alex Certify ಮಲಗುವ ಕೋಣೆ ಮಧ್ಯದಲ್ಲಿದೆ ಶವರ್…! ವಿಲಕ್ಷಣ ಮನೆ 1.6 ಕೋಟಿ ರೂ.ಗೆ ಮಾರಾಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಲಗುವ ಕೋಣೆ ಮಧ್ಯದಲ್ಲಿದೆ ಶವರ್…! ವಿಲಕ್ಷಣ ಮನೆ 1.6 ಕೋಟಿ ರೂ.ಗೆ ಮಾರಾಟ

ಬ್ರಿಟನ್​: ತಮಗೊಂದು ಕನಸಿನ ಮನೆ ಇರಲಿ ಎಂದು ಎಲ್ಲರೂ ಬಯಸುವುದು ಸಹಜ. ತಮ್ಮ ಮನೆ ಹೀಗೆ ಇರಬೇಕು ಎಂದು ಎಲ್ಲರೂ ಬಯಸುತ್ತಾರೆ. ಆದರೆ ಇಲ್ಲಿ ಒಂದು ವಿಚಿತ್ರ ಮನೆ ಇದೀಗ ವೈರಲ್​ ಆಗಿದೆ. ಈ ಮನೆಯ ವಿಶೇಷತೆ ಎಂದರೆ ಮಲಗುವ ಕೋಣೆಯಲ್ಲಿ ಶವರ್​ ಇದೆ !

ಬ್ರಿಟನ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿರುವ ಮೂರು ಬೆಡ್‌ರೂಮ್‌ಗಳ ಮನೆ ಇದಾಗಿದ್ದು, ವಿಚಿತ್ರವಾಗಿದೆ. ತಮಗೊಂದು ಮನೆ ಬೇಕು ಎಂದು ರೆಬೆಕಾ ಗ್ಲೋವರ್ ಎಂಬಾಕೆ ಆನ್​ಲೈನ್​ನಲ್ಲಿ ಹುಡುಕುತ್ತಿದ್ದಾಗ ಈ ಮನೆ ಗೋಚರಿಸಿದ್ದು, ಈಕೆಗೆ ಇದು ಇಷ್ಟವಾಗಿದೆಯಂತೆ.

ಐಷಾರಾಮಿ ಮೂರು ಬೆಡ್​ರೂಮ್​ಗಳ ಮನೆಯಾಗಿರುವ ಇದರ ಮಲಗುವ ಕೊಠಡಿಯಲ್ಲಿ ಶವರ್​ ಇಟ್ಟಿರುವುದು ಏಕೆ ಎನ್ನುವುದೇ ವಿಚಿತ್ರವಾಗಿದೆ. ಬೆಡ್​ರೂಮ್​ಗಳಲ್ಲಿ ಅಟ್ಯಾಚ್​ ಬಾತ್​ರೂಮ್​ ಇರುವುದು ಸಹಜ. ಅಲ್ಲಿ ಶವರ್​ ಇರುವುದೂ ಸರ್ವೇ ಸಾಮಾನ್ಯ. ಆದರೆ ಈ ಮನೆಯ ಬೆಡ್​ರೂಮ್​ ಮಧ್ಯ ಭಾಗದಲ್ಲಿ ಶವರ್​ ಇರುವುದು ವಿಲಕ್ಷಣವಾಗಿದೆ.

ಇದನ್ನು ಏಕೆ ಇಟ್ಟಿದ್ದಾರೆ ಎನ್ನುವುದು ತಿಳಿದಿಲ್ಲ. ಆದರೆ ಇದೊಂದು ರೀತಿಯಲ್ಲಿ ಕುತೂಹಲಕಾರಿಯಾಗಿದೆ ಎಂದಿರುವ ರೆಬೆಕಾ, ಮನೆಯನ್ನು £175,000 (ಸುಮಾರು 1.6 ಕೋಟಿ ರೂಪಾಯಿ) ಕೊಟ್ಟು ಖರೀದಿ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...