alex Certify ದಂಗಾಗಿಸುತ್ತೆ ಈ ವಿಚಿತ್ರ ಮದುವೆ ನಿಶ್ಚಿತಾರ್ಥದ ಕತೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಂಗಾಗಿಸುತ್ತೆ ಈ ವಿಚಿತ್ರ ಮದುವೆ ನಿಶ್ಚಿತಾರ್ಥದ ಕತೆ…!

ಅಮೆರಿಕದ ಜೈಲೊಂದರಲ್ಲಿ 2032ರವರೆಗೂ ಜೈಲು ಶಿಕ್ಷೆ ಅನುಭವಿಸಲಿರುವ ಕೈದಿಯೊಬ್ಬನ ಜೊತೆ ನೆದರ್​ಲೆಂಡ್​ನ ಮಹಿಳೆಯೊಬ್ಬಳು ನಿಶ್ಚಿತಾರ್ಥ ಮಾಡಿಕೊಂಡ ವಿಚಿತ್ರ ಘಟನೆಯೊಂದು ವರದಿಯಾಗಿದೆ.

ಕೆಲ್ಲಿ ಜ್ಯಾಕೋಬ್ಸ್ ಒಬ್ಬ ಸಾಮಾಜಿಕ ಕಾರ್ಯಕರ್ತೆಯಾಗಿದ್ದು ಜೇಮ್ಸ್​ ಡೆಂಟಲ್​ ಎಂಬವರನ್ನ ಪ್ರೇಮಿಸಿದ್ದಾರೆ. ಆದರೆ ಈ ಲವ್​ ಸ್ಟೋರಿಯಲ್ಲಿ ಟ್ವಿಸ್ಟ್​ ಏನು ಅಂದರೆ ಜೇಮ್ಸ್​ ಒಬ್ಬ ಕೈದಿ. ಮಾತ್ರವಲ್ಲದೇ ಈ ಪ್ರೇಮಿಗಳು ಇಲ್ಲಿಯವರೆಗೂ ಒಬ್ಬರನ್ನೊಬ್ಬರು ಭೇಟಿಯಾಗಿಲ್ಲ. ಕೇವಲ ವಿಡಿಯೋ ಕಾಲ್​, ಸಂದೇಶಗಳ ಮೂಲಕ ಮಾತ್ರವೇ ಸಂವಹನ ನಡೆಸಿದ್ದಾರೆ.

ಸಾವಿರಾರುಗಟ್ಟಲೇ ಮೈಲಿ ದೂರದಲ್ಲಿರುವ ಅಂದರೆ ನೆದರ್​ಲೆಂಡ್​ನ ಹೀರ್ಲೆನ್​​ನಲ್ಲಿ ವಾಸಿಸುತ್ತಿರುವ ಕೆಲ್ಲಿಗೆ ಡೆಂಟಲ್​​ ಪತ್ರವನ್ನ ಬರೆಯುತ್ತಿದ್ದ ಎನ್ನಲಾಗಿದೆ.

ಈ ಪತ್ರಗಳು ಯಾರಿಂದ ಬರುತ್ತಿದೆ ಎಂದು ಕುತೂಹಲಕ್ಕೆ ಒಳಗಾದ ಕೆಲ್ಲಿ ಹುಡುಕಾಟ ಶುರು ಮಾಡಿದ್ದಾರೆ. ಇದಾದ ಬಳಿಕವೇ ಇವರಿಬ್ಬರ ನಡುವೆ ಪ್ರೇಮ ಸಂಬಂಧ ಆರಂಭವಾಯ್ತು ಎನ್ನಲಾಗಿದೆ. 32 ವರ್ಷದ ಡೆಂಟಲ್​​ ವಿಡಿಯೋ ಕಾಲ್​ ಮೂಲಕವೇ ಕೆಲ್ಲಿಗೆ ಪ್ರೇಮ ನಿವೇದನೆ ಮಾಡಿದ್ದಾನೆ. ಇದಕ್ಕೆ ಕೆಲ್ಲಿ ಕೂಡ ಒಪ್ಪಿಗೆ ನೀಡಿದ್ದು ಈ ವರ್ಷದ ಅಕ್ಟೋಬರ್​ನಲ್ಲಿ ಮದುವೆಯಾಗಲು ಇಚ್ಛಿಸಿದ್ದಾರೆ.

ವಿಡಿಯೋ ಕಾಲ್​ನ ಸ್ಕ್ರೀನ್​ಶಾಟ್​ಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದ್ದು ಇದರಲ್ಲಿ ಡೆಂಟಲ್​ ಕೈಯಲ್ಲಿ ಉಂಗುರವನ್ನ ಹಿಡಿದು ಕ್ಯಾಮರಾವನ್ನ ನೋಡುತ್ತಾ ನಗುತ್ತಿರೋದನ್ನ ಕಾಣಬಹುದಾಗಿದೆ.
ಜೈಲಿನಲ್ಲೇ ಮಾಡಿದ ಉಂಗುರದಿಂದ ಆತ ನನಗೆ ಪ್ರಪೋಸ್​ ಮಾಡಿದ್ದ. ಬಳಿಕ ಹೊರಗಡೆ ಯಾರೋ ಪರಿಚಯಸ್ಥರ ಸಹಾಯದಿಂದ ನನಗಾಗಿ ಉಂಗುರ ತರಿಸಿದ್ದಾನೆ. ಮದುವೆಗೆ ನಾನು ಸಾಂಪ್ರದಾಯಿಕ ಉಡುಗೆಗಳನ್ನ ಧರಿಸೋದಿಲ್ಲ. ಜೈಲಿನಲ್ಲಿ ನಡೆಯುವ ಮದುವೆಗೆ ಯಾರೂ ಆ ರೀತಿ ತಯಾರಾಗೋದಿಲ್ಲ ಎಂದು ಕೆಲ್ಲಿ ಹೇಳಿದ್ದಾರೆ.

ಈ ಪ್ರೇಮಕತೆಯಲ್ಲಿರುವ ದೊಡ್ಡ ಟ್ವಿಸ್ಟ್​ ಅಂದರೆ ಡೆಂಟಲ್​​ ಬರೋಬ್ಬರಿ 20 ವರ್ಷಗಳ ಜೈಲುಶಿಕ್ಷೆಯನ್ನ ಅನುಭವಿಸುತ್ತಿದ್ದಾನೆ. 2012ರಲ್ಲಿ ಈತ ನಾಲ್ವರ ವಿರುದ್ಧ ಫೈರಿಂಗ್​​​​ ನಡೆಸಿದ್ದ ಎನ್ನಲಾಗಿದೆ. ಹೀಗಾಗಿ ಅವರು ಮದುವೆಯಾದರೂ ಸಹ ಜೊತೆಯಾಗಿ ಬಾಳಲು 2032ರ ವರೆಗೆ ಕಾಯಲೇಬೇಕಿದೆ..!

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...