alex Certify BIGG NEWS : ಮನೆ ಕಟ್ಟೋರಿಗೆ ಬಿಗ್ ಶಾಕ್ : ಇಂದಿನಿಂದ ಮರಳು, ಸಿಮೆಂಟ್ ಸೇರಿದಂತೆ ಈ ವಸ್ತುಗಳ ಬೆಲೆ ಏರಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIGG NEWS : ಮನೆ ಕಟ್ಟೋರಿಗೆ ಬಿಗ್ ಶಾಕ್ : ಇಂದಿನಿಂದ ಮರಳು, ಸಿಮೆಂಟ್ ಸೇರಿದಂತೆ ಈ ವಸ್ತುಗಳ ಬೆಲೆ ಏರಿಕೆ

ಬೆಂಗಳೂರು : ಈಗಾಗಲೇ ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಮತ್ತೊಂದು ಶಾಕ್, ಇಂದಿನಿಂದ ಮನೆ ನಿರ್ಮಾಣದ ವಸ್ತುಗಳಾದ ಸಿಮೆಂಟ್, ಮರಳು, ಎಂ-ಸ್ಯಾಂಡ್ ಸೇರಿದಂತೆ ಹಲವು ವಸ್ತುಗಳ ಬೆಲೆಯಲ್ಲಿ ಏರಿಕೆಯಾಗಲಿದೆ.

ನಂದಿನಿ ಹಾಲು ಸೇರಿದಂತೆ ಈಗಾಗಲೇ ಹಲವು ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನತೆಗೆ ಇದೀಗ ಮನೆ ಕಟ್ಟುವ ವಸ್ತುಗಳ ಬೆಲೆಯಲ್ಲೂ ಏರಿಕೆಯಾಗಿರುವುದು ಚಿಂತೆಗೀಡು ಮಾಡಿದೆ. ಆಗಸ್ಟ್ 1 ರ ಇಂದಿನಿಂದ ಮರಳು, ಎಂ-ಸ್ಯಾಂಡ್, ಜಲ್ಲಿಕಲ್ಲು, ಗ್ರಾನೈಟ್, ಟೈಲ್ಸ್, ಕಬ್ಬಿಣ ಸೇರಿದಂತೆ ಹಲವು ವಸ್ತುಗಳ ಬೆಲೆ ಏರಿಕೆಯಾಗಲಿದೆ.

ಕಬ್ಬಿಣದ ಅದಿರು, ಜಲ್ಲಿಕಲ್ಲು, ಸೈಜ್​ಗಲ್ಲು, ಗ್ರಾನೈಟ್ಸ್, ಮರಳು, ಎಂ.ಸ್ಯಾಂಡ್, ಬೋಲ್ಡರ್ಸ್, ದಿಂಡುಗಲ್ಲು, ಕರಿಕಲ್ಲು, ಬಿಳಿಕಲ್ಲು, ಮಲ್ಟಿಕಲರ್ ಗ್ರಾನೈಟ್, ಡೋಲೋಮೈಟ್, ಸಿಲಿಕಾ, ಅಲಂಕಾರಿಕ ಶಿಲೆ ಇತ್ಯಾದಿ ಉಪ ಖನಿಜಗಳ ಮೇಲೆ ರಾಯಲ್ಟಿ ಹೆಚ್ಚಿಸುವ ಮೂಲಕ ಇಲಾಖೆಗೆ ಹೊಸ ರಾಜಸ್ವ ಗುರಿ ನಿಗದಿಗೆ ಸರ್ಕಾರ ಮುಂದಾಗಿದೆ.

ರಾಜ್ಯ ಸರ್ಕಾರ ರಾಯಲ್ಟಿ ಹೆಚ್ಚಿಸಿದರೆ ಜಲ್ಲಿಕಲ್ಲು, ಸೈಜ್​ಗಲ್ಲು, ಗ್ರಾನೈಟ್ಸ್, ಮರಳು, ಎಂ.ಸ್ಯಾಂಡ್, ಬೋಲ್ಡರ್ಸ್, ದಿಂಡುಗಲ್ಲು ಸೇರಿ ಇನ್ನಿತರ ನಿರ್ಮಾಣ ಬಳಕೆಯ ವಸ್ತುಗಳ ಬೆಲೆ ಹೆಚ್ಚಳವಾಗಲಿದೆ. ಜನಸಾಮಾನ್ಯರ ಮೇಲೆ ಮತ್ತಷ್ಟು ಹೊರೆ ಬೀಳಲಿದೆ. ಖಾಸಗಿ, ಸರ್ಕಾರಿ ಕಾಮಗಾರಿಗಳು, ಮನೆ ಮತ್ತು ಕಟ್ಟಡ ನಿರ್ಮಾಣ ಕಾಮಗಾರಿಗಳ ಮೇಲೆ ಪರಿ ಣಾಮ ಬೀರುವ ಸಾಧ್ಯತೆ ಇದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...