alex Certify ಮಕ್ಕಳಿಗೆ ಬೈಕ್ ಕೊಡುವ ಪೋಷಕರಿಗೆ ಎಚ್ಚರಿಕೆ: ಬಾಲಕನಿಗೆ ಬೈಕ್ ಕೊಟ್ಟ ಮಾಲೀಕನಿಗೆ ಬಿಗ್ ಶಾಕ್: 20 ಸಾವಿರ ರೂ. ದಂಡ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಕ್ಕಳಿಗೆ ಬೈಕ್ ಕೊಡುವ ಪೋಷಕರಿಗೆ ಎಚ್ಚರಿಕೆ: ಬಾಲಕನಿಗೆ ಬೈಕ್ ಕೊಟ್ಟ ಮಾಲೀಕನಿಗೆ ಬಿಗ್ ಶಾಕ್: 20 ಸಾವಿರ ರೂ. ದಂಡ

ಹಾಸನ: ಹಳೇಬೀಡಿನಲ್ಲಿ ಅಪ್ರಾಪ್ತ ಬಾಲಕ ದ್ವಿಚಕ್ರ ವಾಹನ ಚಾಲನೆ ಮಾಡಿದ ಘಟನೆ ನಡೆದಿದೆ. ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಹಳೇಬೀಡಿನಲ್ಲಿ ಘಟನೆ ನಡೆದಿದ್ದು, ವಾಹನ ಮಾಲೀಕನಿಗೆ 20 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ.

ಬೇಲೂರು ಜೆಎಂಎಫ್ಸಿ ನ್ಯಾಯಾಲಯ ಬೈಕ್ ಮಾಲೀಕನಿಗೆ 20 ಸಾವಿರ ರೂಪಾಯಿ ದಂಡ ವಿಧಿಸಿದೆ. ಪೊಲೀಸ್ ಜೀಪ್ ಎದುರು ಮೇ 6 ರಂದು ಅತಿವೇಗವಾಗಿ ಅಪ್ರಾಪ್ತ ಬಾಲಕ ಬೈಕ್ ಚಾಲನೆ ಮಾಡಿದ್ದ. ಹೆಲ್ಮೆಟ್ ಧರಿಸದೆ ಅಜಾಗರೂಕತೆಯಿಂದ ಬೈಕ್ ಓಡಿಸಿದ್ದ.

ಬಾಲಕನಿಗೆ ಬೈಕ್ ಕೊಟ್ಟಿದ್ದ ಮಾಲೀಕ ಹಿಂಬದಿ ಸೀಟಿನಲ್ಲಿ ಕುಳಿತುಕೊಂಡಿದ್ದರು. ದಾಖಲೆ ಪರಿಶೀಲನೆಯ ವೇಳೆಯಲ್ಲಿ ಲೈಸೆನ್ಸ್ ಮತ್ತು ವಿಮೆ ಇಲ್ಲದಿರುವುದು ಪತ್ತೆಯಾಗಿತ್ತು. ಬೈಕ್ ಮಾಲೀಕನಿಗೆ ನ್ಯಾಯಾಲಯ 20 ಸಾವಿರ ರೂಪಾಯಿ ದಂಡ ವಿಧಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...