alex Certify ಬೆಚ್ಚಿಬೀಳಿಸುವಂತಿದೆ ಸಂಪೂರ್ಣ ಟ್ಯಾಟೂ ಹಾಕಿಸಿಕೊಂಡವನ ಅವತಾರ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಚ್ಚಿಬೀಳಿಸುವಂತಿದೆ ಸಂಪೂರ್ಣ ಟ್ಯಾಟೂ ಹಾಕಿಸಿಕೊಂಡವನ ಅವತಾರ…!

ವಿಪರೀತ ಟ್ಯಾಟೂ ಹಾಕಿಸಿಕೊಳ್ಳುವುದನ್ನು ಟ್ರೆಂಡ್​ ಅಂತಾದರೂ ಅನ್ನಿ, ಹುಚ್ಚುತನ ಎಂದಾದರೂ ಕರೆಯಿರಿ. ಯುವ ಜನರಲ್ಲೊಂದು ಟ್ಯಾಟೂ ಕ್ರೇಜ್​ ಇದ್ದೇ ಇದ್ದೆ. ತಮಗಿಷ್ಟವಾದ ಲೈನ್​, ಹೆಸರನ್ನು ಹಾಕಿಸಿಕೊಳ್ಳುವುದುಂಟು

ಇದೇ ರೀತಿ ಟ್ಯಾಟೂ ಹುಚ್ಚಿಗೆ ಮಾರುಹೋದ 34 ವರ್ಷದ ವ್ಯಕ್ತಿಯೊಬ್ಬ ಸಮಸ್ಯೆಗೆ ಸಿಲುಕಿದ್ದಾನೆ. ಯಾವ ರೀತಿ ಕಷ್ಟವೆಂದರೆ ಆತನಿಗೆ ಟ್ಯಾಟೂವಿನಿಂದಾಗಿ ಉದ್ಯೋಗವೇ ಸಿಗುತ್ತಿಲ್ಲ.

ಏಲಿಯನ್​ ರೀತಿ ಕಾಣಿಸಿಕೊಳ್ಳುವ ಫ್ರಾನ್ಸ್​ನ ಆಂಥೋನಿ ಲೋಫ್ರೆಡೊ ಟ್ಯಾಟೂವಿನಿಂದಲೇ ರೂಪಾಂತರಗೊಂಡಿದ್ದಾನೆ. ಅಡಿಯಿಂದ ಮುಡಿವರೆಗೂ ಟ್ಯಾಟೂವಿನಿಂದ ಅಲಂಕೃತನಾಗಿದ್ದು ನಾಲಿಗೆ, ಕಣ್ಣುಗುಡ್ಡೆಗಳನ್ನೂ ಬಿಟ್ಟಿಲ್ಲ. ತಲೆಯಿಂದ ಕುತ್ತಿಗೆವರೆಗೆ ಹಚ್ಚೆಗಳಿಂದಲೇ ಮುಚ್ಚಿಹೋಗಿದೆ.

ಲೋಫ್ರೆಡೊ ತನ್ನನ್ನು ʼಪ್ರಾಜೆಕ್ಟ್​’ ಎಂದು ಪರಿಗಣಿಸುತ್ತಾನೆ. ಅದೇ ಹೆಸರಿನಿಂದ ತನ್ನ ಇನ್​ಸ್ಟಾಗ್ರಾಮ್​ ಹ್ಯಾಂಡಲ್​ನಲ್ಲಿ ಪೋಸ್ಟ್​ ಮಾಡುತ್ತಾನೆ. ಪಂಜ್​ ಹೋಲುವಂತೆ ಕಾಣಲು ಕೈ ಬೆರಳಿನಲ್ಲೂ ಒಂದಷ್ಟು ಪ್ರಯೋಗ ಮಾಡಿದ್ದಾನೆ.

ಲೋಫ್ರೆಡೊ ಇತ್ತೀಚೆಗೆ ಪಾಡ್​ಕ್ಯಾಸ್ಟ್​ ಕ್ಲಬ್​ನಲ್ಲಿ ಕಾಣಿಸಿಕೊಂಡು ತಮ್ಮ ಸಂಕಟವನ್ನೂ ಹೇಳಿಕೊಂಡಿದ್ದಾರೆ. ತಮ್ಮ ವಿಶಿಷ್ಟ ನೋಟದಿಂದಾಗಿ ಬಹಳಷ್ಟು “ನಕಾರಾತ್ಮಕ” ಪ್ರತಿಕ್ರಿಯೆ ಬಂದಿದೆ ಎಂದು ಒಪ್ಪಿಕೊಂಡಿದ್ದಾರೆ. ನನ್ನನ್ನು ಕಂಡರೆ ಕೂಗಾಡುವ ಮತ್ತು ಓಡುವ ಜನರಿದ್ದಾರೆ. ನಾನು ಮನುಷ್ಯ. ಆದರೆ ಜನರು ನನ್ನನ್ನು ಹುಚ್ಚನೆಂದು ಭಾವಿಸುತ್ತಾರೆ ಎಂದು ಹೇಳಿಕೊಂಡಿದ್ದಾರೆ.

ನನಗೆ ಕೆಲಸ ಸಿಗುತ್ತಿಲ್ಲ, ಬಹಳಷ್ಟು ಋಣಾತ್ಮಕ ಸಂಗತಿಗಳಿವೆ ಹೇಳಿರುವ ಅವರು ಜನರು ನನ್ನ ವೇಷ ನೋಡಿ ಗಾಬರಿಗೊಳ್ಳಬಹುದು ತನಗೆ ತಿಳಿದಿದೆ ಆದ್ದರಿಂದ ಜನರಿರುವ ಕಡೆ ಸೈಡ್​ನಲ್ಲಿ ಹೋಗಿಬಿಡುತ್ತೇನೆಂದಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ 1.2 ಮಿಲಿಯನ್​ ಫಾಲೋಯರ್​ಗಳನ್ನು ಗಳಿಸಿದ್ದು, ಬಹಳಷ್ಟು ಜನರು ಈ ವಿಚಾರದಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ ಎಂಬುದು ಆಸಕ್ತಿದಾಯಕ ವಿಚಾರ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...