alex Certify ರಾತ್ರೋ ರಾತ್ರಿ ಶಾಲೆ ನಾಪತ್ತೆ….! ರಸ್ತೆಯಲ್ಲೇ ತರಗತಿ ತೆಗೆದುಕೊಳ್ಳುವಂತೆ ಮಕ್ಕಳ ಒತ್ತಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾತ್ರೋ ರಾತ್ರಿ ಶಾಲೆ ನಾಪತ್ತೆ….! ರಸ್ತೆಯಲ್ಲೇ ತರಗತಿ ತೆಗೆದುಕೊಳ್ಳುವಂತೆ ಮಕ್ಕಳ ಒತ್ತಾಯ

ಬೇಸಿಗೆಯ ರಜೆಯ ಬಳಿಕ ಶಾಲೆಗೆ ಮರಳಲು ಹರ್ಷದಿಂದ ಸಿದ್ಧರಾದ ಮಕ್ಕಳಿಗೆ ಶಾಕಿಂಗ್​ ನ್ಯೂಸ್​. ಅವರು ಓದುತ್ತಿದ್ದ ಶಾಲೆಯೇ ನಾಪತ್ತೆಯಾಗಿತ್ತು. ಈ ಘಟನೆ ನಡೆದಿದ್ದು ಉತ್ತರ ಪ್ರದೇಶದ ಲಕ್ನೋದಲ್ಲಿ.

ಸುಮಾರು 140 ವರ್ಷಗಳಷ್ಟು ಹಳೆಯದಾದ ಶಾಲೆಯೊಂದು ರಾತ್ರೋರಾತ್ರಿ ಕಾಣೆಯಾಗಿರುವ ಕುತೂಹಲಕಾರಿ ಪ್ರಕರಣ ವರದಿಯಾಗಿದೆ. ಲಕ್ನೋದ ಗೋಲಗಂಜ್​ ಪ್ರದೇಶದ ಶತಮಾನೋತ್ಸವ ಹೈಯರ್​ ಸೆಕೆಂಡರಿ ಶಾಲೆ ಮತ್ತು ಕಾಲೇಜಿನ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ರಜೆ ಮುಗಿಸಿ ಹಿಂದಿರುಗಿದಾಗ ಅವರಿಗೆ ಈ ಆಘಾತ ಕಾದಿತ್ತು.

ಐತಿಹಾಸಿಕ ಶಾಲೆ ಕಳೆದುಹೋಗಿತ್ತಲ್ಲದೇ ಆ ಸ್ಥಳದಲ್ಲಿ ಹೊಸ ಖಾಸಗಿ ಶಾಲೆ ತಲೆ ಎತ್ತಿತ್ತು. ಅಷ್ಟೇ ಅಲ್ಲ, ಶಾಲೆಯ ಹೋರ್ಡಿಂಗ್ಸ್​ ಮತ್ತು ನಾಮಫಲಕ ಬದಲಾಯಿಸಲಾಗಿದೆ. ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಕ್ಯಾಂಪಸ್​ಗೆ ಪ್ರವೇಶ ಕೂಡ ನಿರಾಕರಿಸಲಾಯಿತು.

ನಂತರ ಸುಮಾರು 360 ವಿದ್ಯಾರ್ಥಿಗಳು ಗೇಟ್​ನ ಹೊರಗೆ ಕುಳಿತರು ರಸ್ತೆಯಲ್ಲೇ ತರಗತಿ ತೆಗೆದುಕೊಳ್ಳುವಂತೆ ಶಿಕ್ಷಕರನ್ನು ಒತ್ತಾಯಿಸಿದರು.

ಈ ಕುರಿತು ಪ್ರಾಂಶುಪಾಲ ರಾಜೀವ್​ ಡೇವಿಡ್​ ದಯಾಳ್​, ಶಿಕ್ಷಣಾಧಿಕಾರಿ ಹಾಗೂ ಜಿಲ್ಲಾ ಶಾಲಾ ನಿರೀಕ್ಷಕರಿಗೆ ದೂರು ಸಲ್ಲಿಸಿದ್ದು, ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು.

ಇಲ್ಲಿದೆ ಪಿಯು ತರಗತಿಗಳಿಗೆ ದಾಖಲಾಗುವ ವಿದ್ಯಾರ್ಥಿಗಳಿಗೊಂದು ಮುಖ್ಯ ಮಾಹಿತಿ

ಈ ಶಾಲೆಯಲ್ಲಿ ಸುಮಾರು 10 ಖಾಯಂ ಶಿಕ್ಷಕರು ಮತ್ತು 6 ರಿಂದ 12 ನೇ ತರಗತಿಯ 360 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ನಾವು ಶಾಲೆಗೆ ತಲುಪಿದಾಗ, ಹೆಸರನ್ನು ಬದಲಾಯಿಸಲಾಗಿತ್ತು ಮತ್ತು ನಮಗೆ ಪ್ರವೇಶ ನಿರಾಕರಿಸಲಾಯಿತು. ಪೀಠೋಪಕರಣಗಳನ್ನು ಹೊರಕ್ಕೆ ಸರಿಸಲಾಗಿದೆ. ಈ ಶಾಲೆಯನ್ನು ಆಟದ ಮೈದಾನಕ್ಕೆ ಸ್ಥಳಾಂತರಿಸಲಾಗಿದೆ ಎಂದು ನಮಗೆ ತಿಳಿಸಲಾಯಿತು. ಕೂಡಲೇ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಿದ್ದು, ಅವರು ಈ ಬಗ್ಗೆ ಗಮನಹರಿಸಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿಸಿದರು ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.

ಈ ಬಗ್ಗೆ ಜಿಲ್ಲಾ ಮ್ಯಾಜಿಸ್ಟ್ರೇಟ್​ ಸೂರ್ಯಪಾಲ್​ ಗಂಗ್ವಾರ್​ ಶುಕ್ರವಾರ ಮಾತನಾಡಿ, ಶತಮಾನೋತ್ಸವ ಕಂಡ ಹೈಯರ್​ ಸೆಕೆಂಡರಿ ಶಾಲೆ ಮತ್ತು ಕಾಲೇಜಿನಲ್ಲಿ ಮೊದಲಿನಂತೆ ತರಗತಿಗಳು ನಡೆಯಲಿವೆ. ಹೊರಗೆ ಪೊಲೀಸ್​ ಪಡೆಯನ್ನು ನಿಯೋಜಿಸಲಾಗುವುದು. ಅಧಿಕಾರಿಗಳಿಗೆ ವರದಿ ಸಲ್ಲಿಸುವಂತೆ ಸೂಚನೆ ನೀಡಿದರು.

ನಮ್ಮ ಶಾಲೆಯ ಮೇಲಿನ ವೈಷಮ್ಯದಿಂದ ಖಾಸಗಿ ಶಾಲೆ ತೆರೆಯಲಾಗಿದೆ ಎಂದು ಪ್ರಾಂಶುಪಾಲ ದಯಾಳ್​ ನೀಡಿದ ದೂರಿನ ಮೇರೆಗೆ ಬಿಎಸ್​ಎ ಹಾಗೂ ಇತರ ಅಧಿಕಾರಿಗಳೊಂದಿಗೆ ಶಾಲೆ ಪರಿಶೀಲನೆ ನಡೆಸಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...