alex Certify ರಾಜ್ಯ ಸರ್ಕಾರದಿಂದ 2024 ನೇ ಸಾಲಿನ ‘ಸಾರ್ವತ್ರಿಕ ರಜೆ’, ಪರಿಮಿತ ರಜೆ ದಿನಗಳ ಪಟ್ಟಿ ಬಿಡುಗಡೆ : ಇಲ್ಲಿದೆ ಮಾಹಿತಿ | Karnataka Holiday List 2024 | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯ ಸರ್ಕಾರದಿಂದ 2024 ನೇ ಸಾಲಿನ ‘ಸಾರ್ವತ್ರಿಕ ರಜೆ’, ಪರಿಮಿತ ರಜೆ ದಿನಗಳ ಪಟ್ಟಿ ಬಿಡುಗಡೆ : ಇಲ್ಲಿದೆ ಮಾಹಿತಿ | Karnataka Holiday List 2024

ಬೆಂಗಳೂರು : ರಾಜ್ಯ ಸರ್ಕಾರವು 2024ನೇ ಸಾಲಿಗೆ ಮಂಜೂರು ಮಾಡಿರುವ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇದೀಗ ರಾಜ್ಯಪತ್ರ ಹೊರಡಿಸಿದೆ.

ಸಾರ್ವಜನಿಕ ಮಾಹಿತಿಗಾಗಿ ಈ ಕೆಳಕಂಡಂತೆ ಪ್ರಕಟಿಸಲಾಗಿ ಎಲ್ಲಾ ಎರಡನೇ ಶನಿವಾರ, ನಾಲ್ಕನೇ ಶನಿವಾರ ಮತ್ತು ಭಾನುವಾರಗಳು ಹಾಗೂ ಈ ಕೆಳಕಂಡ ದಿನಗಳು

ಇಲ್ಲಿದೆ ರಾಜ್ಯ ಸರ್ಕಾರಿ ರಜೆ ಪಟ್ಟಿ

ದಿನಾಂಕ 15-01-2024 ಸೋಮವಾರ – ಉತ್ತರಾಯಣ ಪುಣ್ಯಕಾಲ, ಮಕರ ಸಂಕ್ರಾಂತಿ
ದಿನಾಂಕ 26-01-2024 ಶುಕ್ರವಾರ-ಗಣರಾಜ್ಯೋತ್ಸ
ದಿನಾಂಕ 08-03-2024- ಶುಕ್ರವಾರ – ಮಹಾಶಿವರಾತ್ರಿ
ದಿನಾಂಕ 29-03-2024ರಂದು ಶುಕ್ರವಾರ -ಗುಡ್ ಪ್ರೈಡೆ
ದಿನಾಂಕ 09-04-2024 – ಮಂಗಳವಾರ – ಯುಗಾದಿ ಹಬ್ಬ
ದಿನಾಂಕ 11-04-2024 – ಗುರುವಾರ ಖುತುಬ್ ಎ ರಂಜಾನ್
ದಿನಾಂಕ 01-05-2024ರಂದು ಬುಧವಾರ – ಕಾರ್ಮಿಕರ ದಿನಾಚರಣೆ
ದಿನಾಂಕ 10-05-2024ರ ಶುಕ್ರವಾರ – ಬಸವ ಜಯಂತಿ, ಅಕ್ಷಯ ತೃತೀಯ
ದಿನಾಂಕ 17-06-2024ರ ಸೋಮವಾರ – ಬಕ್ರೀದ್
ದಿನಾಂಕ 17-07-2024ರ ಬುಧವಾರ – ಮೋಹರಂ ಕಡೇ ದಿನ
ದಿನಾಂಕ 15-08-2024ರ ಗುರುವಾರ – ಸ್ವಾತಂತ್ರ್ಯ ದಿನಾಚರಣೆ
ದಿನಾಂಕ 07-09-2024ರ ಶನಿವಾರ – ವರಸಿದ್ಧಿ ವಿನಾಯಕ ವ್ರತ
ದಿನಾಂಕ 16-09-2024ರ ಸೋಮವಾರ – ಈದ್ ಮಿಲಾದ್
ದಿನಾಂಕ 02-10-2024ರ ಬುಧವಾರ – ಗಾಂಧಿ ಜಯಂತಿ, ಮಹಾಲಯ ಅಮವಾಸೆ
ದಿನಾಂಕ 11-10-2024ರ ಶುಕ್ರವಾರ – ಮಹಾನವಮಿ, ಆಯುಧಪೂಜೆ
ದಿನಾಂಕ 17-10-2024ರ ಗುರುವಾರ – ಮಹರ್ಷಿ ವಾಲ್ಮೀಕಿ ಜಯಂತಿ
ದಿನಾಂಕ 31-10-2024ರ ಗುರುವಾರ – ನರಕ ಚತುರ್ದಶಿ
ದಿನಾಂಕ 01-11-2024ರ ಶುಕ್ರವಾರ – ಕನ್ನಡ ರಾಜ್ಯೋತ್ಸವ
ದಿನಾಂಕ 02-11-2024ರ ಶನಿವಾರ – ಬಲಿಪಾಡ್ಯಮಿ, ದಿಪಾವಳಿ
ದಿನಾಂಕ 18-11-2024ರ ಸೋಮವಾರ – ಕನಕದಾಸ ಜಯಂತಿ
ದಿನಾಂಕ 25-12-2024ರ ಬುಧವಾರ – ಕ್ರಿಸ್ ಮಸ್

