alex Certify ʼಬಿಗ್‌ ಬಾಸ್‌ʼ ವಿಜೇತೆಯ ಫೋಟೋ ನೋಡಿ ಅಭಿಮಾನಿಗಳು ಕಂಗಾಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಬಿಗ್‌ ಬಾಸ್‌ʼ ವಿಜೇತೆಯ ಫೋಟೋ ನೋಡಿ ಅಭಿಮಾನಿಗಳು ಕಂಗಾಲು

ಆಲ್ಟ್‌ ಬಾಲಾಜಿ ಕಂಪನಿಯು ಆರಂಭಿಸಿರುವ ಕಾರ್ಟೆಲ್‌ ವೆಬ್‌ಸಿರೀಸ್‌ನಲ್ಲಿ ಬಿಗ್‌ ಬಾಸ್‌ ಖ್ಯಾತಿಯ ಈ ನಟಿಯು ವಯೋವೃದ್ಧರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಮೇಕಪ್‌, ದೇಹದ ಹಾವಭಾವಗಳ ಬದಲಾವಣೆಗೆ ಇನ್‌ಸ್ಟಾಗ್ರಾಮ್‌ ಬಳಕೆದಾರರು ದಿಗ್ಭ್ರಾಂತರಾಗಿದ್ದಾರೆ. ಅಂದಹಾಗೆ, ಈ ಟಿವಿ ತಾರೆಯ ಹೆಸರು ದಿವ್ಯಾ ಅಗರ್‌ವಾಲ್‌. ಹೌದು, ಬಿಗ್‌ಬಾಸ್‌ ಒಟಿಟಿ ಸೀಸನ್‌ 1 ವಿಜೇತೆ.

ಅಂದಹಾಗೆ, ತಮ್ಮ ನಟನೆಯ ಮೊದಲ ವೆಬ್‌ಸಿರೀಸ್‌ನಲ್ಲೇ ದಿವ್ಯಾ ಅವರ ಈ ಪ್ರಯೋಗಾತ್ಮಕ ಸಾಹಸಕ್ಕೆ ಅನೇಕ ನಟ-ನಟಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೈಗೊಂದು ಕಪ್ಪು ದಾರ, ಕಡಗ, ಕಪ್ಪನೆಯ ದೊಡ್ಡ ಕನ್ನಡಕ, ಬಿಳಿ ಕೂದಲು, ಹಣೆಯ ಮೇಲೆ ಸುಕ್ಕಾಗಿರುವ ಚರ್ಮದ ಮೇಕಪ್‌ ಹಾಕಿರುವ ಅವರ ಫೋಟೊವನ್ನು ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ದಿವ್ಯಾ ಹಂಚಿಕೊಂಡಿದ್ದಾರೆ.

ಆರ್.​​ಎಸ್.​ಎಸ್. ನ್ನು ತಾಲಿಬಾನ್‌ ಗೆ​ ಹೋಲಿಕೆ ಮಾಡಿದ ಜಾವೇದ್‌ ಅಖ್ತರ್‌ ಗೆ ಕೋರ್ಟ್‌ ನೋಟಿಸ್

ನಿಶಾಂತ್‌ ಭಟ್‌ ವಿರುದ್ಧ ಸ್ಪರ್ಧಿಸಿ ಬಿಗ್‌ಬಾಸ್‌ ಒಟಿಟಿ ಸೀಸನ್‌ನಲ್ಲಿ ದಿವ್ಯಾ ಜಯಗಳಿಸಿದ್ದರು. ಅಕ್ಟೋಬರ್‌ 2 ರಿಂದ ಬಿಗ್‌ಬಾಸ್‌ 15ನೇ ಸೀಸನ್‌ ಆರಂಭಗೊಳ್ಳಲಿದೆ. ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಅವರು ಇದರ ನಿರೂಪಣೆಗೆ ಸಿದ್ಧತೆ ಶುರು ಮಾಡಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...