alex Certify BIG SHOCKING: ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಬ್ಲಾಕ್ ಎಂಡಿಎಂಎ ಡ್ರಗ್ ಪತ್ತೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG SHOCKING: ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಬ್ಲಾಕ್ ಎಂಡಿಎಂಎ ಡ್ರಗ್ ಪತ್ತೆ….!

ಇಷ್ಟುದಿನ ವಿದೇಶಗಳಲ್ಲಿ ಕಂಡುಬರ್ತಿದ್ದ ಬ್ಲಾಕ್ ಎಂಡಿಎಂಎ ಡ್ರಗ್ ಕರ್ನಾಟಕದ ರಾಜಧಾನಿಗು ಎಂಟ್ರಿ ಕೊಟ್ಟಿದೆ. ಜಗತ್ತಿನಲ್ಲೆ ಟಾಪ್ ಎಂಡ್ ಡ್ರಗ್ ಲಿಸ್ಟ್ ನಲ್ಲಿ ಅಗ್ರಸ್ಥಾನ ಪಡೆದ್ಕೊಂಡಿರೊ ಬ್ಲಾಕ್ ಎಂಡಿಎಂಎ ಇಷ್ಟುದಿನ ಕರ್ನಾಟಕದಲ್ಲೆಲ್ಲು ಪತ್ತೆಯಾಗಿರಲಿಲ್ಲ. ಇದೇ ಮೊದಲ ಪ್ರಕರಣ.

ಹೆಚ್ಚು ಬೆಲೆ ಇರುವ ಈ ಡ್ರಗ್ ಅನ್ನು ಸಾಮಾನ್ಯವಾಗಿ ಹೈ ಎಂಡ್ ಪಾರ್ಟಿಗಳಲ್ಲಿ ಸೀಜ್ ಮಾಡಲಾಗ್ತಿತ್ತು. ಅಂತಾ ಘಟನೆ ಇದುವರೆಗು ಕರ್ನಾಟಕದಲ್ಲಿ ನಡೆದಿರಲಿಲ್ಲ.‌ ವಿದೇಶಗಳಲ್ಲಿ ಹೆಚ್ಚು ಕಂಡುಬರುವ ಈ ಡ್ರಗ್ ಅನ್ನು ಈಗ ಬೆಂಗಳೂರು ಪೊಲೀಸರು ಸೀಜ಼್ ಮಾಡಿದ್ದಾರೆ. ಹೈ ಎಂಡ್ ಪಾರ್ಟಿಗಳು ಮತ್ತು ಸೆಲೆಬ್ರಿಟಿಗಳಿಗೆ ಸಪ್ಲೈ ಮಾಡಲು ನೈಜಿರೀಯ ಮೂಲದ ಡ್ರಗ್ ಪೆಡ್ಲರ್ಗಳು ತರಿಸಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ಮಾಲ್ ಸಮೇತ ಇಬ್ಬರನ್ನ ಬಂಧಿಸಿದ್ದೇವೆ ಎಂದು ಗೋವಿಂದಪುರ ಪೊಲೀಸರು ಮಾಹಿತಿ ನೀಡಿದ್ದಾರೆ.

ನೈಜೀರಿಯ ಮೂಲದ ಸಿಕ್ಸ್ಟಸ್ ಉಕ್ಚೆಕ್ ಮತ್ತು ಚುಕ್ವಾಡ್ಬೆಮ್ ಬಂಧಿತ ಆರೋಪಿಗಳು. ಬಂಧಿತರಿಂದ 3 ಕೋಟಿ ಮೌಲ್ಯದ 1.5 ಕೆಜಿ ಎಂಡಿಎಂಎ ಕ್ರಿಸ್ಟಲ್, 120 ಗ್ರಾಂ ಬ್ಲಾಕ್ ಎಂಡಿಎಂಎ , 16.5 ಕೆಜಿ ಎಂಡಿಎಂಎ ಮಿಕ್ಸ್ಡ್ ವೀಡ್ ಆಯಿಲ್, 300 ಗ್ರಾಂ ವೀಡ್ ಆಯಿಲ್ ವಶಪಡಿಸಿಕೊಳ್ಳಲಾಗಿದೆ. ಬಂಧಿತರು ವಿದೇಶದಿಂದ ಡ್ರಗ್ಸ್ ತರಿಸಿಕೊಂಡು, ಸೆಲೆಬ್ರಿಟಿಗಳು, ಉದ್ಯಮಿಗಳು , ಕಾಲೇಜು ವಿದ್ಯಾರ್ಥಿಗಳಿಗೆ ಸಪ್ಲೈ ಮಾಡ್ತಿದ್ದರು ಎಂದು ಗೋವಿಂದಪುರ ಪೊಲೀಸರು ಮಾಹಿತಿ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...