alex Certify ಕಮರಿಗೆ ಬಿದ್ದ ಬಿಜೆಪಿ ಶಾಸಕರ ಕಾರು; ಪಕ್ಕೆಲುಬು ಮುರಿತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಮರಿಗೆ ಬಿದ್ದ ಬಿಜೆಪಿ ಶಾಸಕರ ಕಾರು; ಪಕ್ಕೆಲುಬು ಮುರಿತ

ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿ ಬಿಜೆಪಿ ಶಾಸಕ ಜಯಕುಮಾರ್ ಗೋರ್ ಅವರ ಕಾರು ಅಪಘಾತಕ್ಕೀಡಾಗಿದೆ. ಪುಣೆ-ಪಂಢರಪುರ ರಸ್ತೆಯಲ್ಲಿರುವ ಸ್ಮಶಾನದ ಬಳಿ ಶನಿವಾರ ಮುಂಜಾನೆ 3.30ರ ಸುಮಾರಿಗೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ವಾಹನ ಸೇತುವೆಯಿಂದ ಕಮರಿಗೆ ಬಿದ್ದಿದೆ.

ಶಾಸಕ ಜಯಕುಮಾರ್ ಗೋರ್ ಪಕ್ಕೆಲುಬು ಮುರಿತಕ್ಕೆ ಒಳಗಾಗಿದ್ದು, ಅವರನ್ನು ಪುಣೆಯ ರೂಬಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಅಪಘಾತದಲ್ಲಿ ಶಾಸಕರ ಜೊತೆ ಪ್ರಯಾಣಿಸುತ್ತಿದ್ದ ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಬಾರಾಮತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತೊಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಜಯಕುಮಾರ್ ಗೋರ್ ಅವರು ಸತಾರಾ ಜಿಲ್ಲೆಯ ಮಾನ್ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...