ಇದರಲ್ಲಿರುವ ಪೋಷಕಾಂಶವು ದೇಹದಲ್ಲಿ ಇನ್ಸುಲಿನ್ ಉತ್ಪನ್ನಕ್ಕೆ ಹೆಚ್ಚಿನ ಪ್ರಚೋದನೆಯನ್ನು ನೀಡುತ್ತದೆ.

* ನಿಯಮಿತವಾಗಿ ಕಪ್ಪು ದ್ರಾಕ್ಷಿಯನ್ನು ಸೇವಿಸುವುದರಿಂದ ಏಕಾಗ್ರತೆ, ಸ್ಮರಣ ಶಕ್ತಿ ಹೆಚ್ಚುವುದಲ್ಲದೆ ಮೈಗ್ರೇನ್ ಕಡಿಮೆಯಾಗಲು ನೆರವಾಗುತ್ತದೆ.

* ಕಪ್ಪು ದ್ರಾಕ್ಷಿಯು ಮೆದುಳಿನ ರಕ್ಷಕನಾಗಿ ಕಾರ್ಯ ನಿರ್ವಹಿಸುವುದರಿಂದ ಬುದ್ಧಿಮಾಂದ್ಯತೆ, ಮರೆಗುಳಿತನದಂತಹ ಕಾಯಿಲೆಗಳಿಂದ ದೂರ ಇರಬಹುದು.

* ಕಪ್ಪು ದ್ರಾಕ್ಷಿಯಲ್ಲಿರುವ ಪೋಷಕಾಂಶಗಳು ಹೃದಯದ ಮೇಲಾಗುವ ಹಾನಿಯನ್ನು ತಡೆದು ಹೃದಯದ ಸ್ನಾಯುಗಳನ್ನು ಬಲಪಡಿಸಲು ನೆರವಾಗುತ್ತವೆ.

* ಕಪ್ಪು ದ್ರಾಕ್ಷಿಯಲ್ಲಿರುವ ಕ್ಯಾರೊಟಿನಾಯ್ಡ್ ಪೋಷಕಾಂಶಗಳು ಕಣ್ಣಿನ ಆರೋಗ್ಯಕ್ಕೆ ಸಹಾಯಕ. ಈ ಹಣ್ಣಿನ ನಿಯಮಿತ ಸೇವನೆಯಿಂದ ಕುರುಡುತನ ಎದುರಾಗದಂತೆ ತಡೆಯಬಹುದು.

* ಕಪ್ಪು ದ್ರಾಕ್ಷಿಗಳಲ್ಲಿ ವಿಟಮಿನ್ ಇ ಹೆಚ್ಚಿನ ಪ್ರಮಾಣದಲ್ಲಿದ್ದು, ಇದು ನೆತ್ತಿಯ ಚರ್ಮದಲ್ಲಿ ರಕ್ತ ಪರಿಚಲನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

* ಕಪ್ಪು ದ್ರಾಕ್ಷಿಗಳಲ್ಲಿರುವ ವಿಟಮಿನ್ ಕೆ ಮತ್ತು ಎ ಖನಿಜಗಳು ಸಕ್ಕರೆ ಮತ್ತು ಸಾವಯವ ಆಮ್ಲಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ.

* ಕಪ್ಪು ದ್ರಾಕ್ಷಿಗಳಲ್ಲಿರುವ ವಿಟಮಿನ್ ಸಿ ಚರ್ಮದಿಂದ ನಷ್ಟವಾಗಿದ್ದ ಜೀವಕೋಶಗಳನ್ನು ಹೊಸದಾಗಿ ನಿರ್ಮಿಸಲು ನೆರವಾಗುತ್ತದೆ.

* ಕಪ್ಪು ದ್ರಾಕ್ಷಿಗಳು ತೇವಾಂಶವನ್ನು ಚರ್ಮದಲ್ಲಿ ಉಳಿಸಿಕೊಳ್ಳಲು ನೆರವಾಗುವ ಮೂಲಕ ತ್ವಚೆಯ ಆರೋಗ್ಯವನ್ನು ಹೆಚ್ಚಿಸುತ್ತದೆ.

* ಕಪ್ಪು ದ್ರಾಕ್ಷಿಯನ್ನು ಹಸಿಯಾಗಿಯೂ, ಒಣಗಿಸಿ ಒಣದ್ರಾಕ್ಷಿಯ ರೂಪದಲ್ಲಿಯೂ ಬಳಸಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...