alex Certify ಗುಜರಾತ್‌: ವೈದ್ಯರ ಆತ್ಮಹತ್ಯೆ ಪ್ರಕರಣದಲ್ಲಿ ಬಿಜೆಪಿ ಸಂಸದ ಮತ್ತು ಆತನ ತಂದೆ ವಿರುದ್ಧ ಎಫ್‌ಐಆರ್ ‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗುಜರಾತ್‌: ವೈದ್ಯರ ಆತ್ಮಹತ್ಯೆ ಪ್ರಕರಣದಲ್ಲಿ ಬಿಜೆಪಿ ಸಂಸದ ಮತ್ತು ಆತನ ತಂದೆ ವಿರುದ್ಧ ಎಫ್‌ಐಆರ್ ‌

ವೈದ್ಯರೊಬ್ಬರ ಆತ್ಮಹತ್ಯೆ ಪ್ರಕರಣದಲ್ಲಿ ಗುಜರಾತ್‌ನ ಜುನಾಘಡದ ಸಂಸದ ರಾಜೇಶ್ ಚುದಾಸ್ಮಾ ಹಾಗೂ ಅವರ ತಂದೆ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ತಮ್ಮ ಬಳಿ 1.75 ಕೋಟಿ ರೂ ಸಾಲ ಪಡೆದಿದ್ದ ಸಂಸದ ಹಾಗೂ ಆತನ ತಂದೆ ಆ ದುಡ್ಡನ್ನು ಮರಳಿ ನೀಡುವಂತೆ ಕೇಳಿದಾಗ ತಮಗೆ ಬೆದರಿಕೆಯೊಡ್ಡಿದ್ದಾರೆ ಎಂದು ಆರೋಪಿಸಿ, ಪತ್ರ ಬರೆದು, ಡಾ. ಅತುಲ್ ಚಾಗ್ ಫೆಬ್ರವರಿ 12ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು.

ಆತ್ಮಹತ್ಯೆಗೆ ಪ್ರೇರಣೆ ಹಾಗೂ ಬೆದರಿಕೆಯೊಡ್ಡಿದ ಆರೋಪದ ಮೇಲೆ ಐಪಿಸಿಯ ಸಂಬಂಧಪಟ್ಟ ವಿಧಿಗಳಡಿ ಅಪ್ಪ-ಮಗನ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ. ಆದರೆ ಇಬ್ಬರನ್ನೂ ಇದುವರೆಗೆ ಬಂಧಿಸಿಲ್ಲ.

ಇಲ್ಲಿನ ವೆರಾವಲ್ ಪ್ರದೇಶದಲ್ಲಿ ವೈದ್ಯರಾಗೆ ಹೆಸರು ಮಾಡಿದ್ದ ಚಾಗ್‌‌ ಬರೆದಿದ್ದ ಆತ್ಮಹತ್ಯಾ ಪತ್ರವನ್ನು ಪೊಲೀಸರು ಮೊದಲಿಗೆ ಕೈಗೆತ್ತಿಕೊಳ್ಳಲು ನಿರಾಕರಿಸಿದ್ದರು. ಆದರೆ ಚಾಗ್ ಪುತ್ರ ಹಿತಾರ್ಥ್ ಈ ಸಂಬಂಧ ಗುಜರಾತ್‌ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿ, ಪೊಲೀಸರ ವಿರುದ್ಧ ದೂರು ಕೊಟ್ಟಿದ್ದರು. ಆದರೆ ಈ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು.

ತಮ್ಮೊಂದಿಗೆ 20 ವರ್ಷಗಳಿಂದ ಒಡನಾಟ ಹೊಂದಿದ್ದ ವೈದ್ಯ ಚಾಗ್‌ರಿಂದ ಚುದಾಸ್ಮಾ 2008ರಿಂದ ಹಂತಹಂತವಾಗಿ 1.75 ಕೋಟಿ ರೂಗಳನ್ನು ಸಾಲದ ರೂಪದಲ್ಲಿ ಪಡೆದಿದ್ದಾರೆ ಎನ್ನಲಾಗಿದೆ. ಈ ದುಡ್ಡಿನಲ್ಲಿ ಒಂದು ಭಾಗವನ್ನಷ್ಟೇ ಮರು ಪಾವತಿ ಮಾಡಿದ ಚುದಾಸ್ಮಾ, ಬಳಿಕ ಮಿಕ್ಕ ಹಣವನ್ನು ಕೇಳಿದಾಗ ಕೊಡಲು ನಿರಾಕರಿಸಿದ್ದಾರೆ.

ಇದರ ಬೆನ್ನಿಗೇ ಸಂಸದ ಹಾಗೂ ಆತನ ತಂದೆ ಡಾ ಚಾಗ್‌ ಹಾಗೂ ಅವರ ಪುತ್ರನನ್ನು ಕೊಲ್ಲುವುದಾಗಿ ಬೆದರಿಕೆಯೊಡ್ಡಿದ್ದಾರೆ. ಈ ಬೆದರಿಕೆಯಿಂದ ಬೇಸತ್ತ ಡಾ. ಚಾಗ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...