ಸೂಚನೆ:

1. ಈ ರಜಾ ಪಟ್ಟಿಯಲ್ಲಿ ಭಾನುವಾರಗಳಂದು ಬರುವ ಡಾ|| ಬಿ. ಆರ್. ಅಂಬೇಡ್ಕರ್ ಜಯಂತಿ (14.04.2024) ಮತ್ತು ಮಹಾವೀರ ಜಯಂತಿ (21.04.2024) ಹಾಗೂ ಎರಡನೇ ಶನಿವಾರದಂದು ಬರುವ ವಿಜಯದಶಮಿ (12.10.2024) ಈ ರಜೆ ಪಟ್ಟಿಯಲ್ಲಿ ನಮೂದಿಸಿರುವುದಿಲ್ಲ.

2. ಸಾರ್ವತ್ರಿಕ ರಜಾ ದಿನಗಳಲ್ಲಿ ರಾಜ್ಯಾದ್ಯಂತ ಸರ್ಕಾರಿ ಕಛೇರಿಗಳು ಮುಚ್ಚಲ್ಪಡುತ್ತವೆ. ಕಛೇರಿಯ ಜರೂರು ಕೆಲಸವನ್ನು ವಿಲೇವಾರಿ ಮಾಡುವ ಬಗ್ಗೆ ಇಲಾಖಾ ಮುಖ್ಯಸ್ಥರುಗಳು ಸೂಕ್ತ ವ್ಯವಸ್ಥೆ ಮಾಡತಕ್ಕದ್ದು.
3. ಈ ಪಟ್ಟಿಯಲ್ಲಿ ಸೇರಿಸಲಾಗಿರುವ ಮುಸಲ್ಮಾನ ಬಾಂಧವರ ಹಬ್ಬಗಳು ನಿಗಧಿತ ದಿನಾಂಕದಂದು ಬೀಳದಿದ್ದರೆ ಸರ್ಕಾರಿ ಸೇವೆಯಲ್ಲಿರುವ ಮುಸಲ್ಮಾನ ಬಾಂಧವರಿಗೆ ನಿಗಧಿತ ರಜೆಗೆ ಬದಲಾಗಿ ಹಬ್ಬದ ದಿವಸ ರಜಾ ಮಂಜೂರು ಮಾಡಬಹುದು.

4. ದಿನಾಂಕ:03.09.2024 (ಮಂಗಳವಾರ) ಕೈಲ್ ಮೂಹೂರ್ತ, ದಿನಾಂಕ:17.10.2024 (ಗುರುವಾರ) ತುಲಾ ಸಂಕ್ರಮಣ ಹಾಗೂ ದಿನಾಂಕ:14.12.2024 (ಶನಿವಾರ) ಹುತ್ತರಿ ಹಬ್ಬವನ್ನು ಆಚರಿಸಲು ಕೊಡಗು ಜಿಲ್ಲೆಗೆ ಮಾತ್ರ ಅನ್ವಯವಾಗುವಂತೆ ಸ್ಥಳೀಯ ಸಾರ್ವತ್ರಿಕ ರಜೆಯನ್ನು ಘೋಷಿಸಿದೆ.

