alex Certify ಸೆಕ್ಸ್ ವೇಳೆಯಲ್ಲೇ ಸಿಕ್ಕಿ ಬಿದ್ದ ಯುವಕ, ವಿಧವೆಯೊಂದಿಗೆ ಮದುವೆ ಮಾಡಿಸಿದ ಗ್ರಾಮಸ್ಥರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೆಕ್ಸ್ ವೇಳೆಯಲ್ಲೇ ಸಿಕ್ಕಿ ಬಿದ್ದ ಯುವಕ, ವಿಧವೆಯೊಂದಿಗೆ ಮದುವೆ ಮಾಡಿಸಿದ ಗ್ರಾಮಸ್ಥರು

ಖಗರಿಯಾ: ಬಿಹಾರದ ಖಗರಿಯಾ ಜಿಲ್ಲೆಯ ಪರಬಟ್ಟಾ ಬ್ಲಾಕ್ ದರಿಯಾಪುರದಲ್ಲಿ ವಿಧವೆಯೊಂದಿಗೆ ಸಿಕ್ಕಿ ಬಿದ್ದ ಯುವಕನನ್ನು ಆಕೆಯೊಂದಿಗೆ ಮದುವೆ ಮಾಡಿಸಲಾಗಿದೆ.

21 ವರ್ಷದ ಯುವಕ ರಾಮ್ ಕುಮಾರ್ 4 ಮಕ್ಕಳ ತಾಯಿಯಾಗಿರುವ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದಾನೆ. ಪತಿ ಮೃತಪಟ್ಟ ನಂತರ ಮಹಿಳೆ ರಾಮ್ ಕುಮಾರ್ ಜೊತೆಗೆ ಸಂಬಂಧ ಬೆಳೆಸಿದ್ದಳು. ಆಕೆಯ ಮನೆಗೆ ರಾಮ್ ಕುಮಾರ್ ಹೋಗಿ ಬರುತ್ತಿದ್ದರೂ ಯಾರಿಗೂ ಅನುಮಾನ ಬಂದಿರಲಿಲ್ಲ.

ಆದರೆ, ಅಕ್ಕಪಕ್ಕದ ಮನೆಯವರಿಗೆ ಇತ್ತೀಚೆಗೆ ಅನುಮಾನ ಬಂದಿದೆ. ಕೆಲದಿನಗಳಿಂದ ಗ್ರಾಮದಲ್ಲಿ ಭಾರಿ ಮಳೆಯಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಈ ಸಂದರ್ಭದಲ್ಲಿ ಮಹಿಳೆಯನ್ನು ವಿಚಾರಿಸುವ ನೆಪದಲ್ಲಿ ಆರಾಮ್ ಕುಮಾರ್ ಆಕೆಯ ಮನೆಗೆ ಹೋಗಿದ್ದಾನೆ

ಆಕೆಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವಾಗಲೇ ಅಕ್ಕಪಕ್ಕದವರಿಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ. ಇಬ್ಬರಿಗೂ ಬುದ್ಧಿವಾದ ಹೇಳಿದ ಗ್ರಾಮಸ್ಥರು ಮುಂದೆ ನಿಂತು ಮದುವೆಮಾಡಿಸಿದ್ದಾರೆ. ಮಹಿಳೆಯ ನಾಲ್ವರು ಮಕ್ಕಳಲ್ಲಿ ಇಬ್ಬರನ್ನು ಆಕೆಯ ತವರಿಗೆ ಕಳಿಸಲು ಗ್ರಾಮಸ್ಥರು ತೀರ್ಮಾನಿಸಿದ್ದಾರೆನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...