alex Certify BIGG NEWS : `ಸಂಚಾರ ನಿಯಮ ಉಲ್ಲಂಘನೆ ಕೇಸ್ : `ಇ-ಚಲನ್’ನಲ್ಲಿ ಕರ್ನಾಟಕವೇ ನಂ.1 | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIGG NEWS : `ಸಂಚಾರ ನಿಯಮ ಉಲ್ಲಂಘನೆ ಕೇಸ್ : `ಇ-ಚಲನ್’ನಲ್ಲಿ ಕರ್ನಾಟಕವೇ ನಂ.1

ಬೆಂಗಳೂರು : ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ವಾಹನ ಸವಾರರಿಗೆ ಇ-ಚಲನ್ ನಲ್ಲಿ ದಂಡ ವಿಧಿಸುವಲ್ಲಿ ದೇಶದಲ್ಲೇ ಕರ್ನಾಟಕ ಮೊದಲ ಸ್ಥಾನದಲ್ಲಿದೆ.

ರಾಜ್ಯ ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಇ-ಚಲನ್ ಬಳಸಿ ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದ ದಂಡ ಸಂಗ್ರಹ ಇಡೀ ದೇಶದಲ್ಲಿ ಕರ್ನಾಟಕ ಬಹಳ ಮುಂದಿದೆ. ಕರ್ನಾಟಕದಿಂದಲೇ ಶೇ.50ಕ್ಕೂ ಹೆಚ್ಚು ಇ-ಚಲನ್ ಪ್ರಕರಣಗಳು ದಾಖಲಾಗಿವೆ. ಹಸ್ತಚಾಲಿತ ಸ್ವೀಕೃತಿ ವ್ಯವಸ್ಥೆಯನ್ನು ತ್ಯಜಿಸಿ ಶೀಘ್ರದಲ್ಲೇ ಇಡೀ ರಾಜ್ಯವನ್ನು ಇ-ಚಲನ್ ವ್ಯಾಪ್ತಿಗೆ ತರಲಾಗುವುದು ಎಂದು ಹೇಳಿದ್ದಾರೆ.

ಕಳೆದ 9 ದಿನಗಳ ಅಂಕಿ ಅಂಶಗಳ ಪೈಕಿ ದೇಶದಲ್ಲಿ ಇ-ಚಲನ್ ಮುಖಾಂತರ ಒಟ್ಟು 42,071 ಸಂಚಾರ ಉಲ್ಲಂಘನೆ ಪ್ರಕರಣ ದಾಖಲಾಗಿವೆ. ಇದರಿಂದ ಒಟ್ಟು 2.10 ಕೋಟಿ ರೂ. ದಂಡ ವಿಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...