2024ನೇ ಸಾಲಿನಲ್ಲಿ ರಾಜ್ಯ ಸರ್ಕಾರಿ ನೌಕರರ ಪರಿಮಿತ ರಜೆಗಳ ಪಟ್ಟಿ

ದಿನಾಂಕ 01-01-2024 : ಸೋಮವಾರ – ನೂತನ ವರ್ಷಾರಂಭ

ದಿನಾಂಕ 25-03-2024 : ಸೋಮವಾರ – ಹೋಳಿಹಬ್ಬ

ದಿನಾಂಕ 30-03-2024 : ಶನಿವಾರ – ಹೋಲಿ ಸ್ಯಾಟರ್ ಡೇ

ದಿನಾಂಕ 05-04-2024 : ಶುಕ್ರವಾರ – ಜುಮತ್ ಉಲ್ ವಿದಾ

ದಿನಾಂಕ 06-04-2024 : ಶನಿವಾರ- ಷಬ್ ಎ ಖಾದರ್

ದಿನಾಂಕ 17-04-2024 : ಬುಧವಾರ – ಶ್ರೀರಾಮನವಮಿ

ದಿನಾಂಕ 25-05-2024: ಗುರುವಾರ – ಬುದ್ಧ ಪೂರ್ಣಿಮ

ದಿನಾಂಕ 16-08-2024: ಶುಕ್ರವಾರ – ಶ್ರೀ ವರಮಹಾಲಕ್ಷ್ಮಿ ವ್ರತ

ದಿನಾಂಕ 19-08-2024 : ಸೋಮವಾರ – ಋಗ್ ಉಪಕರ್ಮ, ಯಜುರ್ ಉಪ ಕರ್ಮ

ದಿನಾಂಕ 20-08-2024: ಮಂಗಳವಾರ – ಬ್ರಹ್ಮಶ್ರೀ ನಾರಾಯಣಗುರು ಜಯಂತಿ

ದಿನಾಂಕ 26-08-2024 : ಸೋಮವಾರ- ಶ್ರೀಕೃಷ್ಣ ಜನ್ಮಾಷ್ಟಮಿ

ದಿನಾಂಕ 06-09-2024 : ಶುಕ್ರವಾರ – ಸ್ವರ್ಣಗೌರಿ ವ್ರತ

ದಿನಾಂಕ 17-09-2024 : ಮಂಗಳವಾರ – ವಿಶ್ವಕರ್ಮ ಜಯಂತಿ

ದಿನಾಂಕ 15-11-2024 : ಶುಕ್ರವಾರ – ಗುರುನಾನಕ್ ಜಯಂತಿ

ದಿನಾಂಕ 24-12-2024 : ಮಂಗಳವಾರ – ಕ್ರಿಸ್ ಮಸ್ ಈವ್

ಸೂಚನೆ:

1.ಮಧ್ವ ನವಮಿ (18.02.2024), ಷಬ್-ಎ-ಬರಾತ್ (25.02.2024), ಶ್ರೀ ಶಂಕರಾಚಾರ್ಯ ಜಯಂತಿ, ಶ್ರೀ ರಾಮಾನುಜಾಚಾರ್ಯ ಜಯಂತಿ (12.05.2024), ಕನ್ಯಾ ಮರಿಯಮ್ಮ ಜಯಂತಿ (08.09.2024) ಮತ್ತು ತಿರು ಓಣಂ (15.09.2024) ಭಾನುವಾರದಂದು, ಸೌರಮಾನ ಯುಗಾದಿ/ ದೇವರ ದಾಸೀಮಯ್ಯ ಜಯಂತಿ (13.04.2024) ಹಾಗೂ ಹುತ್ತರಿ ಹಬ್ಬ (14.12.2024) ಎರಡನೇ ಶನಿವಾರದಂದು ಬರುವುದರಿಂದ ಈ ರಜೆ ಪಟ್ಟಿಯಲ್ಲಿ ನಮೂದಿಸಿರುವುದಿಲ್ಲ.

2. ಅನಂತ ಪದ್ಮನಾಭ ವ್ರತ (16.09.2024) ಸೋಮವಾರ ಈದ್-ಮಿಲಾದ್ ಹಾಗೂ ತುಲಾ ಸಂಕ್ರಮಣ (17.10.2024) ಗುರುವಾರ ಮಹರ್ಷಿ ವಾಲ್ಮೀಕಿ ಜಯಂತಿ ನಿಮಿತ್ತ ಘೋಷಿಸಿರುವ ಸಾರ್ವತ್ರಿಕ ರಜಾ ದಿನಗಳಂದು ಬರುವುದರಿಂದ ಈ ರಜೆ ಪಟ್ಟಿಯಲ್ಲಿ ನಮೂದಿಸಿರುವುದಿಲ್ಲ .

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...